ಡಬಲ್ ಮಾಸ್ಕ್ ಅವಶ್ಯಕವೇ? ಮನೆಯಲ್ಲೂ ಧರಿಸಬೇಕಾ? ಕೊರೋನಾ ಆತಂಕಕ್ಕೆ AIIMS ಉತ್ತರ!

First Published Apr 29, 2021, 6:25 PM IST

ಕೊರೋನಾ 2ನೇ ಅಲೆಯಿಂದ ದೇಶದ ಜನರು ಅನುಭವಿಸುತ್ತಿರುವ ಸಂಕಷ್ಟಗಳು ಎಲ್ಲರಿಗೂ ತಿಳಿದಿದೆ. ಇದರ ನಡುವೆ ಹಲವರಿಗೆ ಕೊರೋನಾ ಕುರಿತು ಅನಗತ್ಯ ಆತಂಕ ಕೂಡ ಎದುರಾಗಿದೆ. ಬೆಡ್ ಇಲ್ಲ, ಆಕ್ಸಿಜನ್ ಇಲ್ಲ ಅನ್ನೋ ಈ ಪರಿಸ್ಥಿತಿಯಲ್ಲಿ ಕೊರೋನಾ ಅಂಟಿಕೊಳ್ಳದಂತೆ ಏನುಮಾಡಬೇಕು? ಸೋಂಕಿತರು ಯಾವ ಮುಂಜಾಗ್ರತೆ ತೆಗೆದುಕೊಳ್ಳಬೇಕು, ಡಬಲ್ ಮಾಸ್ಕ್, ಮನೆಯಲ್ಲೂ ಮಾಸ್ಕ್ ಕುರಿತ ಗೊಂದಲ ಹಾಗೂ ಹಲವು ಪ್ರಶ್ನೆಗಳಿಗೆ AIIMS ವೈದ್ಯರು ಉತ್ತರಿಸಿದ್ದಾರೆ.

ಭಾರತ ಕೊರೋನಾ ಬಿರುಗಾಳಿಗೆ ಗಿರ ಗಿರನೆ ತಿರುಗುತ್ತಿದೆ. ಪ್ರಕರಣಗಳ ಸಂಖ್ಯೆ ರಾಕೆಡ್ ವೇಗದಲ್ಲಿ ಏರುತ್ತಿದೆ. ಸಾವಿನ ಸಂಖ್ಯೆ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊರೋನಾದಿಂದ ದೂರ ಉಳಿಯಲು, ಕೊರೋನಾ ಸೋಂಕಿತರು, ಕುಟುಂಬಸ್ಥರು ತಮ್ಮ ಗೊಂದಲ , ಆತಂಕಗಳನ್ನು ಪರಿಹರಿಸಲು ಯಾವ ವೈದ್ಯರು ಲಭ್ಯವಿಲ್ಲ. ಎಲ್ಲಾ ವೈದ್ಯರು ಕೊರೋನಾ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಪದೇ ಪದೇ ಕೇಳಿಬರುತ್ತಿರುವ ಹಲವು ಪ್ರಶ್ನೆಗಳಿಗೆ ಏಮ್ಸ್ ಕೋವಿಡ್ ಆಸ್ಪತ್ರೆ ಮುಖ್ಯಸ್ಥ ಡಾ.ಅಂಜನ್ ತ್ರಿಖ ಉತ್ತರ ನೀಡಿ, ಗೊಂದಲ ಬಗೆ ಹರಿಸುವ ಪ್ರಯತ್ನ ಮಾಡಿದ್ದಾರೆ.
undefined
1 ಕೋವಿಡ್ ಪಾಸಿಟೀವ್ ಆಗದಂತೆ ನೋಡಿಕೊಳ್ಳಲು ಏನುಮಾಡಬೇಕು?ಕೊರೋನಾದಿಂದ ದೂರ ಇರಲು ಮೊದಲ ಮದ್ದು, ಯಾರೊಂದಿಗೆ ಸಂಪರ್ಕ ಹೊಂದದೆ, ಮನೆಯೊಳಗೆ ಇರುವುದು ಅತೀ ಅಗತ್ಯ. ಸಾರ್ವಜನಿಕ ಪ್ರದೇಶಗಳಿಗೆ ತೆರಳುವುದು, ಜನ ಸಂದಣಿ ಪ್ರದೇಶದಿಂದ ದೂರ ಇರುವುದು ಅತೀ ಉತ್ತಮ. ಅತೀ ಅವಶ್ಯಕ ಅಥವಾ ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಬಂದಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ತೊಳೆಯವುದು, ಹೊರಗೆ ಹೋಗಿ ಮನೆಗೆ ಮರಳಿದಾಗ ಮುಖ, ಕೈ ಕಾಲು ಸೋಪಿನಿಂದ ತೊಳೆಯುವುದು ಅತೀ ಮುಖ್ಯ. ಇನ್ನು ಮನೆಯಲ್ಲೂ ಮಾಸ್ಕ್ ಧರಿಸುವುದು ಉತ್ತಮ. ಕಾರಣ ನೀವು ಕೊರೋನಾ ಹರಡುವವರಾಗಬಾರದು, ಜೊತೆಗೆ ಮನೆಯಲ್ಲಿ ಕೊರೋನಾ ರೋಗ ಲಕ್ಷಣಗಳಿಲ್ಲದಿದ್ದರೂ ಪಾಸಿಟೀವ್ ಇರುವ ವ್ಯಕ್ತಿಗಳಿಂದ ನಿಮಗೆ ಕೊರೋನಾ ಹರಡದಂತೆ ನೋಡಿಕೊಂಡರ ಕೊರೋನಾದಿಂದ ದೂರ ಇರಬಹುದು.
undefined
2 ಕೊರೋನಾ ರೋಗಲಕ್ಷಗಳಿಲ್ಲದೆ ಪಾಸೀಟವ್ ಬಂದರೆ ಏನುಮಾಡಬೇಕು?ಯಾವುದೇ ರೋಗಲಕ್ಷಣಗಳಿಲ್ಲದೆ ಪಾಸಿಟೀವ್ ಬಂದರೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರವಹಿಸಬೇಕು. ತಕ್ಷಣವೇ ಐಸೋಲೇಶನ್‌ಗೆ ಒಳಗಾಗಬೇಕು. ಯಾರೊಂದಿಗೆ ಸಂಪರ್ಕ ಇರಬಾರದು. ಇದರಿಂದ ನಿಮ್ಮಿಂದ ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು. ಗೆಳೆಯರು, ಸಹೋದ್ಯೋಗಿಗಳಿಂದ ದೂರವಿರಿ. ಸಂಪೂರ್ಣಾಗಿ ಐಸೋಲೇಶನ್‌ಗೆ ಒಳಗಾಗಿ ಕೆಲಸಕ್ಕೆ ಹೋಗುವುದನ್ನು, ಅಗತ್ಯ ವಸ್ತು ಖರೀದಿಗೆ ಹೋಗುವುದನ್ನು ನಿಲ್ಲಿಸಿ.
undefined
3 ಕೊರೋನಾ ರೋಗಲಕ್ಷಣ ಜೊತೆಗೆ ಪಾಸಿಟೀವ್ ಆಗಿದ್ದರೆ ಅಥವಾ ಜ್ವರ, ಶೀತ, ಕೆಮ್ಮು ಇದ್ದರೆ ಏನುಮಾಡಬೇಕು?ಕೊರೋನಾ ರೋಗ ಲಕ್ಷಣ ಜೊತೆಗೆ ಪಾಸಿಟೀವ್ ಆಗಿದ್ದಲ್ಲಿ, ಸಾಮಾನ್ಯ ಔಷಧಿ ಅಗತ್ಯವಿದೆ. ಜ್ವರ, ಕೆಮ್ಮು ಹಾಗೂ ಶೀತದ ಔಷದಿ ಅತ್ಯವಶ್ಯಕ. ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ. ಯಾರೊಂದಿಗೆ ಸಂಪರ್ಕ ಇಟ್ಟುಕೊಳ್ಳಬೇಡಿ. ಐಸೋಲೇಶನ್ ಕಡ್ಡಾಯ.
undefined
4 ಮನೆಯಲ್ಲೇ ಐಸೋಲೇಶನ್ ಅಥವಾ ಆಸ್ಪತ್ರೆ ದಾಖಲು? ಯಾವಾಗ ಮತ್ತು ಹೇಗೆ?ಮನೆಯಲ್ಲಿ ಐಸೋಲೇಶನ್ ಪ್ರಾಥಮಿಕವಾಗಿದೆ. ಆದರೆ ಹಲವರಿಗೆ ಮನೆಯಲ್ಲಿ ಐಸೋಲೇಶನ್ ಕಷ್ಟ. ಹಲವು ಸದಸ್ಯರ ನಡುವೆ, ಹೆಚ್ಚಿನ ಕೋಣೆಗಳಿಲ್ಲದಿದ್ದರೆ, ಹೋಮ್ ಐಸೋಲೇಶನ್ ಕಷ್ಟ. ಹೀಗಿದ್ದಲಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗುವುದು ಸೂಕ್ತ. ಆದರೆ ಉಸಿರಾಟದ ಸಮಸ್ಯೆ, ಆಮ್ಲಜನಕ ಪ್ರಮಾಣ ಕಡಿಮೆಯಾದರೆ, ಆರೋಗ್ಯ ಕ್ಷೀಣಿಸುತ್ತಿದ್ದರೆ, ಆಸ್ಪತ್ರೆ ದಾಖಲಾಗುವುದು ಒಳಿತು.
undefined
5 ನಮ್ಮ ಆಮ್ಲಜನಕ ಪ್ರಮಾಣ ಸುಧಾರಿಸಿಕೊಳ್ಳುವುದು ಹೇಗೆ?ನಿಮ್ಮ ದೇಹದಲ್ಲಿ ಆಮ್ಲಜನಕ ಮಟ್ಟವನ್ನು ಸುಧಾರಿಸಲು, ನಿಯಮಿತವಾಗಿ ಉಸಿರಾಟದ ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಬೋರಲಾಗಿ ಮಲಗಿ ಉಸಿರನ್ನು ತೆಗೆದುಕೊಳ್ಳುವ ಮೂಲಕ ಸ್ವಲ್ಪ ಮಟ್ಟಿಗೆ ಆಕ್ಸಿಜನ್ ಲೆವೆನ್ ಸುಧಾರಿಸಿಕೊಳ್ಳಬಹುದು. ಇದರಿಂದ ಉಸಿರಾಟ ಸರಾಗವಾಗೋ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಪೂರೈಕೆಯಾಗುತ್ತದೆ.
undefined
6 ಪರಿಕ್ಷಾ ವರದಿ ಬರಲು ಸಮಯ ತೆಗೆದುಕೊಳ್ಳುತ್ತದೆ. ನನಗೆ ಪಾಸಿಟೀವ್ ಇರಬಹುದು ಅನ್ನೋ ಅನುಮಾನವಿದ್ದರೆ ಏನುಮಾಡಬೇಕು?ಕೊರೋನಾ RT PCR ಪರೀಕ್ಷಾ ವರದಿ ಬರಲು 2 ರಿಂದ 3 ದಿನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪರೀಕ್ಷೆ ನೀಡಿ ಐಸೋಲೇಶನ್‌ಗೆ ಒಳಗಾಗಿ. ಪರೀಕ್ಷಾ ವರದಿ ನೆಗಟೀವ್ ಅಥವಾ ಪಾಸಿಟೀವ್ ಇರಬಹುದು. ಆದರೆ ನಿಮ್ಮಿಂದ ಇತರರಿಗೆ ಅಥವಾ ಇತರರಿಂದ ನೀವು ಕೊರೋನಾ ಹರಡುವ ಜಾಲದಲ್ಲಿ ಸಿಲುಕಬೇಡಿ.
undefined
7 ಕೊರೋನಾ ವೈರಸ್ ಸೋಂಕು ತಪ್ಪಿಸಲು ಯಾವುದೇ ರೋಗನಿರೋಧಕ ಔಷಧಿ ಇದೆಯಾ ?ಕೊರೋನಾ ವೈರಸ್ ಸೋಂಕಿನಿಂದ ದೇಹದೊಳಕ್ಕೆ ಪ್ರವೇಸಿಸಿದಂತೆ ತಡೆಯಬಲ್ಲ ರೋಗನಿರೋಧಕ ಔಷಧಿಗಳ ಪ್ರಯೋಗ, ಅಭಿವೃದ್ಧಿಗಳು ನಡೆಯುತ್ತಿದೆ. ಸದ್ಯ ಭಾರತ ಹಾಗೂ ಇತರ ದೇಶದ ಅಭಿವೃದ್ಧಿ ಪಡಿಸಿರುವ ಲಸಿಕೆ ಅತ್ಯುತ್ತಮವಾಗಿದ್ದು, ಈ ಲಸಿಕೆ ಮೂಲಕ ಕೊರೋನ ಅಪಾಯಿಂದ ಪಾರಾಗಬಹುದು. ಲಸಿಕೆ ಪಡದರೆ ಕೊರೋನಾ ತಗುಲುವುದಿಲ್ಲ ಎಂದರ್ಥವಲ್ಲ. ಅಪಾಯದ ಮಟ್ಟ ಕಡಿಮೆ . ಮುನ್ನಚ್ಚೆರಿಕೆ ಅಗತ್ಯ.
undefined
8 ಮನೆಯಲ್ಲಿ ಮಾಸ್ಕ್ ಧರಿಸುವುದು ಅವಶ್ಯಕವೇ?ಹೌದು, ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಿದೆ. ಮನೆಯಲ್ಲಿ ಮಾಸ್ಕ್ ಹಾಕುವುದರಿಂದ ಕೊರೋನಾದಿಂದ ದೂರ ಉಳಿಯಲು ಸಾಧ್ಯವಿದೆ. ಮನೆಗೆಲಸಕ್ಕೆ ಬರುವ ಅಥವಾ ಮನೆಯವರು ಹೊರಗಡೆ ಕೆಲಸಕ್ಕೆ ಹೋಗಿ ಬರುವ, ಅಥವ ಇನ್ಯಾವುದೋ ಕಾರಣಕ್ಕೆ ಮನೆಯಿಂದಲಹೊರಹೋಗುವ ಕಾರಣ ಮನೆಯಲ್ಲೂ ಮಾಸ್ಕ್ ಅತೀ ಅವಶ್ಯಕವಾಗಿದೆ.
undefined
9 ಡಬಲ್ ಮಾಸ್ಕ್ ಬಳಕೆ ಯಾಕೆ? ಇದರ ಅವಶ್ಯಕತೆ ಇದೆಯಾ?ಎರಡು ಮಾಸ್ಕ್ ಬಳಸುವುದರಿಂದ ಮೂಗು, ಬಾಯಿ ಸಂಪೂರ್ಣ ಕವರ್ ಆಗಲಿದೆ. ಇದರಿಂದ ಗಾಳಿಯಲ್ಲಿ ಸೋಂಕು ಇದ್ದರೂ ನಿಮ್ಮ ದೇಹ ಪ್ರವೇಶ ಸಾಧ್ಯತೆ ಕಡಿಮೆ. ಇದರಿಂದ ಹೆಚ್ಚಿನ ಸುರಕ್ಷತೆ ಸಿಗಲಿದೆ. ಕೆಲವರಿಗೆ ಡಬಲ್ ಮಾಸ್ಕ್ ಹೆಚ್ಚು ಕಿರಿಕಿರಿ ಹಾಗೂ ಉಸಿರಾಟದ ಸಮಸ್ಯೆ ರೀತಿ ಕಾಣಲಿದೆ. ಆದರೆ ಉಸಿರಾಟಕ್ಕೆ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಕೊರೋನಾದಿಂದ ದೂರ ಇರಲು ಅವಶ್ಯಕವಾಗಿದೆ.
undefined
click me!