ಭಾರತದ ಈ ಹಳ್ಳಿಯಲ್ಲಿ ಸಿಕ್ತು ವಜ್ರದ ಖಜಾನೆ, ಗುಡ್ಡ ಕೊರೆದು ಲೂಟಿ ಹೊಡೆದ ಗ್ರಾಮಸ್ಥರು!
First Published | Nov 28, 2020, 2:21 PM ISTವಜ್ರ ಎಂಬುವುದು ಭಾರೀ ಬೆಲೆಬಾಳುವ ಕಲ್ಲು. ಜ್ಯುವೆಲ್ಲರಿ ಶಾಪ್‌ನಿಂದ ಇದನ್ನು ಖರೀದಿಸುವುದಾದರೆ ಭಾರೀ ಮೊತ್ತ ನೀಡಬೇಕಾಗುತ್ತದೆ. ಹಾಗಾದ್ರೆ ಒಂದು ಕಡೆ ಅಗೆಯುವಾಗ ನಿಮಗೆ ವಜ್ರ ಸಿಕ್ಕರೆ? ಅಲ್ಲಿ ಮತ್ತಷ್ಟು ಕೊರೆದು ವಜ್ರಗಳನ್ನು ಪಡೆಯಲು ಯತ್ನಿಸುತ್ತಾರೆ ಎಂಂಬುವುದರಲ್ಲಿ ಅನುಮಾನವಿಲ್ಲ. ಇಂತಹುದೇ ಘಟನೆ ಸದ್ಯ ನಾಗಾಲ್ಯಾಂಡ್‌ನ ಮೋನಾ ಜಿಲ್ಲೆಯ ಹಳ್ಳಿಯಲ್ಲಿ ನಡೆದಿದೆ. ವಾಂಚಿಂಗ್ ಹೆಸರಿನ ಈ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಅಲ್ಲಿನ ಗುಡ್ಡದಡಿ ವಜ್ರಗಳಿರಬಹುದೆಂಬ ಸುಳಿವು ಸಿಕ್ಕಿದೆ. ಇದನ್ನು ತಿಳಿದ ಮರುಕ್ಷಣವೇ ಗ್ರಾಮಸ್ಥರು ಗುದ್ದಲಿ, ಹಾರೆ ಹಿಡಿದು ಗುಡ್ಡದತ್ತ ಹೆಜ್ಜೆ ಹಾಕಿ, ಅಗೆಯಲಾರಂಭಿಸಿದ್ದಾರೆ. ಇನ್ನು ಅಲ್ಲಿ ಹಲವರಿಗೆ ಹೊಳೆಯುವ ಕಲ್ಲುಗಳು ಸಿಕ್ಕಿವೆ ಎನ್ನಲಾಗಿದೆ. ಆದರೆ ಇವು ವಜ್ರಗಳಾ ಎಂಬುವುದು ಮಾತ್ರ ಇನ್ನೂ ಖಚಿತವಾಗಿಲ್ಲ. ಇಲ್ಲಿದೆ ನೊಡಿ ವಜ್ರ ಲೂಟಿ ಹೊಡೆದ ಸುದ್ದಿಯ ವಿವರ.