22 ವರ್ಷದ ಹಿಂದೂ ಹುಡುಗಿ ಹಾಗೂ 24 ವರ್ಷ ಮುಸ್ಲಿಂ ಹುಡುಗ ಪ್ರೀತಿಸಿ ಮದುವೆಗೆ ನಿರ್ಧರಿಸಿದ್ದಾರೆ. ಇತ್ತ ಮನೆಯವರೂ ಕೂಡ ಮಕ್ಕಳ ಪ್ರೀತಿಗೆ ಒಪ್ಪಿಗೆ ಸೂಚಿಸಿ ಮದುವೆಗೆ ತಯಾರಿ ನಡೆಸಿದ್ದಾರೆ.
undefined
ಮದುವೆ ಮಂಟಪದಲ್ಲಿ ಇನ್ನೇನು ಮದುವೆ ನಡೆಯಬೇಕು ಅನ್ನುವಷ್ಟರಲ್ಲೇ ಉತ್ತರ ಪ್ರದೇಶದ ಲಕ್ನೋ ಪೊಲೀಸರು ಮಂಟಪಕ್ಕೆ ಎಂಟ್ರಿಕೊಟ್ಟಿ ಮದುವೆ ನಿಲ್ಲಿಸಿದ ಘಟನೆ ನಡೆದಿದೆ.
undefined
ಎಲ್ಲರ ಒಪ್ಪಿಗೆ ಇದ್ದರೂ ಉತ್ತರ ಪ್ರದೇಶದ ಹೊಸ ಕಾನೂನು ಮಾತ್ರ ಅವಕಾಶ ನೀಡಲಿಲ್ಲ. ಲವ್ ಜಿಹಾದ್ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿಗೆ ತಂದಿದೆ.
undefined
ದುದಾ ಕಾಲೋನಿಯಲ್ಲಿನ ನಿವಾಸಿಗಳಾದ ಹಿಂದೂ ಹುಡುಗಿ ಹಾಗೂ ಮುಸ್ಲಿಂ ಹುಡುಗನ ವಿವಾಹಕ್ಕೆ ಪೋಷಕರು ಒಪ್ಪಿದ್ದರು. ಆದರೆ ನೂತನ ನಿಯಮದ ಪ್ರಕಾರ ಹಿಂದೂ ಮುಸ್ಲಿಂ ವಿವಾಹವಾಗಲು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಶನ್ ನ್ಯಾಯಾಲಯದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
undefined
ಹಿಂದೂ -ಮುಸ್ಲಿಂ ಮದುವೆ ವಿಚಾರ ತಿಳಿದ ಹಿಂದೂ ಯುವ ವಾಹಿನಿ ಸಂಘಟನೆ, ಪಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಕುರಿತು ಪರಿಶೀಲಿಸಿದ ಪೊಲೀಸ್ ನೇರವಾಗಿ ಮದುವ ಮಂಟಪಕ್ಕೆ ಆಗಮಿಸಿ ಮದುವೆ ನಿಲ್ಲಿಸಿದ್ದಾರೆ.
undefined
ಕಾನೂನಿನ ಅನ್ವಯ ಈ ಮದುವೆಗೆ ಅವಕಾಶ ನೀಡಲು ಸಾಧ್ಯವಿಲ್ಲ. ಜಿಲ್ಲಾ ನ್ಯಾಯಾಲಯದಿಂದ ಅನುಮತಿ ಪಡೆದ ಬಳಿಕ ಮದುವೆಯಾಗಲು ಪೊಲೀಸ್ ಸೂಚಿಸಿದ್ದಾರೆ.
undefined
ಇತ್ತ ಹಸಮಣೆ ಏರಲು ಸಜ್ಜಾಗಿದ್ದ ನವ ಜೋಡಿ ಇದೀಗ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದೆ. ಮದುವೆ ನಿಲ್ಲಿಸದ ಪೊಲೀಸರ ಬಳಿ ಎರಡೂ ಕುಟುಂಬದ ಪೋಷಕರು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಇಲ್ಲಿ ಯಾರೂ ಕೂಡ ಒತ್ತಾಯದ ಮದುವೆ ಆಗುತ್ತಿಲ್ಲ ಎಂದಿದ್ದಾರೆ.
undefined
ಹಿಂದೂ ಸಂಪ್ರದಾಯದಂತೆ ಮದುವೆ ನಡೆಸಲಾಗುತ್ತಿತ್ತು. ನಿಯಮದ ಪ್ರಕಾರ ನಾವು ನಡೆದುಕೊಂಡಿದ್ದೇವೆ. ನ್ಯಾಯಲಯದ ಅನುಮತಿ ಪಡೆದ ಬಳಿಕ ಅವರಿಷ್ಟದಂತೆ ಮದುವೆಗೆ ಅನುವು ಮಾಡಿಕೊಡಲಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
undefined