ಬೆಂಗಳೂರಿಗೆ ಬಂದು ಅರಿಶಿಣ-ಕುಂಕುಮ ಪಡೆದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ತಾಯಿ: ಬೀಗತಿ ಸುಧಾಮೂರ್ತಿ ಸಾಥ್

First Published | Sep 10, 2023, 4:51 PM IST

ಬೆಂಗಳೂರು (ಸೆ.10): ದೇಶದಲ್ಲಿ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಆಗಮಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ದಂಪತಿಯೊಂದಿಗೆ ಅವರ ತಾಯಿ ಉಷಾ ಸುನಕ್‌ ಕೂಡ ಭಾರತಕ್ಕೆ ಆಗಮಿಸಿದ್ದಾರೆ. ಇದೇ ವೇಳೆ ದೆಹಲಿಯಿಂದ ಬೆಂಗಳೂರಿಗೆ ಬಂದ ಉಷಾ ಸುನಕ್‌ ಅವರು ತಮ್ಮ ಬೀಗತಿ ಸುಧಾಮೂರ್ತಿ ಅವರೊಂದಿಗೆ ಬೆಂಗಳೂರಿನ ಶಾಸಕ ಉದಯ ಗರುಡಾಚಾರ್‌ ಅವರ ಪತ್ನಿ ಮೇದಿನಿ ಗರುಡಾಚಾರ್‌ ಅವರಿಂದ ಭಾರತೀಯ ಸಂಪ್ರದಾಯದಂತೆ ಅರಿಶಿಣ-ಕುಂಕುಮ ಪಡೆದುಕೊಂಡಿದ್ದಾರೆ.

ಕೃಷ್ಣ ಜನ್ಮಾಷ್ಠಮಿ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಚಿಕ್ಕಪೇಟೆ ಶಾಸಕ ಡಾ. ಉದಯ್‌ ಬಿ ಗರುಡಾಚಾರ್‌ ಅವರ ಜಯನಗರದ ನಿವಾಸದಲ್ಲಿ ಕೃಷ್ಣನ ವಿವಿಧ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಉಷಾ ಸುನಕ್ ಅವರು ಕೃಷ್ಣನ ವೈಶಿಷ್ಟ್ಯಗಳನ್ನು ಕಣ್ತುಂಬಿಕೊಂಡರು.  

ಬ್ರಿಟನ್‌ ಪ್ರಧಾನಮಂತ್ರಿ ರಿಷಿ ಸುನಕ್‌ ಅವರ ತಾಯಿ ಉಷಾ ಸುನಕ್‌ ಅವರು ಬೆಂಗಳೂರಿನ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮಾಚಾರಣೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಉಷಾ ಸುನಕ್‌ ಸಾಂಪ್ರದಾಯಿಕವಾಗಿ ಕೃಷ್ಣನಿಗೆ ಪೂಜೆ ನೆರವೇರಿಸಿದರು.

Tap to resize

ಇನ್ಪೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಹಾಗೂ ಉಷಾ ಸುನಕ್‌ ಅವರ ಬೀಗತಿ ಡಾ. ಸುಧಾಮೂರ್ತಿ, ಡಾ. ಉದಯ್‌ ಗರುಡಾಚಾರ್, ಮೇದಿನಿ ಉದಯ್‌ ಗರುಡಾಚಾರ್‌, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಿ. ಮಂಜುನಾಥ್‌, ವಿವಿಧ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರು ಭಾಗವಹಿಸಿದ್ದರು.
 

ಜಿ-20 ಶೃಂಘಸಭೆಗೆ ಆಗಮಿಸಿದ್ದ ಯುಕೆ ಪ್ರಧಾನಿ ರಿಷಿ ಸುನಾಕ್ ಹಾಗೂ ಪತ್ನಿ ಅಕ್ಷತಾ ಮೂರ್ತಿ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ಮಾಡಿದರು.

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆ ಹಿನ್ನೆಲೆಯಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ಕುಟುಂಬ ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ದೆಹಲಿಗೆ ಆಗಮಿಸಿದ ಉಷಾ ಸುನಕ್‌ ಅವರು ಬೆಂಗಳೂರಿನ ತಮ್ಮ ಬೀಗರ ಮನೆಗೆ ಆಗಮಿಸಿದ್ದಾರೆ.

Latest Videos

click me!