Published : Nov 26, 2019, 07:16 PM ISTUpdated : Nov 26, 2019, 07:25 PM IST
ಸತತ ನಾಲ್ಕು ದಿನಗಳ ‘ಮಹಾ’ಸರ್ಕಸ್.. ಇವತ್ತು ಬಗೆಹರಿಯುತ್ತೆ.. ನಾಳೆ ಬಗೆಹರಿಯುತ್ತೆ ಅಂತ ದಿನದೂಡುತ್ತಿದ್ದ, ಬಿಜೆಪಿ ನಾಯಕರ ಕನಸು ಇಂದು ನುಚ್ಚುನೂರಾಗಿದೆ. ಸಂಖ್ಯಾಬಲ ಸಾಬೀತಿನ ವಿಶ್ವಾಸದ ಮೇಲೆ ಮಹರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಸರ್ಕಾರ ರಚನೆ ಮಾಡಿದ್ದ ದೇವೇಂದ್ರ ಫಡ್ನವೀಸ್, ಯುದ್ದಕ್ಕೂ ಮುನ್ನವೇ ಶಸ್ತ್ರಾತ್ಯಾಗ ಮಾಡಿ, ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಈ ಮಹಾ ಹೈಡ್ರಾಮಕ್ಕೆ ಸುಪ್ರೀಂ ಕೋರ್ಟ್ ಕೊನೆ ಮೊಳೆ ಹೊಡೆಯಿತು. ಹಾಗಾದ್ರೆ, ಇಂದು [ಮಂಗಳವಾರ] ಮಹಾರಾಷ್ಟ್ರ ರಾಜಕೀಯದಲ್ಲಿ ಏನೇನಾಯ್ತು..? ಎನ್ನುವ ಟೈಮ್ ಲೈನ್ ಇಲ್ಲಿದೆ.