ತಮ್ಮ ಭೇಟಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡ ಯುಕೆ ಪ್ರಧಾನ ಮಂತ್ರಿ “ಈ ದೇವಾಲಯದ ಸೌಂದರ್ಯ ಮತ್ತು ಶಾಂತಿ, ಸಾಮರಸ್ಯ ಮತ್ತು ಉತ್ತಮ ಮಾನವನಾಗುವ ಅದರ ಸಾರ್ವತ್ರಿಕ ಸಂದೇಶದಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ ಮತ್ತು ವಿಸ್ಮಯಗೊಂಡಿದ್ದೇವೆ. ಇದು ಕೇವಲ ಆರಾಧನೆಯ ಸ್ಥಳವಲ್ಲ, ಆದರೆ ಭಾರತದ ಮೌಲ್ಯಗಳು, ಸಂಸ್ಕೃತಿ ಮತ್ತು ಜಗತ್ತಿಗೆ ನೀಡಿದ ಕೊಡುಗೆಗಳನ್ನು ಚಿತ್ರಿಸುವ ಹೆಗ್ಗುರುತಾಗಿದೆ’’ ಎಂದು ಹೇಳಿದರು.