ತಂದೆಯಂತೆ ಮಗಳು, ಈಗ 'ಮಹಾ' ರಾಜಕೀಯದಲ್ಲಿ ಸುಪ್ರಿಯಳದ್ದೇ ಸುದ್ದಿ!

First Published Nov 27, 2019, 5:16 PM IST

ಸದ್ಯ ರಾಜಕೀಯ ವಲಯದಲ್ಲಿ ರಾಜಕಾರಣಿ ಹಾಗೂ NCP ನಾಯಕ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಹೆಸರು ಎಲ್ಲೆಡೆ ಸೌಂಡ್ ಮಾಡುತ್ತಿದೆ. ತಂದೆ ಶರದ್ ಪವಾರ್ ಮಹಾ ಚಾಣಾಕ್ಷ ಹೆಜ್ಜೆ ಇಟ್ಟು ಬಿಜೆಪಿಗೆ ಶಾಕ್ ನೀಡಿದ್ದಾರೆ. ಆದರೆ ಅಜಿತ್ ಪವಾರ್ ರಾಜೀನಾಮೆ ನೀಡಿ NCPಗೆ ಮರಳಿ ಬರುವಂತೆ ಮನವೊಲಿಸಿದ್ದು ಮಾತ್ರ ಸುಪ್ರಿಯಾ ಹಾಗೂ ಸಾನಂದ ಸುಳೆ ದಂಪತಿ. ಮಹಾರಾಷ್ಟ್ರ ರಾಜಕೀಯದಲ್ಲಿ ತನ್ನದೇ ಪ್ರಭಾವ ಹೊಂದಿರುವ ಸುಪ್ರಿಯಾರ ಕೆಲ ಫೋಟೋಗಳು.

ಪ್ರತಿಭಾ ಹಾಗೂ ಶರದ್ ಪವಾರ್ ದಂಪತಿ ಪುತ್ರಿ ಸುಪ್ರಿಯಾ ಸುಳೆ 1969ರ ಜೂನ್ 30ರಂದು ಪುಣೆಯಲ್ಲಿ ಜನಿಸಿದರು.
undefined
2019ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಸಂಸದೆಯಾಗಿ ಪ್ರಮಾಣವಚನ ಸ್ವೀಕಾರ.
undefined
ಸಕ್ರಿಯ ರಾಜಕಾರಣಿಯಾಗಿರುವ ಸುಪ್ರಿಯಾ, ಮೈಕ್ರೋ ಬಯಾಲಿಜಿಯಲ್ಲಿ ಪದವೀಧರೆ.
undefined
1991ರ ಮಾರ್ಚ್ 4 ರಂದು ಸದಾನಂದ ಬಾಲಚಂದ್ರ ಸುಳೆಯೊಂದಿಗೆ ಮದುವೆ. ಈ ದಂಪತಿಗೆ ವಿಜಯ್ ಹಾಗೂ ರೇವತಿ ಹೆಸರಿನ ಇಬ್ಬರು ಮಕ್ಕಳಿದ್ದಾರೆ.
undefined
ಖ್ಯಾತ ರಾಜಕಾರಣಿಯ ಮನೆಯಲ್ಲಿ ಜನಿಸಿದ ಸುಪ್ರಿಯಾ ಆರಂಭದಲ್ಲಿ ರಾಜಕೀಯವನ್ನು ತಮ್ಮ ವೃತ್ತಿಯಾಗಿ ಆರಿಸಿರಲಿಲ್ಲ. ಕ್ಯಾಲಿಫೋರ್ನಿಯಾಗೆ ತೆರಳಿದ ಅವರು ವಾಯು ಮಾಲಿನ್ಯ ಸಂಬಂಧಿತ ಅಧ್ಯಯನ ನಡೆಸಿದರು.
undefined
2006ರಲ್ಲಿ ಅಂದರೆ ಸುಮಾರು 13 ವರ್ಷಗಳ ಹಿಂದೆ ಸುಪ್ರಿಯಾ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಯಾದರು. ಬಳಿಕ ಅವರು ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.
undefined
2009ರಲ್ಲಿ ಮೊದಲ ಬಾರಿ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅದಕ್ಕೂ ಮುನ್ನ ಆ ಕ್ಷೇತ್ರದಿಂದ ಶರದ್ ಪವಾರ್ ಸ್ಪರ್ಧಿಸಿ ಗೆಲ್ಲುತ್ತಿದ್ದರು.
undefined
ಬಳಿಕ 2014 ಹಾಗೂ 2019ರಲ್ಲೂ ಸುಪ್ರಿಯಾ ಬಾರಾಮತಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು.
undefined
NCP ನಾಯಕಿ ಸುಪ್ರಿಯಾ ಸೋಶಿಯಲ್ ಮೀಡಿಯಾಗಳಲ್ಲೂ ತುಂಬಾ ಆ್ಯಕ್ಟಿವ್.
undefined
ಸಕ್ರಿಯ ರಾಜಕಾರಣಿಯಾಗಿದ್ದರೂ ಅವರು ತಮ್ಮ ವೃತ್ತಿ ಬದುಕು ಹಾಗೂ ಕುಟುಂಬ ಜೀವನವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ.
undefined
ಸರಳತೆಗೆ ಗುರುತಿಸಿಕೊಂಡಿರುವ ಸುಪ್ರಿಯಾ ಜನ ಸಾಮಾನ್ಯರೊಂದಿಗೆ ಬೆರೆಯುತ್ತಾರೆ. ರೈತರನ್ನು ಭೇಟಿಯಾಗಿ ಸಮಸ್ಯೆ ಆಲಿಸುತ್ತಾರೆ.
undefined
ಎಲ್ಲರೊಂದಿಗೂ ಆಪ್ತರಾಗಿರುವ ಸುಪ್ರಿಯಾ ಸುಳೆ ರಾಜಕೀಯ ನಡೆಯನ್ನೂ ತಂದೆ ಶರದ್ ಪವಾರ್‌ರಂತೆ ಅತ್ಯಂತ ಸೂಕ್ಷ್ಮವಾಗಿ ಇರಿಸುತ್ತಾರೆ.
undefined
ಇನ್ನು ತನ್ನ ಸಹೋದರ ಅಜಿತ್ ಪವಾರ್ ಸದ್ದಿಲ್ಲದೇ ಬಿಜೆಪಿಯೊಂದಿಗೆ ಕೈಜೋಡಿಸಿದಾಗ, ಅವರ ಮನವೊಲಿಸಿ ಮರಳಿ ಕರೆಸಿಕೊಮಡಿದ್ದು ಇದೇ ಸುಪ್ರಿಯಾ.
undefined
click me!