ಇವರೇ ನೋಡಿ ಭಾರತದ ಅತ್ಯಂತ ಶ್ರೀಮಂತ ಶಾಸಕರು, ಡಿಕೆಶಿ ಮೊದಲಿಗರು, ಕರ್ನಾಟಕ, ಆಂಧ್ರದ್ದೇ ಬಹುಪಾಲು!

First Published | Jul 22, 2023, 2:00 PM IST

ದೇಶದ ಟಾಪ್ 10 ಶ್ರೀಮಂತ ಶಾಸಕರ ಹೆಸರನ್ನು ಇಲ್ಲಿ ನೀಡಲಾಗಿದೆ.  ಮೊದಲ ಸ್ಥಾನದಲ್ಲಿ ಕರ್ನಾಟಕದ ಡಿಕೆ ಶಿವಕುಮಾರ್ ಇದ್ದಾರೆ. ಟಾಪ್ 10 ಶ್ರೀಮಂತ ಶಾಸಕರಲ್ಲಿ ರಾಜ್ಯದ ಶಾಸಕರೇ ಹೆಚ್ಚು ಮಂದಿ ಇದ್ದಾರೆ. ಇದರ ಜೊತೆಗೆ  ಕಾಂಗ್ರೆಸ್ ಶಾಸಕರ ಸಂಖ್ಯೆಯೇ ಹೆಚ್ಚಿದೆ.
 

ಕೆಪಿಸಿಸಿ ಅಧ್ಯಕ್ಷ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು 1,413 ಕೋಟಿ ರೂಪಾಯಿ ಮೌಲ್ಯದ ಆಸ್ತಿಯೊಂದಿಗೆ ದೇಶದ ಅತ್ಯಂತ ಶ್ರೀಮಂತ ಶಾಸಕರಾಗಿದ್ದಾರೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್  ವರದಿ ಮಾಡಿದೆ. ಇವರು ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಮತ್ತು ನಗರ ಯೋಜನೆ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಪ್ರಸ್ತುತ ಕುಪ್ಪಂ ಕ್ಷೇತ್ರದ ಶಾಸಕರಾಗಿರುವ ಎನ್. ಚಂದ್ರಬಾಬು ನಾಯ್ಡು (ಟಿಡಿಪಿ)  ಅವರ ಒಟ್ಟು ಆಸ್ತಿ ರೂ 668 ಕೋಟಿ ಇದ್ದು, ನಾಲ್ಕನೇ ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ.

Tap to resize

ಗೋವಿಂದರಾಜನಗರ ಕ್ಷೇತ್ರದ ಶಾಸಕ, ಕಾಂಗ್ರೆಸ್‌ನ ಪ್ರಿಯಾ ಕೃಷ್ಣ 1,156 ಕೋಟಿಯೊಂದಿಗೆ ದೇಶದ ಮೂರನೇ ಅತೀ ಹೆಚ್ಚು ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ. 

ಗೌರಿಬಿದನೂರು ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ 1,267 ಕೋಟಿ ಆಸ್ತಿ  ಮೂಲಕ  ಎಡಿಆರ್‌ನ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಗುಜರಾತ್ ನಲ್ಲಿರುವ ಮಾನ್ಸಾ ಕ್ಷೇತ್ರದ ಬಿಜೆಪಿ ಶಾಸಕ ಜಯಂತಿಭಾಯ್ ಸೋಮಾಭಾಯ್ ಪಟೇಲ್ ಅವರು ಒಟ್ಟು  661 ಕೋಟಿ ರೂ ಆಸ್ತಿ ಹೊಂದಿರುವ ಮೂಲಕ ದೇಶದ 5 ನೇ ಶ್ರೀಮಂತ ಶಾಸಕನಾಗಿದ್ದಾರೆ.
 

 ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಅವರು 648 ಕೋಟಿ ಆಸ್ತಿ ಹೊಂದಿರುವ ದೇಶದ 6ನೇ ಶ್ರೀಮಂತ ಶಾಸಕ ಎನಿಸಿಕೊಂಡಿದ್ದಾರೆ. 

ಆಂಧ್ರ ಪ್ರದೇಶದ ಸಿಎಂ, ಪುಲಿವೆಂಡ್ಲಾ ಕ್ಷೇತ್ರದ ಶಾಸಕ ವೈಎಸ್ ಜಗನ್ ಮೋಹನ್ ರೆಡ್ಡಿ ಒಟ್ಟು  510 ಕೋಟಿ ರೂ ಮೊತ್ತದ ಆಸ್ತಿ ಹೊಂದಿದ್ದು, ದೇಶದ 7 ನೇ ಶ್ರೀಮಂತ ಶಾಸಕನಾಗಿದ್ದಾರೆ.

500 ಕೋಟಿ ರೂ ಆಸ್ತಿ ಹೊಂದಿರುವ ಮಹಾರಾಷ್ಟ್ರ ರಾಜ್ಯದ ಘಾಟ್‌ಕೋಪರ್ ಪೂರ್ವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಶಾಸಕ ಪರಾಗ್ ಶಾ ದೇಶದ 8 ನೇ ಶ್ರೀಮಂತ ಶಾಸಕನಾಗಿದ್ದಾರೆ.

500 ಕೋಟಿ ರೂ ಆಸ್ತಿ ಹೊಂದಿರುವ ಛತ್ತೀಸ್‌ಘಡ  ರಾಜ್ಯದ  ಅಂಬಿಕಾಪುರ ವಿಧಾನ ಸಭಾ ಕ್ಷೇತ್ರದ  ಕಾಂಗ್ರೆಸ್ ಶಾಸಕ ಟಿಎಸ್‌ ಬಾಬ  ದೇಶದ 9 ನೇ ಶ್ರೀಮಂತ ಶಾಸಕನಾಗಿದ್ದಾರೆ.

ಮಹಾರಾಷ್ಟ್ರದ ಮಲಬಾರ್ ಹಿಲ್ ಬಿಜೆಪಿ ಕ್ಷೇತ್ರದ ಶಾಸಕ ಮಂಗಲ ಪ್ರಭಾತ್ ಲೋಧಾ ಒಟ್ಟು  441 ಕೋಟಿ ರೂ ಆಸ್ತಿ ಹೊಂದಿದ್ದು, ದೇಶದ 10 ನೇ ಶ್ರೀಮಂತ ಶಾಸಕನಾಗಿದ್ದಾರೆ.

Latest Videos

click me!