ನಯಿನಾರ್ ನಾಗೇಂದ್ರನ್ ಊರಿನಲ್ಲಿ ಅವ್ರನ್ನ 'ಪಣ್ಣೆಯಾರ್' ಎಂದು ಕರೆಯಲಾಗುತ್ತದೆ. ಅಷ್ಟು ದೊಡ್ಡ ಫ್ಯಾಮಿಲಿ ಅವರದ್ದು. ತಿರುನೆಲ್ವೇಲಿಯಲ್ಲಿ ದೊಡ್ಡ ಹಾಲು ಫ್ಯಾಕ್ಟರಿ ಇಟ್ಕೊಂಡಿದ್ದರಿಂದ 'ಪಣ್ಣೆಯಾರ್' ಅಂತ ಕರೀತಾರಂತೆ. ಜಯಲಲಿತಾ ಸಮಾವೇಶಕ್ಕೆ ಜಾಗ ಹುಡುಕ್ತಿದ್ರಂತೆ. ಆಗ ನಯಿನಾರ್ ನಾಗೇಂದ್ರನ್ 100 ಎಕರೆ ಜಮೀನನ್ನೇ ಕೊಂಡ್ಕೊಟ್ಟರಂತೆ. ಜಯಲಲಿತಾ ಕೂಡ ಶಾಕ್ ಆಗಿದ್ರಂತೆ.
ಬ್ಯುಸಿನೆಸ್ ಮೇಲೆ ಜಾಸ್ತಿ ಫೋಕಸ್ ಇಟ್ಕೊಂಡಿರೋ ನಯಿನಾರ್, ತಮ್ಮ ಬ್ಯುಸಿನೆಸ್‌ನ ದುಡ್ಡನ್ನ ರಕ್ಷಣೆ ಮಾಡ್ಕೊಳ್ಳೋಕೆ ಪಾಲಿಟಿಕ್ಸ್‌ಗೆ ಬಂದ್ರಂತೆ. 1990-96ರಲ್ಲಿ ಮಿನಿಸ್ಟರ್ ಆಗಿದ್ದಾಗ ದುಡ್ಡು ಮಾಡ್ಕೊಂಡು, ಈಗ ನೂರಾರು ಕೋಟಿ ಒಡೆಯ ಆಗಿದ್ದಾರೆ ಎಂಬ ಆರೋಪಗಳು ಇವರ ಮೇಲಿವೆ. ಹೋಟೆಲ್, ಲಾಡ್ಜ್, ಕೇರಳದಲ್ಲಿ ರೆಸಾರ್ಟ್, ಜಮೀನು, ಬಾಡಿಗೆ ಹೀಗೆ ಹಲವು ವ್ಯವಹಾರಗಳಲ್ಲಿ ಈ ಕುಟುಂಬ ಸಕ್ರಿಯವಾಗದೆ.
10 ವರ್ಷದಿಂದ ರಿಯಲ್ ಎಸ್ಟೇಟ್‌ನಲ್ಲೂ ಈ ಕುಟುಂಬ ತನ್ನ ವ್ಯವಹಾರ ನಡೆಸಿಕೊಂಡು ಬರುತ್ತಿದೆ. ತಿರುನೆಲ್ವೇಲಿ ಮಾತ್ರ ಅಲ್ಲ, ಚೆನ್ನೈ, ಇಸಿಆರ್‌ನಲ್ಲೂ ದೊಡ್ಡ ಮನೆಯನ್ನು ನಯಿನಾರ್ ಹೊಂದಿದ್ದಾರೆ. ಎಗ್ಮೋರ್‌ನ ಬ್ಲೂ ಡೈಮಂಡ್ ಹೋಟೆಲ್ ಮಾಲೀಕರು ಇವರೇ ಆಗಿದ್ದಾರೆ.