ಜಿ20 ವಿಶೇಷ ಔತಣಕೂಟ, ಸೀರೆಯಲ್ಲಿ ಕಂಗೊಳಿಸಿದ ವಿದೇಶಿ ಗಣ್ಯರು!

Published : Sep 09, 2023, 08:55 PM ISTUpdated : Sep 09, 2023, 08:58 PM IST

ಜಿ20 ನಾಯಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಆಯೋಜಿಸಿದ್ದಾರೆ. ಈ ವಿಶೇಷ ಔತಣಕೂಟಕ್ಕೆ ಜಪಾನ್ ಪ್ರಧಾನಿ ಪತ್ನಿ, ಮಾರಿಷಸ್ ಪ್ರಧಾನಿ ಪತ್ನಿ ಸೇರಿದಂತೆ ಹಲವು ಗಣ್ಯರು ಸೀರೆಯಟ್ಟುಆಗಮಿಸಿ ಗಮನಸೆಳೆದಿದ್ದಾರೆ.

PREV
17
ಜಿ20  ವಿಶೇಷ ಔತಣಕೂಟ, ಸೀರೆಯಲ್ಲಿ ಕಂಗೊಳಿಸಿದ ವಿದೇಶಿ ಗಣ್ಯರು!

ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಯ ಪ್ರಮುಖ ಆಕರ್ಷಣೆಗಳಲ್ಲಿ ರಾಷ್ಟ್ರಪತಿ ಆಯೋಜಿಸಿದ ಔತಣಕೂಟವೂ ಒಂದಾಗಿದೆ.  ಜಿ20 ಶೃಂಗಸಭೆ ಗಣ್ಯರಿಗೆ ಔತಣಕೂಟ ಏರ್ಪಡಿಸಲಾಗಿದೆ.

27

ಜಿ20 ಶೃಂಗಸಭೆ ಆಗಮಿಸಿದ ಗಣ್ಯರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ಮೋದಿ ವಿಶೇಷ ಔತಣಕೂಟಕ್ಕೆ ಆಹ್ವಾನಿಸಿದ್ದಾರೆ. ಭಾರತ್ ಮಂಟಪದಲ್ಲಿ ಡಿನ್ನರ್ ಆಯೋಜಿಸಲಾಗಿದೆ.
 

37

ಜಿ20 ಶೃಂಗಸಭೆಯಲ್ಲಿ ಭಾರತದ ಶ್ರೀಮಂತ ಸಂಸ್ಕೃತಿ ಅನಾವರಣಗೊಂಡಿದೆ. ವಿಶೇಷ ಅಂದರೆ ಈ ಔತಣಕೂಟದಲ್ಲಿ ಹಲವು ವಿದೇಶಿ ಗಣ್ಯರು ಸೀರೆಯುಟ್ಟ ಕಂಗೊಳಿಸಿದ್ದಾರೆ. 

47

ರಾಷ್ಟ್ರಪತಿಗಳ ಆಹ್ವಾನದ ಔತಣಕೂಟಕ್ಕೆ  ಜಪಾನ್ ಪ್ರಧಾನಿ ಫುಮಿಯೋ ಕಿಶಿದಾ ಅವರ ಪತ್ನಿ ಯುಕೋ ಕಿಶಿದಾ ಸೀರೆಯುಟ್ಟು ಆಗಮಿಸಿದ್ದಾರೆ. ಈ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.

57

ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನೌಥ್ ಪತ್ನಿ ಕೋಬಿತಾ ಜುಗ್ನೌಥ್ ಸೀರೆ ಧರಿಸಿ ಜಿ20  ನಾಯಕರ ವಿಶೇಷ ಔತಣಕೂಟಕ್ಕೆ ಆಗಮಿಸಿದ್ದಾರೆ.

67

ಜಿ20 ನಾಯಕರ ಔತಣಕೂಟಕ್ಕೆ ದೇಶದ ಮಾಜಿ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಹಲವು ನಾಯಕರನ್ನು ಆಹ್ವಾನಿಸಲಾಗಿದೆ.  ಆದರೆ ಕಾಂಗ್ರೆಸ್ ಔತಣಕೂಟವನ್ನು ಟೀಕಿಸಿದೆ

77

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತ ಅನ್ನೋ ಕಾರಣಕ್ಕೆ ಔತಣಕೂಟಕ್ಕೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿದೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾಗೂ ಔತಣಕೂಟಕ್ಕೆ ಆಹ್ವಾನವಿಲ್ಲ

Read more Photos on
click me!

Recommended Stories