ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ

Published : Feb 19, 2026, 06:53 PM IST

ಫೆ.21ರಿಂದ ಚಿನ್ನ, ಪೆಟ್ರೋಲ್ ದರ ಭಾರಿ ವ್ಯತ್ಯಾಸ ಸಾಧ್ಯತೆ, ಟ್ರಂಪ್ ನಿರ್ಧಾರ ಹಿಂದಿದೆ ಆತಂಕ, ಇರಾನ್ ಮೇಲೆ ಏರ್‌ಸ್ಟ್ರೈಕ್ ಮಾಡಲು ಅಮೆರಿಕ ಮಿಲಿಟರಿ ಪಡೆ ಸನ್ನದ್ಧವಾಗಿದೆ. ಟ್ರಂಪ್ ಅಂತಿಮ ಆದೇಶಕ್ಕಾಗಿ ಕಾಯುತ್ತಿದೆ. ಸ್ಟ್ರೈಕ್ ನಡೆದರೆ ಭಾರತದಲ್ಲಿ ಹಲು ವಸ್ತುಗಳ ಬೆಲೆ ಏರಿಕೆಯಾಗಲಿದೆ. 

PREV
15
ಇರಾನ್ ಮೇಲೆ ಅಮೆರಿದ ಏರ್‌ಸ್ಟ್ರೈಕ್ ತಯಾರಿ

ಡೋನಾಲ್ಡ್ ಟ್ರಂಪ್ ಆದೇಶಕ್ಕಾಗಿ ಅಮೆರಿಕ ಮಿಲಿಟರಿ ಪಡೆಗಳು ಕಾಯುತ್ತಿದೆ. ವರದಿಗಳ ಪ್ರಕಾರ ಅಮೆರಿಕ ಮಿಲಿಟರಿ ಪಡೆ ಇದೇ ಶನಿವಾರ (ಫೆ.21) ಇರಾನ್ ಮೇಲೆ ಏರ್‌ಸ್ಟ್ರೈಕ್ ನಡೆಸಲು ಎಲ್ಲಾ ಸಿದ್ಧತೆ ನಡೆಸಿದೆ. ಡೋನಾಲ್ಡ್ ಟ್ರಂಪ್ ಆದೇಶ ನೀಡಿದರೆ ಶನಿವಾರ ಇರಾನ್ ನ್ಯೂಕ್ಲಿಯರ್ ಪವರ್, ಇರಾನ್ ಸೇನೆ ಮೇಲೆ ದಾಳಿ ನಡೆಯಲಿದೆ. ಇರಾನ್ ಮೇಲಿನ ದಾಳಿ ಬಹುತೇಕ ಖಚಿತಗೊಂಡಿದೆ. ಇತ್ತ ಇರಾನ್‌ನಲ್ಲಿರುವ ಅಮೆರಿಕ ಪ್ರಜೆಗಳಿಗೆ ಇರಾನ್ ತೊರೆಯುವಂತೆ ಸೂಚನೆ ನೀಡಲಾಗಿದೆ.

25
ಚಿನ್ನ, ಇಂಧನ ಸೇರಿ ಹಲವು ವಸ್ತುಗಳ ದರ ವ್ಯತ್ಯಾಸ

ಅಮೆರಿಕ ಇರಾನ್ ಮೇಲೆ ದಾಳಿ ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲ ಬದಲಾವಣೆಗಳು ನಡೆಯಲಿದೆ. ಏರ್‌ಸ್ಟ್ರೈಕ್ ಭೀಕರತೆ, ದಿನಗಳ ಆಧಾರದಲ್ಲಿ ಭಾರತದಲ್ಲಿ ಚಿನ್ನ ಬೆಳ್ಳಿ, ಪೆಟ್ರೋಲ್ ಡೀಸೆಲ್ ಸೇರಿದಂತೆ ಕೆಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಎಂಸಿಎಕ್ಸ್ ಮಾರುಕಟ್ಟೆ ಮೇಲೆ ಏರ್‌ಸ್ಟ್ರೈಕ್ ಪರಿಣಾಮ ಬೀರಲಿದೆ. ಇದರಿಂದ ಚಿನ್ನ ಹಾಗೂ ಬೆಳ್ಳಿ ಬೆಲೆ ಮತ್ತೆ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ.

35
ಸ್ಟ್ರೈಟ್ ಆಫ್ ಹಾರ್ಮೌಜ್‌ಗೆ ಅಡಚಣೆ

ಇಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 4ರಷ್ಟು ಏರಿಕೆ ಕಂಡಿದೆ. ಸದ್ಯ ಬ್ಯಾರೆಲ್‌ಗೆ 70 ಅಮೆರಿಕನ್ ಡಾಲರ್‌ಗೆ ಏರಿಕೆಯಾಗಿದೆ. ಶೇಕಡಾ 20 ರಷ್ಟು ತೈಲಗಳು ಸ್ಟ್ರೈಟ್ ಆಫ್ ಹಾರ್ಮೌಜ್ ಮೂಲಕವೇ ಸಾಗಾಣೆಯಾಗುತ್ತದೆ. ಯುದ್ದ ನಡೆದರೆ ಇಂಧನ ಸಾಗಾಣೆ ಮೇಲೆ ಹೊಡೆತ ಬೀಳಲಿದೆ. ಇದರಿಂದ ಬ್ಯಾರೆಲ್ ಬೆಲೆ 90 ರಿಂದ 100 ಅಮೆರಿಕನ್ ಡಾಲರ್ ತಲುಪುವ ಸಾಧ್ಯತೆ ಇದೆ.

45
ಸರಕು ಹಡುಗಳ ವಿಮೆ ದುಬಾರಿ

ಯುದ್ಧ ನಡೆದರೆ ಗಲ್ಫ್ ಹಾಗೂ ಅಬೆರಿಯನ್ ಸಮುದ್ರಗಳ ಮೂಲಕ ಸಾಗುವ ಸರಕು ಹಡುಗಳ ವಿಮೆ ಮೊತ್ತ ದುಬಾರಿಯಾಗಲಿದೆ. ಇನ್ನು ಭಾರತದಿಂದ ಯೂರೋಪ್‌ಗೆ ರಫ್ತು ವಿಳಂಬವಾಗಲಿದೆ. ಬೇರೆ ಮಾರ್ಗದಲ್ಲಿ ಸಂಚರಿಸಿದರೆ ವೆಚ್ಚ ದುಬಾರಿಯಾಗಲಿದೆ. ಇನ್ನು ಇತ್ತೀಚೆಗೆ ಅಮೆರಿಕ ಜೊತೆ ಭಾರತದ ಮಹತ್ವದ ಟ್ರೇಡ್ ಒಪ್ಪಂದದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

55
ಷೇರು ಮಾರುಕಟ್ಟೆ ಮೇಲೆ ಪರಿಣಾಮ

ಯುದ್ದ ಸಂಭವಿಸಿದರೆ ಭಾರತದ ಷೇರು ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ. ಅಮೆರಿಕ ಇರಾನ್ ಏರ್‌ಸ್ಟ್ರೈಕ್‌ನಿಂದ ಹಲವು ಸೇವೆಗಳ ಮೇಲೆ ಹೊಡೆತ ಬೀಳಲಿದೆ. ಪ್ರಮುಖವಾಗಿ ಭಾರತದ ವಿಮಾನಗಳು ಮಾರ್ಗ ಬದಲಿಸುತ್ತದೆ. ಸರಕು ಸಾಗಣೆ, ಆಮದು, ರಫ್ತು ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ಹೊಡೆತ ಬೀಳಲಿದೆ. ಇದು ನೇರವಾಗಿ ಷೇರು ಮಾರುಕಟ್ಟೆ ಕುಸಿತಕ್ಕೂ ಕಾರಣವಾಗಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories