ಪುಟ್ಟ ಮಕ್ಕಳ ಮಡಿಲಲ್ಲಿ ಕೂರಿಸಿ ವಿದ್ಯಾರಂಭ ಮಾಡಿಸಿದ ಕೇರಳ ಸಿಎಂ

First Published | Oct 15, 2021, 11:39 AM IST
  • ಸಿಎಂ ಮಡಿಲಲ್ಲಿ ಕುಳಿತು ವಿದ್ಯಾರಂಭ ಮಾಡಿದ ಮಕ್ಕಳು
  • ಪುಟ್ಟ ಮಕ್ಕಳ ಕೈ ಹಿಡಿದು ಬರೆಸಿದ ಕೇರಳ ಸಿಎಂ ಪಿಣರಾಯ್ ವಿಜಯನ್

ಕೇರಳ ಸಿಎಂ ಪಿಣರಾಯ್ ವಿಜಯನ್(Pinarayi Vijayan) ವಿಜಯ ದಶಮಿಯ(Vijaya Dashami) ಶುಭ ದಿನದಂದು ಪುಟ್ಟ ಮಕ್ಕಳ ಕೈ ಹಿಡಿದು ವಿದ್ಯಾರಂಭ ಮಾಡಿಸಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಸಿಎಂ ಶಿಕ್ಷಣದ ಕುರಿತು ಬರೆದಿದ್ದಾರೆ.

ಜ್ಞಾನವು ಸಮಾಜವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಅದಕ್ಕಾಗಿಯೇ ಶಿಕ್ಷಣವನ್ನು(Education) ಬಹಳ ಮುಖ್ಯವಾದ ಸಾಮಾಜಿಕ ಚಟುವಟಿಕೆಯೆಂದು ಪರಿಗಣಿಸಲಾಗಿದೆ ಎಂದು ಸಿಎಂ ಪಿಣರಾಯ್ ಫೋಟೋ ಜೊತೆಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.

Tap to resize

ಇಂದು ಶಾಲೆಯ ಮೊದಲ ದಿನದಂದು ಅನೇಕ ಮಕ್ಕಳು ಜ್ಞಾನದ ಜಗತ್ತಿಗೆ ತಮ್ಮ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾರೆ. ನವರಾತ್ರಿಯ(Navratri) ಶುಭ ಸಂದರ್ಭ ಇಂದು, ನೇಹಾ, ನಿಯಾ, ಕನಿ ಮತ್ತು ಫಿಡೆಲ್ ತಮ್ಮ ಮಕ್ಕಳು ವಿದ್ಯಾರಂಭ ಮಾಡಿದ್ದಾರೆ.

ಕೊರೋನಾದಿಂದಾಗಿ(COVID19) ದೀರ್ಘಕಾಲದಿಂದ ಮುಚ್ಚಲಾಗಿದ್ದ ಶಾಲೆಗಳು ಕೆಲವೇ ದಿನಗಳಲ್ಲಿ ಮತ್ತೆ ತೆರೆಯಲಿರುವುದು ಒಳ್ಳೆಯ ಸುದ್ದಿ. ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಮತ್ತು ದೇಶಕ್ಕೆ ಉಜ್ವಲ ಭವಿಷ್ಯವನ್ನು ಒದಗಿಸಲು ನಾವು ಒಟ್ಟಾಗಿ ನಿಲ್ಲೋಣ. ಎಲ್ಲರಿಗೂ ಮಹಾನವಮಿ - ವಿಜಯದಶಮಿ ಶುಭಾಶಯಗಳು ಎಂದು ಬರೆದಿದ್ದಾರೆ.

Pinarayi Vijayan

ಕೇರಳ ಸಿಎಂ ಪಿಣರಾಯ್ ವಿಜಯನ್ ವಿಜಯ ದಶಮಿಯ(Vijaya Dashami) ಶುಭ ದಿನದಂದು ಪುಟ್ಟ ಮಕ್ಕಳ ಕೈ ಹಿಡಿದು ವಿದ್ಯಾರಂಭ ಮಾಡಿಸಿದ್ದಾರೆ. ಫೋಟೋಗಳನ್ನು ಹಂಚಿಕೊಂಡ ಸಿಎಂ ಶಿಕ್ಷಣದ ಕುರಿತು ಬರೆದಿದ್ದಾರೆ.

ಕಾಸರಗೋಡಿನಲ್ಲಿನ ಗ್ರಾಮಗಳ ಕನ್ನಡದ ಹೆಸರು ಬದಲಾವಣೆ ಇಲ್ಲ, ಕೇರಳ ಸರ್ಕಾರ ಸ್ಪಷ್ಟನೆ

ಕೇರಳ ಶಾಲೆಗಳು, ಕಾಲೇಜುಗಳು ಮತ್ತೆ ತೆರೆಯುತ್ತಿವೆ. ಶಾಲೆಗಳನ್ನು ನವೆಂಬರ್ 1 ರಿಂದ ಮತ್ತೆ ತೆರೆಯಲು ನಿರ್ಧರಿಸಲಾಗಿದೆ. ಆದರೆ ಕಾಲೇಜುಗಳ ವಿಭಾಗದಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅಕ್ಟೋಬರ್ 4 ರಿಂದ ಮತ್ತೆ ತರಗತಿಗಳು ಆರಂಭವಾಗಲಿದೆ. COVID-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುತ್ತಿದ್ದು ಹಾಜರಾತಿ ಕಡ್ಡಾಯ ಮಾಡಿಲ್ಲ.

ಕೇರಳ ಶಾಲೆಗಳು, ಕಾಲೇಜುಗಳು ತೆರೆಯುವ ಮೊದಲು ಕೌನ್ಸಲಿಂಗ್ ಹೊಂದುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸಮಾಲೋಚನೆ ನಡೆಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೋವಿಡ್ -19 ಅವಧಿಯಲ್ಲಿ ತರಗತಿಗಳನ್ನು ಮಾತ್ರವಲ್ಲದೆ ಸ್ನೇಹಿತರನ್ನೂ ಕಳೆದುಕೊಂಡ ನಂತರ ಈ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕಾಳಜಿಯಿಂದ ಇಂತಹ ಸೂಚನೆ ಎಲ್ಲ ವಿದ್ಯಾಕೇಂದ್ರಗಳಿಗೂ ನೀಡಲಾಗಿದೆ

Latest Videos

click me!