ಉಪವಾಸ ಮುರಿದು ಸೋಂಕಿತರ ಪ್ರಾಣ ಕಾಪಾಡಿದ ಮುಸ್ಲಿಂ ವ್ಯಕ್ತಿ!

First Published Apr 18, 2021, 4:58 PM IST

ಕೊರೋನಾದ ಭಯ ಜನರಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಅನೇಕ ಮಂದಿ ತಮ್ಮ ನೆರೆ ಮನೆಯವರೊಂದಿಗೂ ಮಾತನಾಡುತ್ತಿಲ್ಲ. ಹೀಗಿರುವಾಗಲೇ ರಾಜಸ್ಥಾನದ ಉದ್‌ಪುರದಿಂದ ನಡೆದ ಘಟನೆ ಅನೇಕ ಮಂದಿಯ ಮನ ಗೆದ್ದಿದೆ. ಈ ಘಟನೆ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ. ಹೌದು ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ರಂಜಾನ್ ತಿಂಗಳ ಮಧ್ಯೆ ತನ್ನ ಉಪವಾಸ ಮುರಿದು ಸೋಂಕಿತರ ಪ್ರಾಣ ಕಾಪಾಡಿದ್ದಾರೆ. ಪ್ರತಿಯೊಬ್ಬರೂ ಈ ವ್ಯಕ್ತಿಯ ನಡೆಗೆ ಭೇಷ್ ಎಂದಿದ್ದಾರೆ.
 

ಉಪವಾಸ ಬಿಟ್ಟು ಪ್ಲಾಸ್ಮಾ ದಾನ:ಈ ಮಾನವೀಯ ನಡೆ ಅನುಸರಿಸಿದ ವ್ಯಕ್ತಿಯ ಹೆಸರು ಅಕೀಲ್ ಮನ್ಸೂರಿ. ಸೋಂಕಿತರ ಪ್ರಾಣ ಕಾಪಾಡಲು ಮುಂದೆ ಬಂದ ಈ ಯುವಕ ಒಂದು ಕ್ಷಣವೂ ತಡ ಮಾಡದೇ ರಂಜಾನ್ ತಿಂಗಳಲ್ಲಿ ಉಪವಾಸ ಬಿಟ್ಟು ಪ್ಲಾಸ್ಮಾ ದಾನ ಮಾಡಿ ಜನರ ಪ್ರಾಣ ಕಾಪಾಡಿದ್ದಾರೆ. ಅವರು ಇದಕ್ಕೂ ಮೊದಲು ಅನೇಕ ಬಾರಿ ಇದೇ ರೀತಿ ಅನೇಕರ ಪ್ರಾಣ ಕಾಪಾಡಿದ್ದಾರೆ.
undefined
ಕಳೆದ ವರ್ಷ ಕೊರೋನಾ ಮಣಿಸಿದ್ದ ಮನ್ಸೂರಿ: ನಾಲ್ಕು ದಿನದಿಂದ ಉದಯಪುರದ ಪೆಸಿಫಿಕ್ ಆಸ್ಪತ್ರೆಯಲ್ಲಿ 36 ವರ್ಷದ ನಿರ್ಮಲಾ ಹಾಗೂ 30 ವರ್ಷದ ಅಲ್ಕಾರಿಗೆ ಪ್ಲಾಸ್ಮಾದ ಅಗತ್ಯವಿತ್ತು. ಆಸ್ಪತ್ರೆ ಹಾಗೂ ಕುಟುಂಬ ಸದಸ್ಯರಿಂದ ಪ್ಲಾಸ್ಮಾ ಸಿಗುತ್ತಿರಲಿಲ್ಲ. ಈ ವಿಚಾರ ಮನ್ಸೂರಿಗೆ ತಿಳಿದ ಕೂಡಲೇ ಆಸ್ಪತ್ರೆಗೆ ತಲುಪಿ ಖುದ್ದು ದಾನ ಮಾಡಿದ್ದಾರೆ. 32 ವರ್ಷದ ಮನ್ಸೂರಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೊರೋನಾದಿಂದ ಚೇತರಿಸಿಕೊಂಡಿದ್ದರು.
undefined
ಆಸ್ಪತ್ರೆಯಲ್ಲೇ ಉಪವಾಸ ಮುರಿದರು: ಆಸ್ಪತ್ರೆ ತಲುಪಿದ ಮನ್ಸೂರಿ ಬಳಿ ವೈದ್ಯರು ನೀವೇನಾದರೂ ತಿನ್ನಬೇಕು. ಇದಾದ ಬಳಿಕವೇ ಪ್ಲಾಸ್ಮಾ ಪಡೆಯಲು ಸಾಧ್ಯ ಎಂದಿದ್ದಾರೆ. ಹೀಗಿರುವಾಗ ಮನ್ಸೂರಿ ಒಂದು ಕ್ಷಣವೂ ಯೋಚಿಸದೇ ತನ್ನ ಉಪವಾಸ ಬಿಟ್ಟಿದ್ದಾರೆ ಹಾಗೂ ಪ್ಲಾಸ್ಮಾ ದಾನ ಮಾಡಿದ್ದಾರೆ.
undefined
ಇದು ಅಲ್ಲಾಹುವಿನ ನಿಜವಾದ ಆರಾಧನೆ: ಪ್ಲಾಸ್ಮಾ ದಾನ ಮಾಡಿದ ಬಳಿಕ ಮಾತನಾಡಿದ ಮನ್ಸೂರಿ ನನ್ನ ಪಾಲಿಗೆ ಮಾನವೀಯತೆಗಿಂತ ದೊಡ್ಡ ಬೇರೊಂದಿಲ್ಲ. ಅಗತ್ಯದಲ್ಲಿರುವವರ ಸಹಾಯಕ್ಕೆ ಧಾವಿಸಬೇಕೆಂಬುವುದೇ ಅಲ್ಲಾಹು ಹೇಳಿಕೊಟ್ಟ ಮಾರ್ಗವಾಗಿತ್ತು. ತಾನು ಹಲವಾರು ಬಾರಿ ರಕ್ತದಾನ ಮಾಡಿದ್ದೇನೆ ಎಂದೂ ಅವರು ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮನ್ಸೂರಿಯ ಈ ಮಾನವೀಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
undefined
click me!