8 ತಿಂಗಳ ಬಳಿಕ ಮನೆಗೆ ಭೇಟಿ ಕೊಟ್ಟ ರೈಲ್ವೇ ಸಚಿವ: ತಂದೆ ಕೊಟ್ಟ ಪತ್ರದಲ್ಲಿತ್ತು ಆ ಒಂದು ವಾಕ್ಯ!

Published : Oct 03, 2021, 04:23 PM ISTUpdated : Oct 03, 2021, 04:24 PM IST

ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಸಂಪುಟದಲ್ಲಿ ಕೇಂದ್ರ ರೈಲ್ವೇ ಸಚಿವರಾದ(Railway Minister) ಬಳಿಕ ಇದೇ ಮೊದಲ ಬಾರಿ ಅಶ್ವಿನಿ ವೈಷ್ಣವ್(Ashwini Vaishnav) ಜೋಧ್ಪುರದ(Jodhpur) ತಮ್ಮ ಮನೆಗೆ ತಲುಪಿದ್ದಾರೆರು. ಪಟ್ಟಣವಾಸಿಗಳು ತಮ್ಮ ಮನೆ ಮಗನಿಗೆ ಹೂವಿನ ಸ್ವಾಗತ ನೀಡಿದ್ದಾರೆ. ಊರಿನ ಜನರೆಲ್ಲಾ ಸೇರಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಸಚಿವರು ಕಾರಿನಿಂದ ಇಳಿದು ಅವರ ಮನೆ ದ್ವಾರ ತಲುಪುತ್ತಿದ್ದಂತೆಯೇ ಮೊಟ್ಟ ಮೊದಲು ತಾಯಿಯ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಈ ಸಮಯದಲ್ಲಿ ಅವರು ಭಾವುಕರಾಗಿದ್ದಾರೆ. ಬಳಿಕ, ತಾಯಿ ತನ್ನ ಮಗನಿಗೆ ತಿಲಕವಿಟ್ಟು ಮನೆಯೊಳಗೆ ಕರೆಸಿಕೊಂಡಿದ್ದಾರೆ.

PREV
15
8 ತಿಂಗಳ ಬಳಿಕ ಮನೆಗೆ ಭೇಟಿ ಕೊಟ್ಟ ರೈಲ್ವೇ ಸಚಿವ: ತಂದೆ ಕೊಟ್ಟ ಪತ್ರದಲ್ಲಿತ್ತು ಆ ಒಂದು ವಾಕ್ಯ!

ವಾಸ್ತವವಾಗಿ, ಅಶ್ವನಿ ವೈಷ್ಣವ್ ಬರೋಬ್ಬರಿ 8 ತಿಂಗಳ ನಂತರ ಮನೆಗೆ ತೆರಳಿದ್ದಾರೆ. ವಿಮಾನ ನಿಲ್ದಾಣದಿಂದ, ರೈಲ್ವೆ ಸಚಿವರು ನೇರವಾಗಿ ಅವರ ಪೂರ್ವಜರ ನಿವಾಸ ಮಹಾವೀರ್ ಕಾಲೋನಿಗೆ ತಲುಪಿದರು. ಅಲ್ಲಿ ತಂದೆ ದೌಲಾಲ್ ವೈಷ್ಣವ್ ಮಗನ ಸ್ವಾಗತಕ್ಕಾಗಿ ಮನೆಯಿಂದ ಮುಖ್ಯ ರಸ್ತೆಯವರೆಗೆ ಹೂವಿನ ಅಲಂಕಾರವನ್ನು ಮಾಡಿದ್ದರು. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಆಗಮಿಸಿದ್ದರು.

25

ರೈಲ್ವೆ ಮಂತ್ರಿಯನ್ನು ಕಾಣಲು ಅಭಿಮಾನಿಗಳ ದಂಡು ಅದೆಷ್ಟು ನೆರೆದಿತ್ತೆಂದರೆ, ಪೋಷಕರನ್ನು ಭೇಟಿ ಮಾಡಲು ಸಮಯ ಕಡಿಮೆಯಾಗಿದೆ. ತವರುನಾಡಿಗೆ ತೆರಳಿದ ಸಚಿವರು ಅಲ್ಲಿ ಉಳಿದಿದ್ದು ಕೇವಲ ಒಂದು ದಿನ. ತಂದೆಗೆ ಮಗನಿಗೆ ಹೇಳಲು ಅನೇಕ ವಿಷಯಗಳಿದ್ದವು, ಆದರೆ ಸಮಯ ಾಭಾವವಿತ್ತು, ಹಾಗಾಗಿ ಅವರು ತನ್ನ ಮಗನಿಗೆ ಪತ್ರವನ್ನು ನೀಡಿದ್ದಾರೆ. ಅಲ್ಲದೇ ನಾನು ನನ್ನ ಎಲ್ಲಾ ವಿಷಯಗಳನ್ನು ಅದರಲ್ಲಿ ಬರೆದಿದ್ದೇನೆ, ನಿಮಗೆ ಸಮಯ ಸಿಕ್ಕಾಗ ಅದನ್ನು ಓದು ಎಂದಿದ್ದಾರೆ. ಆದರೆ ಮಗನ ಕೋರಿಕೆ ಮೇರೆಗೆ, ತಂದೆ ಈ ಪತ್ರವನ್ನು ಓದಿದ್ದಾರೆ. ಇದರಲ್ಲಿ ಸಚಿವನಾದ ತನ್ನ ಪುತ್ರನಿಗ, ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡು ಎಂದು ತಂದೆ ತಿಳಿಸಿದ್ದಾರೆ.

35

ತಾಯಿ ಸಚಿವನಾದ ತನ್ನ ಮಗನನ್ನು ಅಪ್ಪಿಕೊಂಡು ಸಂಭ್ರಮಿಸಿದ್ದಾರೆ. ವೈಷ್ಣವ್ ತನ್ನ ತಾಯಿಯನ್ನು ಅಪ್ಪಿಕೊಂಡ ತಕ್ಷಣ ಭಾವುಕರಾಗಿದ್ದಾರೆ. ಈ ನಡುವೆ ಭಾವುಕತೆಯನ್ನು ಜನರಿಂದ ಮರೆಮಾಚಿ, ತಾಯಿಯನ್ನು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆದರೆ ಮಗ ಹೊರಟು ನಿಂತಾಗ ತಾಯಿ ಪ್ರೀತಿಯಿಂದ ಮುತ್ತು ಕೊಟ್ಟಾಗ ಅಲ್ಲಿದ್ದ ಜನರೆಲ್ಲರೂ ಭಾವುಕರಾಗಿದ್ದಾರೆ. 

45

ತಮ್ಮ ಮನೆಗೆ ತಲುಪಿದ ಬಲಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಶಿಕ್ಷಣವನ್ನು ಶಾಲೆಯಿಂದ ಪಡೆಯಲಾಗುತ್ತದೆ, ಆದರೆ ಮೌಲ್ಯಗಳನ್ನು ಪೋಷಕರಿಂದ ಮಾತ್ರ ಪಡೆಯಲಾಗುತ್ತದೆ. ನಾನು ಇಂದು ಏನೇ ಆಗಿದ್ದರೂ ಅದು ಅವರು ಕಲಿಸಿಕೊಟ್ಟ ಉತ್ತಮ ಮೌಲ್ಯಗಳು ಮತ್ತು ಆಶೀರ್ವಾದಗಳಿಂದಾಗಿ. ಇಂದು ನಾನು ಬಹಳ ಸಮಯದ ಬಳಿಕ ನನ್ನ ಕುಟುಂಬವನ್ನು ಭೇಟಿ ಮಾಡಲು ಬಂದಿದ್ದೇನೆ. ಹಾಗಾಗಿ ನಾನು ಭಾವುಕನಾಗುವುದು ಸಹಜ ಎಂದಿದ್ದಾರೆ.

55
Ashwini

ಚಿತ್ರದಲ್ಲಿ ನೀವು ರೈಲ್ವೆ ಮಂತ್ರಿಯು ಜೋಧ್ಪುರದ ಮನೆಗೆ ತಲುಪಿದಾಗ, ಅವರ ತಾಯಿ ಮಗನನ್ನು ತಿಲಕವಿಟ್ಟು ಸ್ವಾಗತಿಸಿದ ಕ್ಷಣ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರು ಹಾಜರಿದ್ದರು.

click me!

Recommended Stories