'ದೇವೇಂದ್ರ'ನ ಹಿಂದಿನ ಶಕ್ತಿಯೇ ಈ 'ಅಮೃತಾ'!

First Published | Nov 27, 2019, 4:14 PM IST

ಮಹಾರಾಷ್ಟ್ರ ರಾಜಕೀಯದಲ್ಲಿ ಯಾರೂ ಊಹಿಸಲೂ ಸಾಧ್ಯವಿಲ್ಲದ ಬೆಳವಣಿಗೆಗಳು ನಡೆದಿವೆ. ದಿನ ಬೆಳಗಾಗುತ್ತಿದ್ದಂತೆಯೇ ರಾಷ್ಟ್ರಪತಿ ಆಳ್ವಿಕೆ ಕೊನೆಗೊಂಡು ದೇವೇಂದ್ರ ಫಡ್ನವೀಸ್ ಸಿಎಂ ಆಗಿದ್ದರು. ಇದರ ಬೆನ್ನಲ್ಲೇ ಈ ಪ್ರಕರಣ ಸುಪ್ರೀಂ ಅಂಗಳ ತಲುಪಿದ್ದು, ಫಡ್ನವೀಸ್ ಗೆ ವಿಶ್ವಾಸಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾಯ್ತು. ಈ ಸಂಕಷ್ಟದ ಬೆನ್ನಲ್ಲೇ ಅಜಿತ್ ಪವಾರ್ ಕೂಡಾ ಕೈ ಬಿಟ್ಟರು. ಏಕಾಂಗಿಯಾದ ಫಡ್ನವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಿಜೆಪಿ ನಾಯಕ ಫಡ್ನವೀಸ್ ಇದರಿಂದ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಹೀಗಿದ್ದರೂ 'ದೇವೇಂದ್ರ' ಧೈರ್ಯಗೆಡದಂತೆ ಪತ್ನಿ 'ಅಮೃತಾ' ನಿಗಾ ವಹಿಸಿದ್ದಾರೆ. ಇಲ್ಲಿದೆ ಅಮೃತಾ ಕುರಿತು ನಿಮಗೆ ತಿಳಿಯದ ಕೆಲ ವಿಚಾರಗಳು

ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮಹಾರಾಷ್ಟ್ರದ ಮಾಜಿ ಸಿಎಂ. ಆದರೆ ಈ ನಾಯಕನ ಹಿಂದಿನ ರಿಯಲ್ ಶಕ್ತಿಯೇ ಅವರ ಪತ್ನಿ ಅಮೃತಾ ಫಡ್ನವೀಸ್.
undefined
ಸದ್ಯ ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಗಳ ನಡುವೆ ಅಮೃತಾ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸೌಂಡ್ ಮಾಡಿದೆ.
undefined

Latest Videos


ದೇವೇಂದ್ರ ಫಡ್ನವೀಸ್ ರಾಜಕೀಯ ಯಶಸ್ಸಿಗೆ ಅಮೃತಾ ಕೊಡುಗೆ ಬಹಳಷ್ಟಿದೆ.
undefined
ತೆರೆಯ ಹಿಂದೆ, ದೇವೇಂದ್ರ ಫಡ್ನವೀಸ್ ಸಾಮಾಜಿಕ ಜಾಲತಾಣ, ಕಾರ್ಯಕ್ರಮ ಹೀಗೆ ಎಲ್ಲಾ ವಿಚಾರಗಳ ಮೇಲೂ ಅಮೃತಾ ನಿಗಾ ವಹಿಸುತ್ತಾರೆ.
undefined
ಹಲವಾರು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಮೃತಾ ಜನರೊಂದಿಗೆ ಹೆಚ್ಚು ಬೆರೆಯುತ್ತಾರೆ.
undefined
ಇನ್ನು ಸ್ಟೈಲಿಶ್ ಹಾಗೂ ಫ್ಯಾಷನ್ ಸೆನ್ಸ್ ಬಗ್ಗೆ ಹೇಳುವುದಾದರೆ ಅದರಲ್ಲೂ ಅಮೃತಾ ನಂಬರ್ ವನ್.
undefined
ಆದರೆ ಅದೆಷ್ಟೇ ಚೆನ್ನಾಗಿ ರೆಡಿಯಾದರೂ, ತನ್ನ ಗಂಡ ದೇವೇಂದ್ರ ಫಡ್ನವೀಸ್ ಮಾತ್ರ ಗಮನಿಸುವುದೇ ಇಲ್ಲ ಎನ್ನುತ್ತಾರೆ ಅಮೃತಾ
undefined
ಇನ್ನು ದೇವೇಂದ್ರ ಫಡ್ನವೀಸ್ ನೋಡಲು ಒರಟು ವ್ಯಕ್ತಿಯಂತೆ ಕಂಡರೂ, ಅವರೊಬ್ಬ ರೊಮ್ಯಾಂಟಿಕ್ ಹಾಗೂ ಭಾವನಾತ್ಮಕ ವ್ಯಕ್ತಿ ಎನ್ನುವುದು ಅಮೃತಾ ಮಾತಾಗಿದೆ.
undefined
ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 9 ರಂದು ಜನಿಸಿದ ಅಮೃತಾ, ಓರ್ವ ಶಾಸ್ತ್ರೀಯ ಗಾಯಕಿ.
undefined
ವೈದ್ಯ ದಂಪತಿ, ನೇತ್ರ ಶಾಸ್ತ್ರಜ್ಞ ಡಾ. ಶರದ್ ರನಾಡೆ ಹಾಗೂ ಸ್ತ್ರೀರೋಗ ತಜ್ಞೆ ಡಾ. ಚಾರುಲತಾ ಅಮೃತಾ ತಂದೆ, ತಾಯಿ.
undefined
ವಾಣಿಜ್ಯ ವಿಭಾಗದಲ್ಲಿ ಪದವಿ ಹಾಗೂ ಎಂಬಿಎ ಓದಿರುವ ಅಮೃತಾ ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ.
undefined
ಅಮೃತಾರಿಗೆ ಗೌರವ್ ರನಾಡೆ ಹೆಸರಿನ ಓರ್ವ ಸಹೋದರ ಕೂಡಾ ಇದ್ದಾರೆ.
undefined
2005ರ ಡಿಸೆಂಬರ್ ನಲ್ಲಿ ದೇವೇಂದ್ರ ಫಡ್ನವೀಸ್ ಅಮೃತಾ ಮದುವೆಯಾಗಿದ್ದು, ಇವರಿದೆ ದಿವಿಜಾ ಫಡ್ನವೀಸ್ ಹೆಸರಿನ ಓರ್ವ ಮುದ್ದಾದ ಮಗಳಿದ್ದಾಳೆ.
undefined
2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಪರ ಅಮೃತಾ ಭರ್ಜರಿ ಪ್ರಚಾರ ನಡೆಸಿದ್ದರು.
undefined
ಜನಪರ ಕಾಳಜಿ ಹೊಂದಿರುವ ಅಮೃತಾ ಚುನಾವಣಾ ಪ್ರಚಾರದಲ್ಲಿ ತಮ್ಮ ಮಾತುಗಳಿಂದ ಜನರ ಮನ ಗೆದ್ದಿದ್ದರು.
undefined
ಗಂಡ ಮಹಾರಾಷ್ಟ್ರದ ಸಿಎಂ ಆದ ಸಂದರ್ಭದಲ್ಲಿ ಸರ್ಕಾರಿ ಕಚೇರಿಯಲ್ಲಿ ಸಿಎಂ ಪತ್ನಿ ಎಂಬ ಅಧಿಕಾರ ಅಮೃತಾ ಯಾವತ್ತೂ ದುರುಪಯೋಗಪಡಿಸಕೊಳ್ಳುತ್ತಿರಲಿಲ್ಲ.
undefined
ತಮ್ಮ ಲೈಸೆನ್ಸ್ ಮಾಡಲು ಸರ್ಕಾರಿ ಕಚೇರಿಗೆ ತೆರಳಿದಾಗಲೂ ಗುರುತು ಬಹಿರಂಗಪಡಿಸದ ಅಮೃತಾ, ಟೋಕನ್ ಪಡೆದು ಎಲ್ಲರಂತೆ ಸರತಿ ಸಾಲಿನಲ್ಲಿ ತೆರಳಿದ ವಿಚಾರ ಭಾರೀ ಸೌಂಡ್ ಮಾಡಿತ್ತು.
undefined
ಅತ್ಯುತ್ತಮ ಗಾಯಕಿಯಾಗಿರುವ ಅಮೃತಾ ಅನೇಕ ಸಿನಿಮಾಗಳಿಗೆ ಹಾಡಿದ್ದಾರೆ. ಅಲ್ಲದೇ ಅನೇಕ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ತಮ್ಮ ಕಲೆ ಪ್ರದರ್ಶಿಸಿದ್ದಾರೆ.
undefined
ಸಾಮಾಜಿಕ ಹೋರಾಟಗಾರ್ತಿಯೂ ಆಗಿರುವ ಅಮೃತಾ ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಭಾರತ ಅಭಿವೃದ್ಧಿ ಯೋಜನೆಗಾಗಿ ಕೆಲಸ ಮಾಡುತ್ತಾರೆ.
undefined
ಆ್ಯಸಿಡ್ ದಾಳಿಗೊಳಗಾದ ಯುವತಿಯರ ಪರ ಅತೀವ ಕಾಳಜಿ ಹೊಂದಿರುವ ಅಮೃತಾ ಇವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕಾಗಿ ಕಾರ್ಯಕ್ರಮಗಳನ್ನೂ ಆಯೋಜಿಸಿದ್ದಾರೆ.
undefined
ಇನ್ನು ಯೋಗ ದಿನವನ್ನು ರೈತರ ಮಕ್ಕಳೊಂದಿಗೆ ಆಚರಿಸಿದ್ದ ಅಮೃತಾ ಮಾಧ್ಯಮಗಳಲ್ಲಿ ಸದ್ದು ಮಾಡಿದ್ದರು.
undefined
ಅಮೃತಾ ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ.
undefined
ನಾಗ್ಪುರದಲ್ಲಿ ವಾಸಿಸುವ ಫಡ್ನವೀಸ್ ಕುಟುಂಬ ಸರಳತೆಗೆ ಗುರುತಿಸಿಕೊಂಡಿದೆ.
undefined
ಫಡ್ನವೀಸ್ ಕುಟುಂಬ ಪ್ರತಿ ವರ್ಷವೂ ಗಣೇಶ ಚತುರ್ಥಿಯನ್ನು ತಮ್ಮ ನೆರೆ ಹೊರೆಯವರೊಂದಿಗೆ ಅದ್ಧೂರಿಯಾಗಿ ಆಚರಿಸುತ್ತಾರೆ.
undefined
ಗಂಡ ರಾಜಕೀಯದಲ್ಲಿದ್ದ, ಮಹಾರಾಷ್ಟ್ರದ ಸಿಎಂ ಆಗಿದ್ದರೂ ಅಮೃತಾ ಯಾವತ್ತಿಗೂ ಅವರನ್ನವಲಂಭಿಸಿಲ್ಲ.
undefined
ಇನ್ನು ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ಹೈಡ್ರಾಮಾದಿಂದ ಬೇಸತ್ತ ಫಡ್ನವೀಸ್ ಗೆ ಅಮೃತಾ ಧೈರ್ಯ ತುಂಬಿದ್ದಾರೆ.
undefined
ಫಡ್ನವೀಸ್ ರಾಜೀನಾಮೆ ನೀಡಿದ ಬೆನ್ನಲ್ಲೇ ಅಮೃತಾ ಮಾಡಿರುವ ಟ್ವೀಟ್ ಭಾರೀ ವೈರಲ್ ಆಗಿದೆ.
undefined
ಅಮೃತಾ ತಮ್ಮ ಟ್ವೀಟ್ ನಲ್ಲಿ ಮತ್ತೆ ಮರಳಿ ಬರುವೆ ಎಂಬ ಸಾಲನ್ನು ಬರೆದಿದ್ದು, ಇದು ದೇವೇಂದ್ರ ಫಡ್ನವೀಸ್ ಸೋಲೊಪ್ಪಿಲ್ಲ. ಮತ್ತೆ ಮರಳಿ ಬರುತ್ತಾರೆಂಬ ಸಂದೇಶ ನೀಡಿದೆ.
undefined
click me!