ಬೆಂಗಳೂರು ಚೆನ್ನೈ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ವಂದೇ ಭಾರತ್‌ನಲ್ಲಿ ಇನ್ನು 4 ಗಂಟೆ ಸಾಕು!

First Published | Dec 6, 2024, 1:42 PM IST

ಬೆಂಗಳೂರು ಹಾಗೂ ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಹತ್ವದ ಅಪ್‌ಡೇಟ್ ನೀಡಿದೆ. ಇದೀಗ ಪ್ರಯಾಣದ ಸಮಯ ಮತ್ತಷ್ಟು ಇಳಿಕೆಯಾಗಿದೆ. ಇನ್ನು ಮುಂದೆ ಬೆಂಗಳೂರು ಚೆನ್ನೈಗೆ ಕೇವಲ 4 ಗಂಟೆ ಸಾಕು.
 

ಸಿಲಿಕಾನ್ ಸಿಟಿ ಬೆಂಗಳೂರು ಹಾಗೂ ಚೆನ್ನೈ ನಗರ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡುತ್ತಿದೆ. ಈ ನಗರಗಳ ಸಂಪರ್ಕಿಸುವ ವಂದೇ ಭಾರತ್ ರೈಲು ಬಾರಿ ಬೇಡಿಕೆಯ ಮಾರ್ಗವಾಗಿದೆ. ಇದೀಗ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಅಪ್‌ಗ್ರೇಡ್ ಆಗುತ್ತಿದೆ. ಇದರ ಪರಿಣಾಮ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಕೇವಲ 4 ಗಂಟೆಗೆ ಇಳಿಕೆಯಾಗಿದೆ.

ಬೆಂಗಳೂರು ಚೆನ್ನೈ ವಂದೇ ಭಾರತ್ ರೈಲು ಯಶಸ್ವಿಯಾಗಿ ಪ್ರಯಾಣ ಮಾಡುತ್ತಿದೆ. ಇದೀಗ ರೈಲು ಪ್ರಯಾಣ ಸಮಯವನ್ನು ಮತ್ತಷ್ಟು ಇಳಿಕೆ ಮಾಡಲು ವೇಗ ಹೆಚ್ಚಿಸಲಾಗುತ್ತಿದೆ. ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಗಂಟಗೆ 130 ಕಿ.ಮೀಗೆ ಹೆಚ್ಚಳ ಮಾಡಿ ಕಳೆದ ವರ್ಷ ಆದೇಶ ಮಾಡಲಾಗಿತ್ತು. ಶೀಘ್ರದಲ್ಲೇ ಈ ವೇಗ ಮಿತಿ ಹೆಚ್ಚಳ ಮಾಡಲಾಗುತ್ತಿದೆ.
 

Tap to resize

ಎರಡು ನಗರಗಳ ನಡುವಿನ ವಂದೇ ಭಾರತ್ ರೈಲು ಪ್ರಾಯೋಗಿಕ ಪರೀಕ್ಷೆ ವೇಳೆ ಗಂಟೆಗೆ ಬರೋಬ್ಬರಿ 183 ಕಿಲೋಮೀಟರ್ ವೇಗದಲ್ಲಿ ಸಂಚರಿಸಿತ್ತು. ಆದರೆ ಸುರಕ್ಷತೆ ಕಾರಣದಿಂದ ಈ ರೈಲು ಪ್ರಯಾಣದ ಮಾರ್ಗದಲ್ಲಿ ಗರಿಷ್ಠ ಮಿತಿ ಗಂಟೆಗೆ 160 ಕಿ.ಮಿ ನಿಗಧಿಪಡಿಸಲಾಗಿದೆ.  ಇದೀಗ ಸದ್ಯದ ವಂದೇ ಭಾರತ್ ರೈಲು ವೇಗ ಮಿತಿಯನ್ನು ಹೆಚ್ಚಿಸುವ ಮೂಲಕ ಪ್ರಯಾಣ ಸಮಯ ಕಡಿತಗೊಳಿಸಲಾಗುತ್ತಿದೆ.
 

ಸದ್ಯ ಬೆಂಗಳೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಪ್ರಯಾಣ ಅವಧಿ 4 ಗಂಟೆ 25 ನಿಮಿಷ. ಆದರೆ ಅಪ್‌ಗ್ರೇಡ್ ಬಳಿಕ 4 ಗಂಟೆಗೆ ಇಳಿಕೆಯಾಗಲಿದೆ. ಇದರ ಜೊತೆಗೆ ಪ್ರತಿ ದಿನ ಬೆಂಗಳೂರು-ಚೆನ್ನೈ ನಡುವೆ ಸಂಚರಿಸುತ್ತಿರುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸಲಾಗುತ್ತಿದೆ. ಇದರಿಂದ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ ವೇಗೆ 20 ನಿಮಿಷ ಕಡಿಮೆಯಾಗಲಿದೆ.
 

ಸದ್ಯ ಪ್ರತಿ ದಿನ ಬೆಂಗಳೂರು ಚೆನ್ನೈ ನಗರ ನಡುವ ಓಡಾಡುತ್ತಿರು ಶತಾಬ್ದಿ ಎಕ್ಸ್‌ಪ್ರೆಸ್ ರೈಲು 5 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಸೌತ್ ವೆಸ್ಟರ್ನ್ ರೈಲ್ವೇ ಬೆಂಗಳೂರು ವಿಭಾಗ ಡಿಸೆಂಬರ್ 5 ರಂದು ಮತ್ತೆ ವೇಗದ ಪ್ರಾಯೋಗಿಕ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯಲ್ಲಿ ವೇಗ ಮಿತಿ ಹೆಚ್ಚಳ ಪ್ರಯತ್ನಕ್ಕೆ ಫಲ ಸಿಕ್ಕಿದೆ.

ಭಾರತದಲ್ಲಿ ನಿರ್ಮಾಣವಾಗಿರುವ ವಂದೇ ಭಾರತ್ ರೈಲು ಇದೀಗ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ. ಇದೇ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಬೆಂಗಳೂರು ಚೆನ್ನೈ ನಡುವಿನ ರೈಲು ವೇಗ ಹೆಚ್ಚಳ ಬಳಿಕ ಇತರ ಕೆಲ ಮಾರ್ಗದ ವಂದೇ ಭಾರತ್ ರೈಲು ವೇಗ ಹೆಚ್ಚಳದ ಪ್ರಯತ್ನ ನಡೆಯಲಿದೆ. 

Latest Videos

click me!