ಸರಯೂ ಘಾಟ್‌ನಲ್ಲಿ ಆರತಿ ಎತ್ತಿದ ಸಂಸದ ಸೂರ್ಯ

First Published Oct 1, 2021, 9:12 AM IST
  • ಸರಯೂ ಘಾಟ್‌ನಲ್ಲಿ ಆರತಿ ಎತ್ತಿದ ಸಂಸದ ತೇಜಸ್ವಿ ಸೂರ್ಯ 
  • ಸಂಸದ ಸೂರ್ಯ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್
Surya

ಸಂಸದ ತೇಜಸ್ವಿ ಸೂರ್ಯ ಅವರು ಸರಯೂ ಘಾಟ್‌ಗೆ ಭೇಟಿ ನೀಡಿದ್ದು ಅಲ್ಲಿ ಆರತಿ ಮಾಡಿದ್ದಾರೆ. ಸಂಸದರು ಫೋಟೋಗಳನ್ನು ಸೋಷಿಯಾ ಮೀಡಿಯಾಗಳಲ್ಲಿ ಶೇರ್ ಮಾಡಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಸರಯೂ ಸಂಪೂರ್ಣವಾಗಿ ರಾಮಲೀಲೆಗೆ ಸಾಕ್ಷಿಯಾಯಿತು. ಅವನ ಹುಟ್ಟಿನಿಂದ ಅರಣ್ಯವಾಸ ಮತ್ತು ಪಟ್ಟಾಭಿಷೇಕದವರೆಗೆ ರಾಮನ ಅವತಾರ ಪೂರ್ಣಗೊಳ್ಳುವವರೆಗೆ ಸರಯೂ ಇದೆಲ್ಲವನ್ನೂ ಕಂಡಿದೆ ಎಂದಿದ್ದಾರೆ.

ಶತಮಾನಗಳ ಇಸ್ಲಾಮಿಕ್ ಆಡಳಿತದ ನಂತರ ಸರಯೂನ ಪವಿತ್ರ ಘಾಟ್‌ಗಳನ್ನು  ಶೀಮಂತ್ ಅಹಿಲ್ಯ ಬಾಯ್ ಹೊಲ್ಕರ್ ಪುನರ್‌ ನಿರ್ಮಿಸಿದ್ದಾರೆ ಎಂದಿದ್ದಾರೆ. ಇಂದು ಸರಯೂ ಘಾಟ್‌ಗೆ ಆರತಿ ಎತ್ತುವ ಪುಣ್ಯ ನನ್ನದಾಯಿತು ಎಂದು ಸಂಸದ ಫೋಟೋಗಳಿಗೆ ಕ್ಯಾಪ್ಶನ್ ಬರೆದಿದ್ದಾರೆ.

ಕೇಸರಿ ಶಾಲನ್ನು ಹೊದ್ದುಕೊಂಡು ಹಣೆಗೆ ಕುಂಕುಮ ಹಚ್ಚಿ ಸಂಸದ ಸೂರ್ಯ ಎತ್ತರದವಾದ ಸುಂದರವಾದ ಆರತಿಯನ್ನು ಎತ್ತಿ ಬೆಳಗುವುದನ್ನು ಫೋಟೋದಲ್ಲಿ ಕಾಣಬಹುದು

ಸರಯೂ ಭಾರತದ ಉತ್ತರಾಖಂಡದ ಬಾಗೇಶ್ವರ್ ಜಿಲ್ಲೆಯ ನಂದಾ ಕೋಟ್ ಪರ್ವತದ ದಕ್ಷಿಣದಲ್ಲಿರುವ ನದಿಯಾಗಿದೆ. ಭಾರತ -ನೇಪಾಳ ಗಡಿಯಲ್ಲಿರುವ ಪಂಚೇಶ್ವರದಲ್ಲಿ ಶಾರದಾ ನದಿಗೆ ಸೇರುವ ಮಾಡುವ ಮೊದಲು ಇದು ಕಾಪ್ಕೋಟ್, ಬಾಗೇಶ್ವರ್ ಮತ್ತು ಸೆರಾಘಾಟ್ ಪಟ್ಟಣಗಳ ಮೂಲಕ ಹರಿಯುತ್ತದೆ.

ಶಾರದಾ ನದಿಯನ್ನು(Sharada River) ಕಾಳಿ ನದಿ ಎಂದೂ ಕರೆಯುತ್ತಾರೆ. ನಂತರ ಭಾರತದ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಘಘರಾ ನದಿಗೆ ಹರಿಯುತ್ತದೆ. ಕೆಳಗಿನ ಘಘರಾವನ್ನು ಭಾರತದಲ್ಲಿ ಸರಯೂ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. ವಿಶೇಷವಾಗಿ ಇದು ಹಿಂದೂ(Hindu) ದೇವರಾದ ರಾಮನ ಜನ್ಮಸ್ಥಳವಾದ ಅಯೋಧ್ಯೆ ನಗರದ ಮೂಲಕ ಹರಿಯುತ್ತದೆ. ಪ್ರಾಚೀನ ಭಾರತೀಯ ಮಹಾಕಾವ್ಯ ರಾಮಾಯಣದಲ್ಲಿ(Ramayana) ಈ ನದಿಯನ್ನು ಹಲವಾರು ಬಾರಿ ಉಲ್ಲೇಖಿಸಲಾಗಿದೆ.

click me!