26/11 ಹುತಾತ್ಮರಿವರು: ನಮ್ಮ ಭವಿಷ್ಯಕ್ಕಾಗಿ ತಮ್ಮ ವರ್ತಮಾನ ತ್ಯಾಗ ಮಾಡಿದವರು!

First Published | Nov 26, 2019, 12:36 PM IST

26/11.. ಈ ದಿನವನ್ನು ಭಾರತವಷ್ಟೇ ಅಲ್ಲ, ಇಡೀ ಜಗತ್ತು ತುಂಬು ಕಣ್ಣುಗಳಿಂದ ನೆನಯುತ್ತದೆ. ಮನುಕುಲದ ಮೇಲೆ ಭಯೋತ್ಪಾದನೆಯ ಪೈಶಾಚಿಕ ದಾಳಿಯನ್ನು ಇಡೀ ಜಗತ್ತು ದು:ಖದಿಂದ ಸ್ಮರಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಮಾನವೀಯತೆಯನ್ನು ಉಳಿಸಲು ತಮ್ಮ ಪ್ರಾಣವನ್ನೇ ಸಮರ್ಪಿಸಿದ ಸಮವಸ್ತ್ರದ ಧೀರರನ್ನು ಅತ್ಯಂತ ಹೆಮ್ಮೆಯಿಂದ ನೆನೆಯುತ್ತದೆ. ನಿಮ್ಮ ಸುವರ್ಣನ್ಯೂಸ್.ಕಾಂ ಕೂಡ ಹುತಾತ್ಮ ವೀರರನ್ನು ನೆನೆಯುತ್ತಾ ಅವರಿಗಾಗಿ ಈ ವರದಿಯನ್ನು ಸಮರ್ಪಿಸುತ್ತಿದೆ.

ಹೇಮಂತ ಕರ್ಕರೆ: ಮಹಾರಾಷ್ಟ್ರದ ಎಟಿಎಫ್ ಮುಖ್ಯತಸ್ಥರಾಗಿದ್ದ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು.
undefined
ಅಶೋಕ್ ಕಾಮ್ಟೆ: ಮುಂಬೈ ನಗರದ ಅಡಿಶನ್ ಕಮಿಷನರ್ ಆಗಿದ್ದ ಅಶೋಕ್ ಕಾಮ್ಟೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಎದೆಯೊಡ್ಡಿ ಹುತಾತ್ಮರಾದರು.
undefined

Latest Videos


ವಿಜಯ್ ಸಾಲಸ್ಕರ್: ಎನ್’ಕೌಂಟರ್ ಸ್ಪೆಶಲಿಸ್ಟ್ ಎಂದೇ ಖ್ಯಾತಿಗಳಿಸಿದ್ದ ವಿಜಯ್ ಸಾಲಸ್ಕರ್, ಉಗ್ರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿ ತಮ್ಮ ಪ್ರಾಣ ತೆತ್ತರು.
undefined
ಶಶಾಂಕ್ ಶಿಂಧೆ: ಸಿನಿಯರ್ ಇನ್ಸಪೆಕ್ಟರ್ ಹುದ್ದೆಯಲ್ಲಿದ್ದ ಶಶಾಂಕ್ ಶಿಂಧೆ, ಕಾರ್ಯಾಚರಣೆ ವೇಳೆ ಉಗ್ರರ ಗುಂಡೇಟಿಗೆ ಬಲಿಯಾದರು.
undefined
ತುಕಾರಾಂ ಓಂಬ್ಳೆ: ಮುಂಬೈ ಪೊಲೀಸ್ ಇಲಾಖೆಯಲ್ಲಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಹುದ್ದೆಯಲ್ಲಿದ್ದ ತುಕಾರಾಂ ಓಂಬ್ಳೆ, ಉಗ್ರ ಅಜ್ಮಲ್ ಕಸಬ್’ನನ್ನು ಸೆರೆ ಹಿಡಿಯುವ ವೇಳೆ ಗುಂಡೇಟು ತಗುಲು ಹುತಾತ್ಮರಾದರು. ಕಸಬ್ ಹಾರಿಸಿದ ಗುಂಡು ತಮ್ಮ ದೇಹ ಛಿದ್ರ ಮಾಡಿದ್ದರೂ, ಆತನನ್ನು ಗಟ್ಟಿಯಾಗಿ ಹಿಡಿದು ಕೊನೆಗೆ ಪ್ರಾಣ ಬಿಟ್ಟ ಧೀರ ತುಕಾರಾಂ ಓಂಬ್ಳೆ.
undefined
ಸಂದೀಪ್ ಉನ್ನಿಕೃಷ್ಣನ್: NSG ಕಮಾಂಡೋ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್, ತಾಜ್ ಹೋಟೆಲ್’ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಯನ್ನು ರಕ್ಷಿಸುವ ವೇಳೆ ಗುಂಡೇಟು ತಗುಲಿ ಹುತಾತ್ಮರಾದರು.
undefined
ಗಜೇಂದ್ರ ಸಿಂಗ್ ಬಿಷ್ಟ: NSGಯಲ್ಲಿ ಹವಾಲ್ದಾಶರ್ ಆಗಿದ್ದ ಗಜೇಂದ್ರ ಸಿಂಗ್ ಬಿಷ್ಟ, ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಹುತಾತ್ಮರಾದರು.
undefined
click me!