ದೇಶದ ಎರಡನೇ ವಂದೇ ಭಾರತ್ ಸ್ಲೀಪರ್ ರೈಲು ನೇರವಾಗಿ ವಾರಣಸಿಗೆ ಸಂಪರ್ಕ ಕಲ್ಪಿಸುತ್ತಿದೆ. ಅಕ್ಟೋಬರ್ 31 ರಿಂದ ಈ ರೈಲು ಸೇವೆ ಆರಂಭಗೊಳ್ಳುತ್ತಿದೆ. ರೈಲು ಸಮಯ ಸೇರಿದಂತೆ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಧಾರ್ಮಿಕ ಟೂರಿಸಂಗೆ ಹೆಚ್ಚಿನ ಮಹತ್ವದ ನೀಡಲಾಗುತ್ತಿದೆ. ಪರಿಣಾಮ ಹಲವು ಕ್ಷೇತ್ರಗಳಿಗೆ ನೇರ ರೈಲು ಸಂಪರ್ಕ ಕಲ್ಪಿಸಲಾಗಿದೆ. ಇದೀಗ ವಾರಣಸಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ಅಕ್ಟೋಬರ್ 31ರಿಂದ ಈ ಸೇವೆ ಲಭ್ಯವಿದೆ. ದೆಹಲಿಯಿಂದ ನೇರ ವಾರಣಸಿಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ನೀಡಲಾಗುತ್ತಿದೆ. ಈ ಮೂಲಕ ದೇಶದ ಯಾವುದೇ ರಾಜ್ಯದಿಂದ ಸುಲಭವಾಗಿ ವಾರಣಸಿ ದರ್ಶನ ಮಾಡಲು ಸಾಧ್ಯವಿದೆ.
25
8 ಗಂಟೆ ಪ್ರಯಾಣ
ದೆಹಲಿಯಿಂದ ವಾರಣಸಿ 8 ಗಂಟೆಗಳ ಪ್ರಯಾಣ. ವಂದೇ ಭಾರತ್ ರೈಲಿನ ಮೂಲಕ ಸುಲಭವಾಗಿ ಹಾಗೂ ಆರಾಮದಾಯಕವಾಗಿ ಪ್ರಯಾಣ ಸಾಧ್ಯವಿದೆ. ದೆಹೆಲಿಯಿಂದ ರಾತ್ರಿ ತೆರಳಿದರೆ ಬೆಳಗಿನ ಜಾವ ವಾರಣಸಿ ತಲುಪಲಿದೆ. ಇದರಿಂದ ವಾರಣಸಿ ದರ್ಶನ ಮತ್ತಷ್ಟು ಸುಲಭವಾಗಲಿದೆ. ಅಕ್ಟೋಬರ್ 31ಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ರೈಲಿಗೆ ಚಾಲನೆ ನೀಡುವ ಸಾಧ್ಯತೆ ಇದೆ.
35
ವಾರಣಸಿ ಸ್ಲೀಪರ್ ರೈಲು ಸಮಯ
ದೆಹಲಿ ವಾರಣಸಿ ಹಾಗೂ ವಾರಣಸಿ ದೆಹಲಿ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಖ್ಯೆ 27421 ಹಾಗೂ 27422 ಕಾರ್ಯನಿರ್ವಹಿಸಲಿದೆ. ವಾರಣಸಿಯಿಂದ ರಾತ್ರಿ 8.55ಕ್ಕೆ ಹೊರಟು ಬೆಳಗಿನ 5.55ಕ್ಕೆ ದೆಹಲಿ ತಲುಪಲಿದೆ. ಇನ್ನು ದೆಹಲಿಯಿಂದ ರಾತ್ರಿ 9.40ಕ್ಕೆ ಹೊರಟು ಬೆಳಗಿನ ದಾವ 6.45ಕ್ಕೆ ವಾರಣಸಿ ತಲುಪಲಿದೆ.
ವಾರದಲ್ಲಿ 6 ದಿನ ರೈಲು ಕಾರ್ಯನಿರ್ವಹಿಸಲಿದೆ. ಅಂದರೆ ದೆಹಲಿಯಿಂದ ಶುಕ್ರವಾರ ಹಾಗೂ ವಾರಣಸಿಯಿಂದ ಶನಿವಾರ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಲಭ್ಯವಿರುವುದಿಲ್ಲ. ಇನ್ನುಳಿದ ಎಲ್ಲಾ ದಿನ ಈ ಸೇವೆ ಲಭ್ಯವಿದೆ. ಧಾರ್ಮಿಕ ಕ್ಷೇತ್ರಗಳ ಸಂದರ್ಶನಕ್ಕೆ ಹೊಸ ರೈಲು ಸಂಪರ್ಕ ಮತ್ತಷ್ಟು ಉತ್ತೇಜನ ನೀಡಲಿದೆ.
55
ಎಸಿ ಕೋಚ್ ಸೇರಿ ಹಲವು ಸೌಲಭ್ಯ
ವಾರಣಸಿ ವಂದೇ ಭಾರತ್ ಸ್ಲೀಪರ್ ರೈಲು 16 ಕೋಚ್ ಹೊಂದಿದೆ. ಪ್ರತಿ ಕೋಚ್ ಕೂಡ ಏರ್ ಕಂಡೀಷನ್ ಸೌಲಭ್ಯವಿದೆ. ಒಂದು ಫಸ್ಟ್ ಎಸಿ ಕೋಚ್, ನಾಲ್ಕು ಸೆಕೆಂಡ್ ಎಸಿ ಕೋಚ್, ಹಾಗೂ 11 ಥರ್ಡ್ ಎಸಿ ಕೋಚ್ ಹೊಂದಿದೆ. ಒಟ್ಟು 823 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ