ಮೂರು ವರ್ಷದಿಂದ ನಟಿಗೆ ಕಿರುಕುಳ, ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಾಸಕ

Published : Aug 21, 2025, 03:14 PM IST

ಕಾಂಗ್ರೆಸ್ ಶಾಸಕ ಮೂರು ವರ್ಷಗಳಿಂದ ಸತತವಾಗಿ ಖ್ಯಾತ ನಟಿಗೆ ಅಶ್ಲೀಲ ಸಂದೇಶ, ಹೊಟೆಲ್‌ಗೆ ಬರುವಂತೆ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಸ್ವತಃ ನಟಿ ಈ ಕುರಿತು ಹಲವು ಮಾಹಿತಿ ಬಹಿರಂಗಪಡಿಸಿದ್ದಾರೆ. ಈ ಕೋಲಾಹಲದ ನಡುವೆ ಕಾಂಗ್ರೆಸ್ ಶಾಸಕ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

PREV
17

ಖ್ಯಾತ ನಟಿ ರಿನಿ ಜಾರ್ಜ್‌ಗೆ ಕಳೆದ ಮೂರು ವರ್ಷದಿಂದ ಕೇರಳ ಕಾಂಗ್ರೆಸ್ ಶಾಸಕ ಸತತವಾಗಿ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಅಶ್ಲೀಲ ಸಂದೇಶ ರವಾನೆ, ಫೈವ್ ಸ್ಟಾರ್ ಹೊಟೆಲ್‌ಗೆ ಬರುವಂತೆ ಕಿರುಕುಳ, ಮಾನಸಿಕವಾಗಿಯೂ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಸ್ವತಃ ನಟಿ ರಿನಿ ಜಾರ್ಜ್ ಕಾಂಗ್ರೆಸ್ ನಾಯಕನ ಹೆಸರು ಹೇಳದೆ ಈ ಮಾಹಿತಿ ಬಹಿರಂಗಪಡಿದ್ದರು. ಇದರ ಬೆನ್ನಲ್ಲೇ ಕೇರಳ ಕಾಂಗ್ರೆಸ್ ಶಾಸಕ ರಾಹಲ್ ಮಮೂಕೂಟತಿಲ್ ವಿರುದ್ದ ಪಕ್ಷದ ನಾಯಕರು ಭಾರಿ ಆಕ್ರೋಶ ಹೊರಹಾಕಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಶಾಸಕ ರಾಹುಲ್ ಅನಿವಾರ್ಯವಾಗಿ ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

27

ರಿನಿ ಜಾರ್ಜ್ ಕಳೆದ ಮೂರು ವರ್ಷಗಳಿಂದ ಕೇರಳ ಶಾಸಕನಿಂದ ಅನುಭವಿಸುತ್ತಿರುವ ನೋವನ್ನು ಹೊರಹಾಕಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಕೇರಳ ಶಾಸಕನ ಪರಿಚಯವಾಗಿತ್ತು. ಅಲ್ಲಿಂದ ಕಿರುಕುಳ ಆರಂಭಗೊಂಡಿತ್ತು. ನಿರಂತರವಾಗಿ ಕಿರುಕುಳ ನೀಡಿದ್ದಾರೆ ಎಂದು ನಟಿ ಸಂದರ್ಶನ ಒಂದರಲ್ಲಿ ಮಾಹಿತಿ ಬಹಿರಂಗಪಡಿಸಿದ್ದರು.

37

ಮೂರು ವರ್ಷದ ಹಿಂದೆ ಕೇರಳ ಕಾಂಗ್ರೆಸ್ ಶಾಸಕನ ಕಿರುಕುಳ ಆರಂಭಗೊಂಡಿತ್ತು. ಫೈವ್ ಸ್ಟಾರ್ ಹೊಟೆಲ್‌ನಲ್ಲಿ ರೂಮ್ ಬುಕ್ ಮಾಡುವುದಾಗಿ ಹೇಳಿ ಕಿರುಕುಳ ನೀಡಿದ್ದರು. ರಾತ್ರಿ ಹೊಟೆಲ್ ರೂಂಗೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು ಎಂದು ರಿನಿ ಜಾರ್ಜ್ ಸಂದರ್ಶನದಲ್ಲಿ ಆರೋಪಿಸಿದ್ದರು. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕರು, ಸೇರಿದಂತೆ ಕಲ ನಾಯಕರಿಗೆ ಸೂಚಿಸಿದ್ದೆ. ಶಾಸಕನ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

47

ಕಾಂಗ್ರೆಸ್ ಶಾಸಕನ ಕಿರುಕಳ ಹೆಚ್ಚಾದ ಕಾರಣ ಸಂದರ್ಶನದಲ್ಲಿ ಬಹಿರಂಗಪಡಿಸುತ್ತಿದ್ದೇನೆ ಎಂದು ರಿನಿ ಜಾರ್ಜ್ ಆರೋಪಿಸಿದ್ದಾರೆ. ಶಾಸಕರು, ಕಾಂಗ್ರೆಸ್, ಪ್ರಭಾವಿಗಳ ವಿರುದ್ದ ಕಾನೂನು ಹೋರಾಟ ಮಾಡುವುದು ಸುಲಭವಲ್ಲ. ಹೀಗಾಗಿ ದೂರು ನೀಡಲು ಹೋಗಿಲ್ಲ ಎಂದು ರಿನಿ ಹೇಳಿದ್ದಾರೆ. ನನಗೆ ಮೆಸೇಜ್ ಮಾಡಿ ಕಿರುಕುಳ ನೀಡಿದ್ದಾರೆ. ಇದರಿಂದ ಮುಕ್ತಿ ಬೇಕಿದೆ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

57

ರಿನಿ ಜಾರ್ಜ್ ಈ ಸ್ಫೋಟಕ ಆರೋಪ ಕೇರಳ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿತ್ತು. ರಿನಿ ಜಾರ್ಜ್ ಹೆಸರು ಹೇಳದೆ ಆರೋಪ ಮಾಡಿದ್ದರು. ಆದರೆ ರನಿ ಜಾರ್ಜ್ ಆರೋಪದ ಬೆನ್ನಲ್ಲೇ ಕೇರಳ ಬಿಜೆಪಿ ಶಾಸಕ ರಾಹುಲ್ ಮಮೂಕೂಟತಿಲ್ ವಿರುದ್ಧ ಪ್ರತಿಭಟನೆ ನಡೆಸಿದೆ. ಕೇರಳ ಬಿಜೆಪಿ ನಾಯಕರ ಪ್ರತಿಭಟನೆ, ಸಾರ್ವಜನಿಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಕೇರಳ ಕಾಂಗ್ರೆಸ್ ತುರ್ತು ಸಭೆ ನಡೆಸಿ ನಾಯಕನ ವಿರುದ್ಧ ಅಸಮಾಧಾನ ಹೊರಹಾಕಿತ್ತು.

67

ಕೇರಳ ಕಾಂಗ್ರೆಸ್‌ ಹಾಗೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ, ಆಕ್ರೋಶಗಳು ವ್ಯಕ್ತವಾಗುತ್ತಿದ್ದಂತೆ ರಾಹಲ್ ಮಾಮೂಕೂಟತಿಲ್ ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಿನಿ ಜಾರ್ಜ್ ಆರೋಪವನ್ನು ರಾಹುಲ್ ಅಲ್ಲಗೆಳೆದಿದ್ದಾರೆ. ಈ ಆರೋಪಕ್ಕೆ ನಾನು ಸವಾಲು ಹಾಕುತ್ತಿದ್ದೇನೆ. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತುಪಡಿಸಲಿ. ಕೋರ್ಟ್ ಮುಂದೆ ಸಾಬೀತುಪಡಿಸಿ ಎಂದು ಸವಾಲು ಹಾಕಿದ್ದಾರೆ.

77

ನಟಿ ರಿನಿ ಜಾರ್ಜ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ಘಟನೆಗಳು ನಡೆದಿಲ್ಲ. ನಟಿ ತಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಲಿ ಎಂದಿದ್ದಾರೆ. ಇತ್ತ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತದೆ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories