ಭಾರತದ 'ಬೆಲ್ಲದ ರಾಜಧಾನಿ' ಯಾವುದು ಗೊತ್ತಾ? ಏಷ್ಯಾದ ಅತಿ ದೊಡ್ಡ ಬೆಲ್ಲದ ಮಾರುಕಟ್ಟೆ ಇರೋದು ಇಲ್ಲೇ!

Published : Oct 24, 2026, 01:08 PM IST

ಭಾರತೀಯರ ಮನೆಗಳಲ್ಲಿ ಸಕ್ಕರೆಗಿಂತ ಬೆಲ್ಲದ ಬಳಕೆ ಹೆಚ್ಚು. ಆದರೆ, ನಮ್ಮ ದೇಶದಲ್ಲಿ ಅತಿ ಹೆಚ್ಚು ಬೆಲ್ಲ ಎಲ್ಲಿ ಉತ್ಪಾದನೆಯಾಗುತ್ತದೆ ಗೊತ್ತಾ? ವಿಶ್ವದ ಅತಿದೊಡ್ಡ ಬೆಲ್ಲದ ಮಾರುಕಟ್ಟೆ ನಮ್ಮ ಭಾರತದಲ್ಲೇ ಇದೆ. ಮಂಡ್ಯಕ್ಕೆ ಯಾವ ಸ್ಥಾನವಿದೆ? ಆ ನಗರದ ಬಗ್ಗೆ ಮಾಹಿತಿ ತಿಳಿಯಿರಿ.

PREV
14
ದೇಶದ ಬೆಲ್ಲದ ರಾಜಧಾನಿ

ಭಾರತೀಯ ಅಡುಗೆಯಲ್ಲಿ ಮತ್ತು ಸಂಪ್ರದಾಯದಲ್ಲಿ 'ಬೆಲ್ಲ'ಕ್ಕೆ (Jaggery) ಅತ್ಯಂತ ಪವಿತ್ರ ಹಾಗೂ ಮಹತ್ವದ ಸ್ಥಾನವಿದೆ. ಹಬ್ಬ-ಹರಿದಿನಗಳಿಂದ ಹಿಡಿದು ದಿನನಿತ್ಯದ ಚಹಾ, ಸಿಹಿ ತಿನಿಸುಗಳವರೆಗೆ ಬೆಲ್ಲದ ಬಳಕೆ ಅಗಾಧ. ಆದರೆ, ಇಡೀ ಭಾರತದ 'ಬೆಲ್ಲದ ರಾಜಧಾನಿ' (Jaggery Capital of India) ಎಂದು ಯಾವ ನಗರವನ್ನು ಕರೆಯುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?

ಹೌದು, ಭಾರತದ ಮಾತ್ರವಲ್ಲದೆ, ಇಡೀ ಏಷ್ಯಾದಲ್ಲೇ ಅತಿ ದೊಡ್ಡ ಬೆಲ್ಲದ ಮಾರುಕಟ್ಟೆಯನ್ನು ಹೊಂದಿರುವ ಆ ಹೆಗ್ಗಳಿಕೆಯ ನಗರ ಉತ್ತರ ಪ್ರದೇಶದ ‘ಮುಜಫರ್‌ನಗರ’ (Muzaffarnagar).

24
ಮುಜಫರ್‌ನಗರಕ್ಕೆ ಏಕೆ ಈ ಹೆಸರು ಬಂತು?

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿರುವ ಮುಜಫರ್‌ನಗರವನ್ನು ಅಧಿಕೃತವಾಗಿ ಭಾರತದ ಬೆಲ್ಲದ ನಗರ ಅಥವಾ ಬೆಲ್ಲದ ರಾಜಧಾನಿ (ಭಾರತದ ಸಕ್ಕರೆ ಬಟ್ಟಲು) ಎಂದು ಗುರುತಿಸಲಾಗುತ್ತದೆ. ಇಲ್ಲಿ ಬೆಳೆಯುವ ಕಬ್ಬು ಮತ್ತು ಉತ್ಪಾದನೆಯಾಗುವ ಸಾವಯವ, ಸಾಂಪ್ರದಾಯಿಕ ಬೆಲ್ಲಕ್ಕೆ ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆಯಿದೆ.

ಏಷ್ಯಾದ ಬೃಹತ್ ಮಂಡಿ: ಮುಜಫರ್‌ನಗರದಲ್ಲಿರುವ ಬೆಲ್ಲದ ಮಂಡಿ (Jaggery Market) ಏಷ್ಯಾದಲ್ಲೇ ಅತಿ ದೊಡ್ಡ ಸಗಟು ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೈನಂದಿನ ವಹಿವಾಟು: ಕಬ್ಬು ಕಟಾವಿನ ಸೀಸನ್‌ನಲ್ಲಿ ಇಲ್ಲಿ ಪ್ರತಿದಿನ ನೂರಾರು ಟನ್ ಬೆಲ್ಲ ತಯಾರಾಗುತ್ತದೆ ಮತ್ತು ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತದೆ.

ಗುಣಮಟ್ಟ: ಇಲ್ಲಿ ವಿವಿಧ ವಿನ್ಯಾಸ, ರುಚಿ ಮತ್ತು ಆಯುರ್ವೇದ ಗುಣಗಳುಳ್ಳ ಕೆಮಿಕಲ್-ಮುಕ್ತ ನೈಸರ್ಗಿಕ ಬೆಲ್ಲವನ್ನು ಉತ್ಪಾದಿಸಿ ಜಗತ್ತಿನ ನಾನಾ ಮೂಲೆಗಳಿಗೆ ರಫ್ತು ಮಾಡಲಾಗುತ್ತದೆ.

2023ರಲ್ಲಿ ಮುಜಾಫರ್‌ನಗರದ ಬೆಲ್ಲಕ್ಕೆ ಪ್ರತಿಷ್ಠಿತ ಜಿಐ (GI) ಟ್ಯಾಗ್ ಸಿಕ್ಕಿದೆ. ಉತ್ತರ ಪ್ರದೇಶ ಸರ್ಕಾರದ 'ಒಂದು ಜಿಲ್ಲೆ ಒಂದು ಉತ್ಪನ್ನ' ಯೋಜನೆಯಲ್ಲೂ ಇದು ಸ್ಥಾನ ಪಡೆದಿದೆ. 2025ರ ಮಾರ್ಚ್‌ನಲ್ಲಿ ಬರೋಬ್ಬರಿ 30 ಮೆಟ್ರಿಕ್ ಟನ್ ಜಿಐ-ಟ್ಯಾಗ್ ಇರುವ ಮುಜಾಫರ್‌ನಗರದ ಬೆಲ್ಲ ಬಾಂಗ್ಲಾದೇಶಕ್ಕೆ ರಫ್ತಾಗಲಿದೆ.

34
ದಕ್ಷಿಣ ಭಾರತದ ಪ್ರಮುಖ ಬೆಲ್ಲದ ಮಾರುಕಟ್ಟೆಗಳು:

ಉತ್ತರ ಭಾರತದಲ್ಲಿ ಮುಜಫರ್‌ನಗರ ಮುಂಚೂಣಿಯಲ್ಲಿದ್ದರೆ, ದಕ್ಷಿಣ ಭಾರತದಲ್ಲೂ ಪ್ರಮುಖ ಬೆಲ್ಲದ ಮಾರುಕಟ್ಟೆಗಳಿವೆ:

ಮಂಡ್ಯ (ಕರ್ನಾಟಕ): ನಮ್ಮ ಕರ್ನಾಟಕದ ಹೆಮ್ಮೆಯ ಸಕ್ಕರೆ ನಗರಿ ಮಂಡ್ಯ ಕೂಡ ಗುಣಮಟ್ಟದ ಕಬ್ಬು ಮತ್ತು ಆಲೆಮನೆಗಳಲ್ಲಿ ತಯಾರಾಗುವ ರುಚಿಕರ ಸಾವಯವ ಬೆಲ್ಲಕ್ಕೆ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿದೆ. ಇನ್ನು ಮಂಡ್ಯವನ್ನು ಕರ್ನಾಟಕದ ಸಕ್ಕರೆ ನಾಡು ಎಂದು ಕರೆದರೂ, ಅತಿಹೆಚ್ಚು ಸಕ್ಕರೆಯನ್ನು ಬೆಳಗಾವಿ ಜಿಲ್ಲೆಯಲ್ಲಿ ಉತ್ಪಾದನೆ ಮಾಡಲಾಗುತ್ತದೆ.

ಅನಕಾಪಲ್ಲಿ (ಆಂಧ್ರಪ್ರದೇಶ): ಮುಜಫರ್‌ನಗರದ ನಂತರ ಭಾರತದ ಎರಡನೇ ಅತಿ ದೊಡ್ಡ ಬೆಲ್ಲದ ಮಾರುಕಟ್ಟೆ ಎಂಬ ಕೀರ್ತಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಸಮೀಪದ ‘ಅನಕಾಪಲ್ಲಿ’ಗೆ (Anakapalle) ಸಲ್ಲುತ್ತದೆ.

44
ಆರೋಗ್ಯಕ್ಕೆ ಬೆಲ್ಲದ ಪ್ರಯೋಜನಗಳು:

ಸಕ್ಕರೆಗಿಂತ ಬೆಲ್ಲ ಆರೋಗ್ಯಕ್ಕೆ ಅತ್ಯಂತ ಹಿತಕಾರಿ. ಇದರಲ್ಲಿ ಕಬ್ಬಿಣದ ಅಂಶ (Iron), ಮೆಗ್ನೀಸಿಯಮ್, ಪೊಟ್ಯಾಶಿಯಮ್ ಹೇರಳವಾಗಿದ್ದು, ರಕ್ತಹೀನತೆ ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಚಳಿಗಾಲದಲ್ಲಂತೂ ಬೆಲ್ಲ ಸೇವನೆ ದೇಹಕ್ಕೆ ನೈಸರ್ಗಿಕ ಉಷ್ಣತೆ ಹಾಗೂ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories