ಭಾರತದ ಸೈನಿಕರ ಪಥಸಂಚಲನಕ್ಕೆ ಫ್ರೆಂಚ್‌ ಅಧ್ಯಕ್ಷ ಫಿದಾ, ಹೆಮ್ಮೆಯ ಕ್ಷಣ ಎಂದ ಭಾರತೀಯರು!

Published : Jul 14, 2023, 07:13 PM IST

ಬ್ಯಾಸ್ಟಿಲ್‌ ಡೇ ಎಂದು ಕರೆಯಲಾಗುವ ಫ್ರೆಂಚ್‌ ರಾಷ್ಟ್ರೀಯ ದಿನಕ್ಕೆ ಆಹ್ವಾನಿತರಾಗಿ ಪ್ರಧಾನಿ ನರೇಂದ್ರ ಮೋದಿ ತೆರಳಿದ್ದರು. ಈ ವೇಳೆ ಭಾರತದ ಮೂರೂ ಸೇನಾಪಡೆಗಳ ಪಥಸಂಚಲನ ಗಮನಸೆಳೆದಿದೆ. ಸ್ವತಃ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಟ್ವೀಟ್‌ ಮಾಡಿ ಸಂಭ್ರಮಿಸಿದ್ದಾರೆ.

PREV
113
ಭಾರತದ ಸೈನಿಕರ ಪಥಸಂಚಲನಕ್ಕೆ ಫ್ರೆಂಚ್‌ ಅಧ್ಯಕ್ಷ ಫಿದಾ, ಹೆಮ್ಮೆಯ ಕ್ಷಣ ಎಂದ ಭಾರತೀಯರು!

ವಿಶ್ವದ ಅತ್ಯಂತ ಆಕರ್ಷೀಣಯ ಸ್ಥಳಗಳ ಪೈಕಿ ಒಂದು ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನ ಶಾಂಪ್ಸ್‌ ಎಲ್ಲೀಸ್‌. ಇಡೀ ಫ್ರಾನ್ಸ್ ದೇಶದ ಸಂಭ್ರಮಗಳು ಆಗುವುದು ಇಲ್ಲಿಯೇ. ಇದೇ ಸ್ಥಳದಲ್ಲಿ ಭಾರತದ ಸೇನೆ ಪಥಸಂಚಲನ ಮಾಡಿದೆ.

213

ಶಾಂಪ್ಸ್‌-ಎಲ್ಲೀಸ್‌ನಲ್ಲಿ ಫ್ರಾನ್ಸ್‌ನ ರಾಷ್ಟ್ರೀಯ ದಿನದ ಪ್ರಯುಕ್ತ ನಡೆದ ಪಥಸಂಚನಲನದಲ್ಲಿ ಭಾರತದ ಮೂರೂ ಸೇನಾಪಡೆಗಳ ತುಕಡಿಗಳು ಭಾಗವಹಿಸಿದ್ದವು.

313

ಭಾರತೀಯ ಸೇನೆಯ ಪಥಸಂಚಲನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೆಲ್ಯುಟ್‌ ಹೊಡೆದು ಗೌರವಿಸಿದರು. ಈ ವೇಳೆ ಇತರ ಗಣ್ಯರು ಪಥಸಂಚಲನಕ್ಕೆ ಮೆಚ್ಚುಗೆ ಸೂಚಿಸಿದರು.

413

ಬಾಸ್ಟಿಲ್ ಡೇ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಅವರ ಸುರಕ್ಷತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಪರೇಡ್‌ನಲ್ಲಿ ಅಂದಾಜು 6 ಸಾವಿರ ಸೈನಿಕರು ಭಾಗವಹಿಸಿದ್ದರು.

513

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಪರೇಡ್ ಮೈದಾನ ತಲುಪಿ ತೆರೆದ ಜೀಪಿನಲ್ಲಿ ಸಂಚರಿಸುವ ಮೂಲಕ ಪರೇಡ್ ಉದ್ಘಾಟಿಸಿದರು.

613

ಫ್ರಾನ್ಸ್‌ನಲ್ಲಿ ನಡೆದ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಸಿಂಧು ರೆಡ್ಡಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ್ದಾರೆ. ಭಾರತದ ಮಹಿಳಾ ಶಕ್ತಿಯ ಶಕ್ತಿಯು ಫ್ರೆಂಚ್ ನೆಲದಲ್ಲಿಯೂ ಕಂಡುಬಂದಿದೆ. ಈ ಸಂದರ್ಭದಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ಉಪಸ್ಥಿತರಿದ್ದರು.

713

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಹಿಂದಿಯಲ್ಲಿ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದರು.

813

ಪ್ರಧಾನಿ ಮೋದಿ ಫ್ರಾನ್ಸ್‌ನಲ್ಲಿ ಭಾರತೀಯ ಸೇನೆಯ ಹಲವಾರು ಸೈನಿಕರನ್ನು ಭೇಟಿ ಮಾಡಿದರು. ಭಾರತದ ಎಲ್ಲಾ ಮೂರು ಸೇನಾಪಡೆಗಳು ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಷಯವಾಗಿತ್ತು.

913

ಫ್ರಾನ್ಸ್‌ನ ರಾಷ್ಟ್ರೀಯ ದಿನದಂದು ಪರೇಡ್‌ನಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಸೇನಾ ತುಕಡಿಯ ಗೌರವ ವಂದನೆ ಸ್ವೀಕರಿಸಿದರು. ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್‌ನ 77 ಕವಾಯತು ತಂಡ ಮತ್ತು 38 ಬ್ಯಾಂಡ್‌ಗಳು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಭಾಗವಹಿಸಿದ್ದವು. ಸೇನಾ ತುಕಡಿಯನ್ನು ಕ್ಯಾಪ್ಟನ್ ಅಮನ್ ಜಗತಾಪ್ ನೇತೃತ್ವ ವಹಿಸಿದ್ದರೆ, ನೌಕಾ ತುಕಡಿಯನ್ನು ಕಮಾಂಡರ್ ವ್ರತ್ ಬಾಘೆಲ್ ಲೀಡ್ ನೇತೃತ್ವ ವಹಿಸಿದ್ದರು. ಫ್ರಾನ್ಸ್‌ನಲ್ಲಿರುವ ಭಾರತೀಯ ವಾಯುಪಡೆಯ ತುಕಡಿಯನ್ನು ಸ್ಕ್ವಾಡ್ರನ್ ಲೀಡರ್ ಸಿಂಧು ರೆಡ್ಡಿ ನೇತೃತ್ವ ವಹಿಸಿದ್ದರು.

1013

ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್ ಭಾರತದಲ್ಲಿ ನಡೆಯುವ ಗಣರಾಜ್ಯೋತ್ಸವದ ಮೆರವಣಿಗೆಯಂತೆಯೇ ಇರುತ್ತದೆ. ಒಟ್ಟು ಮೂರು ರಫೇಲ್ ಜೆಟ್‌ಗಳು ಈ ಪರೇಡ್‌ನಲ್ಲಿ ಭಾಗವಹಿಸಿದ್ದು, ಸಾರೇ ಜಹಾನ್‌ ಸೇ ಅಚ್ಚಾ ಗೀತೆ ಇಲ್ಲಿ ಮೊಳಗಿತು.

1113

ಪರೇಡ್‌ನ ವೇಳೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಹಾಗೂ ನರೇಂದ್ರ ಮೋದಿ ನಡುವಿನ ಗೆಳೆತನ ಕುರಿತಾದ ಕೆಲವು ದೃಶ್ಯಗಳು ಕಾಣಿಸಿದವು. ರಫೇಲ್‌ ಜೆಟ್‌ಗಳು ಪ್ಯಾರಿಸ್‌ನ ಬಾನಂಗಳದಲ್ಲಿ ಹಾರಾಡಿದವು.

1213

ಭಾರತದಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನವನ್ನು ಆಯೋಜಿಸಿದಂತೆ ಜುಲೈ 14 ಫ್ರಾನ್ಸ್‌ಗೆ ಬಹಳ ವಿಶೇಷವಾಗಿದೆ. ಈ ಬಾರಿ ಭಾರತದ ಎಲ್ಲಾ ಮೂರು ಸೇನೆಗಳು ಸಹ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸುವ ಮೂಲಕ ಭಾರತ ಮತ್ತು ಫ್ರಾನ್ಸ್ ನಡುವಿನ ಸ್ನೇಹಕ್ಕೆ ಸಾಕ್ಷಿಯಾದವು.

1313

ಪ್ರತಿ ವರ್ಷ, ಬಾಸ್ಟಿಲ್ ಡೇ ಮೆರವಣಿಗೆಯ ಸಂದರ್ಭದಲ್ಲಿ, ಫ್ರಾನ್ಸ್ ಅಧ್ಯಕ್ಷರು ವಿಶ್ವ ನಾಯಕರು ಮತ್ತು ರಾಷ್ಟ್ರಗಳ ಮುಖ್ಯಸ್ಥರನ್ನು ಅತಿಥಿಯಾಗಿ ಆಹ್ವಾನಿಸುತ್ತಾರೆ. ಈ ಬಾರಿ ಈ ವಿಶೇಷ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಈ ಹಿಂದೆ 2009ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಈ ಗೌರವಕ್ಕೆ ಪಾತ್ರರಾಗಿದ್ದರು. ಬಾಸ್ಟಿಲ್ ಡೇ ಪರೇಡ್‌ಗೆ ಆಹ್ವಾನ ಪಡೆದ ಭಾರತದ ಎರಡನೇ ಪ್ರಧಾನಿ ನರೇಂದ್ರ ಮೋದಿ.

Read more Photos on
click me!

Recommended Stories