ಸಂತ್ರಸ್ತೆಯ ನೋವಿನ ಕತೆ ತಿಳಿಸುವ ಮುನ್ನ, ಟು ಫಿಂಗರ್ ಟೆಸ್ಟ್ ಏನು ಎಂದು ತಿಳಿದುಕೊಳ್ಳುವುದು ಅಗತ್ಯ. ಸರಳ ಭಾಷೆಯಲ್ಲಿ ಹೇಳುವುದಾದರೆ, ಈ ಪರೀಕ್ಷೆ ವೇಳೆಸಂತ್ರಸ್ತೆಯ ಗುಪ್ತಾಂಗಕ್ಕೆ ಎರಡು ಬೆರಳುಗಳನ್ನು ಹಾಕುವ ಮೂಲಕ ಪರೀಕ್ಷೆಯನ್ನು ಮಾಡಲಾಗುತ್ತದೆ. ಹೈಮೆನ್ ಇದೆಯೋ ಇಲ್ಲವೋ ಎಂಬುದನ್ನು ಕಂಡುಹಿಡಿಯಲು ಹೀಗೆ ಮಾಡಲಾಗುತ್ತದೆ. ಈ ಮೂಲಕ ಮಹಿಳೆ ಅದಕ್ಕೂ ಮುನ್ನ ದೈಹಿಕ ಸಂಪರ್ಕ ಮಾಡಿದ್ದಲೋ ಇಲ್ಲವೋ ಎಂದು ಪರೀಕ್ಷಿಸಲಾಗುತ್ತದೆ.
ವಿಶ್ವಸಂಸ್ಥೆ ಈ ಟು ಫಿಂಗರ್ ಟೆಸ್ಟ್ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಇದು ವೈಜ್ಞಾನಿಕ ಪ್ರಕ್ರಿಯೆ ಅಲ್ಲ ಎಂದಿತ್ತು. ಭಾರತ 2013ರಿಂದಲೇ ಈ ಟು ಫಿಂಗರ್ ಟೆಸ್ಟ್‌ನ್ನು ರದ್ದುಗೊಳಿಸಿದೆ. 2018ರಲ್ಲಿ ಬಾಂಗ್ಲಾದೇಶವೂ ಈ ಪರೀಕ್ಷೆಗೆ ತಡೆ ಹೇರಿದೆ.
ಇನ್ನು ಮಹಿಳಾ ಅಧಿಕಾರಿಯ ನೋವಿನ ವಿಚಾರ ಹೇಳುವುದಾದರೆ ಎಫ್ಐಆರ್ ಪ್ರತಿಯ ಪ್ರಕಾರ, ಸಂತ್ರಸ್ತರಿಗೆ ಸೆಪ್ಟೆಂಬರ್ 10 ರಂದು ಪಾದಕ್ಕೆ ಗಾಯವಾಗಿತ್ತು. ಅವರು ನೋವಿನ ಔಷಧಿಯನ್ನು ತೆಗೆದುಕೊಂಡಿದ್ದರು. ಇದರ ನಂತರ ಅವನು ಸ್ನೇಹಿತರೊಂದಿಗೆ ಎರಡು ಡ್ರಿಂಕ್ಸ್ ಸೇವಿಸಿದ್ದರು. ಈ ವೇಳೆ ಅತ್ಯಾಚಾರ ಆರೋಪಿಯೇ ಮಹಿಳಾ ಅಧಿಕಾರಿಗೆ ಡ್ರಿಂಕ್ಸ್ ಸರ್ವ್ ಮಾಡಿದ್ದರು.
ಡ್ರಿಂಕ್ಸ್ ಸೇವಿಸಿದ ಬಳಿಕ ಅಧಿಕಾರಿಗೆ ವಾಂತಿಯಾಗಲಾರಂಭಿಸಿದೆ. ಈ ವೇಳೆ ಸ್ನೇಹಿತರೆಲ್ಲಾ ಸೇರಿ ಮಹಿಳಾ ಅಧಿಕಾರಿಯನ್ನು ಕೋಣೆಗೊಯ್ದಿದ್ದಾರೆ. ಹೀಗಿರುವಾಗ ಆರೋಪಿ ಅಮಿತೇಶ್(Flight Lieutenant Amitesh Harmukh) ಕೂಡ ಕೊಠಡಿಗೆ ಪ್ರವೇಶಿಸಿದ್ದಾರೆ. ಮರುದಿನ, ಸಂತ್ರಸ್ತೆಯ ಸ್ನೇಹಿತೆ ಆಕೆಯ ಸ್ಥಿತಿಯನ್ನು ವಿಚಾರಿಸಲು ಬಂದಾಗ, ಅಮಿತೇಶ್ ಅಲ್ಲಿ ಇರುವುದನ್ನು ನೋಡಿದ್ದಾಳೆ. ಹೀಗಿರುವಾಗ ಸ್ನೇಹಿತೆ ಮಹಿಳೆ ಬಳಿ ಆತನನ್ನು ನೀನು ಒಳಗೆ ಕರೆಸಿಕೊಂಡೆಯಾ ಎಂದು ಪ್ರಶ್ನಿಸಿದ್ದಾಳೆ. ಇನ್ನು ಎಫ್‌ಐಆರ್‌ನಲ್ಲಿ ಮಹಿಳಾ ಅಧಿಕಾರಿ ತನ್ನ ಸ್ನೇಹಿತರು ಸೇರಿ ಮಾಡಿದ ವಿಡಿಯೋದಲ್ಲಿ ಅಮಿತೇಶ್ ತನ್ನ ಕೃತ್ಯಗಳನ್ನು ಒಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ.
ಈ ವಿಚಾರ ಉನ್ನತ ಅಧಿಕಾರಿಗಳಿಗೆ ತಲುಪಿದಾಗ, ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಮಾಧ್ಯಮ ವರದಿಗಳ ಅನ್ವಯ, ಅಧಿಕಾರಿಗಳು ಮಹಿಳೆಗೆ ದೂರನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದಾರೆ. ಆದರೆ ಸಂತ್ರಸ್ತೆ ದೂರು ಹಿಂಪಡೆಯಲು ನಿರಾಕರಿಸಿದ್ದಾರೆ. ನಂತರ ಭಾರತೀಯ ವಾಯುಪಡೆಯ ವೈದ್ಯರು ಆರೋಪಿಯ ವಿಡಿಯೋ ರೆಕಾರ್ಡಿಂಗ್ ಕೇಳಿದ್ದಾರೆ. ಅಲ್ಲದೇ ಟು ಫಿಂಗರ್ ರೇಪ್ ಟೆಸ್ಟ್ ಮಾಡಿಸಿದ್ದಾರೆನ್ನಲಾಗಿದೆ.
ಇನ್ನು ಪ್ರಕರಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ನೋಡಿ, ಸಂತ್ರಸ್ತೆ ಸೆಪ್ಟೆಂಬರ್ 19 ರಂದು ಆನ್‌ಲೈನ್ ಎಫ್‌ಐಆರ್ ದಾಖಲಿಸಿದ್ದಾರೆ. ಕೊಯಮತ್ತೂರು ಪೊಲೀಸರು ಸಂತ್ರಸ್ತೆ ನೀಡಿರುವ ಮಾಡಿದ ವಿಡಿಯೋವನ್ನು ಮ್ಯಾಜಿಸ್ಟ್ರೇಟ್‌ಗೆ ಹಸ್ತಾಂತರಿಸಿದ್ದಾರೆ. ವಾಯುಪಡೆಯ ಸಿಬ್ಬಂದಿಗಳು ವಿಮಾನಯಾನ ಕಾಯಿದೆಯಡಿ ಕೇವಲ ಫ್ಲೈಟ್ ಲೆಫ್ಟಿನೆಂಟ್ ಅಮಿತೇಶ್ ಹರ್ಮುಖ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಮಿತೇಶ್ ಹರ್ಮುಖ್ ಸದ್ಯ ಬಂಧನದಲ್ಲಿದ್ದಾರೆ.