Chandrayaan-3: ಬಾಹ್ಯಾಕಾಶದಲ್ಲಿ ಭಾರತದ ಭೀಮಬಲ ಕಣ್ತುಂಬಿಕೊಂಡ ಅಭಿಮಾನಿಗಳು

Published : Jul 14, 2023, 05:00 PM ISTUpdated : Jul 14, 2023, 05:03 PM IST

ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಮಾಡಿದ ವಿಶ್ವದ ಮೊದಲ ದೇಶ ಹಾಗೂ ಚಂದ್ರನ ನೆಲದ ಮೇಲೆ ಕಾಲಿಟ್ಟ ನಾಲ್ಕನೇ ದೇಶ ಎನ್ನುವ ಸಾಧನೆ ಮಾಡುವ ನಿಟ್ಟಿನಲ್ಲಿ ಭಾರತದ ಚಂದ್ರಯಾನ-3 ತನ್ನೆಲ್ಲಾ ತಂತ್ರಜ್ಞಾನಗಳನ್ನು ಹೊತ್ತುಕೊಂಡು ನಭಕ್ಕೆ ಹಾರಿದೆ.  ಚಿತ್ರಗಳು: ರವಿಶಂಕರ್ ಭಟ್, ಕನ್ನಡ ಪ್ರಭ

PREV
19
Chandrayaan-3: ಬಾಹ್ಯಾಕಾಶದಲ್ಲಿ ಭಾರತದ ಭೀಮಬಲ ಕಣ್ತುಂಬಿಕೊಂಡ ಅಭಿಮಾನಿಗಳು

ಶುಕ್ರವಾರ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿ ಚಂದ್ರಯಾನ-3 ನಭಕ್ಕೆ ಉಡಾವಣೆಯಾಯಿತು. ಈ ವೇಳೆ ಸಾವಿರಾರು ಪ್ರಯಾಣಿಕರು ಸಾಕ್ಷಿಯಾಗಿದ್ದರು.

29

ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಲ್ಲಿ ಅಂದಾಜು 10 ಸಾವಿರಕ್ಕೂ ಅಧಿಕ ಮಂದಿ ಚಂದ್ರಯಾನ-3 ಉಡಾವಣೆಯನ್ನು ನೇರವಾಗಿ ವೀಕ್ಷಣೆ ಮಾಡಿದರು.

39

ಇಸ್ರೋದಿಂದ ಬಾಹುಬಲಿ ಎಂದೇ ಗುರುತಿಸಿಕೊಂಡಿರುವ ಹೆಲಿ ಲಿಫ್ಟ್‌ ಲಾಂಚ್‌ ವೆಹಿಕಲ್‌ ಎಲ್‌ವಿಎಂ/ಎಂ4 ರಾಕೆಟ್‌ನ ಮೂಲಕ ಚಂದ್ರಯಾನ-3ಯನ್ನು ಉಡಾವಣೆ ಮಾಡಲಾಯಿತು

49

ಭೂಮಿಯಿಂದ ಚಂದ್ರನವರೆಗಿನ ಪ್ರಯಾಣವನ್ನು 40 ದಿನಗಳಲ್ಲಿ ಕ್ರಮಿಸಲಾಗುತ್ತದೆ. ಅಂದಾಜಿನ ಪ್ರಕಾರ ಆಗಸ್ಟ್‌ 23 ಅಥವಾ 24 ರಂದು ಚಂದ್ರನ ನೆಲದ ಮೇಲೆ ಭಾರತ ಕಾಲಿಡಲಿದೆ.

59

ಶ್ರೀಹರಿಕೋಟಾದಲ್ಲಿ ಹಾಕಲಾಗಿದ್ದ ಬೃಹತ್‌ ಪರದೆಯ ಮೂಲಕ ಚಂದ್ರಯಾನ-3ಯ ಉಡಾವಣೆಯ ನೇರ ವೀಕ್ಷಣೆಯನ್ನು ಮಾಡಲಾಯಿತು. ವಿದ್ಯಾರ್ಥಿಗಳು, ಖಗೋಳಾಸಕ್ತರು ಈ ವೇಳೆ ಹಾಜರಿದ್ದರು.

69

ಚಂದ್ರನ ನೆಲದ ಮೇಲೆ ಕಾಲಿಟ್ಟ ಬಳಿಕ ಒಂದು ಚಂದ್ರನ ದಿನ (ಭೂಮಿಯ ಮೇಲೆ 14 ದಿನ) ರೋವರ್‌ ಕಾರ್ಯಾಚರಣೆ ಮಾಡುತ್ತದೆ. ವಿವಿಧ ಪ್ರದೇಶಗಳ ಸಂಶೋಧನೆಯಲ್ಲಿ ಭಾಗಿಯಾಗಲಿದೆ/

79

ಈವರೆಗೂ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಚಂದ್ರನ ಮೇಲೆ ಕಾಲಿಟ್ಟ ದೇಶಗಳಾಗಿವೆ. ಆದರೆ, ಭೂಮಿಯಲ್ಲಿರುವವರ ಪಾಲಿಗೆ ಎಂದಿಗೂ ಅಜ್ಞಾತವಾಗಿರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ತನ್ನ ಲ್ಯಾಂಡರ್‌ ಅನ್ನು ಇಳಿಸಲಿದೆ.

89

ಚಂದ್ರಯಾನ-3ಯಲ್ಲಿ ಒಟ್ಟು ಮೂರು ಪ್ರಮುಖ ವಸ್ತುಗಳಿವೆ. ಪ್ರೊಪಲ್ಶನ್‌ ಮಾಡೆಲ್‌, ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌.

99

ಚಂದ್ರಯಾನ-2 ವೇಳೆ ಭಾರತ ಆರ್ಬಿಟರ್‌ಅನ್ನು ಚಂದ್ರನ ಕಕ್ಷೆಗೆ ಸೇರಿಸಿತ್ತು. ಇದೇ ಆರ್ಬಿಟರ್‌ಅನ್ನು ಭಾರತ ಈ ಬಾರಿಯೂ ಬಳಸಿಕೊಳ್ಳಲಿದ್ದು, ಚಂದ್ರಯಾನ-3ಯ ಚಲನವಲಗಳ ಮೇಲೆ ಕಣ್ಗಾವಲಿಡಲಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories