ಭಾರತದ ಟಾಪ್ 6 ಆತ್ಮಹತ್ಯೆ ಕೇಸ್ ಹೊಂದಿರುವ ನಗರಗಳಲ್ಲಿ ಬೆಂಗಳೂರು!

First Published | Aug 29, 2024, 9:34 PM IST

ನಮ್ಮ ದೇಶದಲ್ಲಿ ದೀರ್ಘಕಾಲಿಕ ಮತ್ತು ಆರೋಗ್ಯಕರ ಜೀವನ ಶೈಲಿಗೆ ಒತ್ತುಕೊಡುವ ಸಂಪ್ರದಾಯವಿದೆ. ಇದು ಗ್ರಾಮೀಣ ಭಾಗದಲ್ಲಿ ಇದನ್ನಿ ಹೆಚ್ಚಾಗಿ ಅನ್ವಯ ಮಾಡಿಕೊಳ್ಳುತ್ತಾರೆ. ಹೀಗಾಗಿ, ಹಿಂದೂ ಮಂತ್ರಗಳಲ್ಲಿ ಮತ್ತು ಆಶೀರ್ವಾದದಲ್ಲಿ ಆಯುಷ್ಮಾನ್ ಭವ ಎಂಬ ಪದವನ್ನು ಬಳಸಲಾಗುತ್ತಿದೆ. ಆದರೆ, ಇದೀಗ ನಗರಗಳಲ್ಲಿ ಒತ್ತಡದ ಜೀವನ ಶೈಲಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾದರೆ, ಅತಿ ಹೆಚ್ಚು ಆತ್ಮಹತ್ಯೆ ದರಗಳನ್ನು ಹೊಂದಿದ ಭಾರತೀಯ ನಗರಗಳ ಪಟ್ಟಿ ಇಲ್ಲಿದೆ ನೋಡಿ.

ಕೇರಳದ ಕೊಲ್ಲಂ ನಗರವು ಭಾರತೀಯ ನಗರಗಳಲ್ಲಿ ಅತಿ ಹೆಚ್ಚು ಆತ್ಮಹತ್ಯೆ ದರವನ್ನು ಹೊಂದಿದೆ ನಗರವಾಗಿದೆ. ಈ ನಗರವು ಬರೋಬ್ಬರಿ 43.9 ಸ್ವಯಂ ಸಾವು ಪ್ರಕರಣಗಳನ್ನು ಹೊಂದಿದೆ.

ಪಶ್ಚಿಮ ಬಂಗಾಳದ ಆಸನ್ಸೋಲ್ ಎರಡನೇ ಅತಿ ಹೆಚ್ಚು ಆತ್ಮಹತ್ಯೆ ದರವನ್ನು ಹೊಂದಿದ ನಗರವಾಗಿದೆ. ಈ ನಗರದಲ್ಲಿ ಪ್ರತಿ 1,00,000 ಜನರಿಗೆ ತಲಾ 38.5 ಜನರು ಸ್ವಯಂ ಸಾವಿಗೆ ಶರಣಾಗುತ್ತಾರೆ.

Tap to resize

ನಮ್ಮ ದೇಶದ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದೆಹಲಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿ ಆಗುತ್ತಿವೆ. 2021 ರಲ್ಲಿ 2,760 ಪ್ರಕರಣಗಳು ವರದಿಯಾಗಿವೆ.

ನಮ್ಮ ದೇಶದ ವಾಣಿಜ್ಯ ನಗರಿ, ಮಾಯಾನಗರಿ ಎಂದು ಪ್ರಸಿದ್ಧಿಯಾದ ಮುಂಬೈ ನಗರದಲ್ಲಿ 2021 ರಲ್ಲಿ ಬರೋಬ್ಬರಿ 1,436 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಅಂದರೆ 2020ಕ್ಕೆ ಹೋಲಿಕೆ ಮಾಡಿದರೆ ವಾರ್ಷಿಕ 12% ಹೆಚ್ಚಳವಾಗಿದೆ.

ದಕ್ಷಿಣ ಭಾರತದ ಪ್ರಮುಖ ಬಂದರು ನಗರಗಳಲ್ಲಿ ಒಂದಾಗಿರುವ ತಮಿಳುನಾಡು ರಾಜ್ಯದ ಚೆನ್ನೈ ನಗರದಲ್ಲಿ 2021ರಲ್ಲಿ ಒಟ್ಟು 2,699 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. ಅಂದರೆ, ಕಳೆದ 2020ಕ್ಕೆ ಹೋಲಿಕೆ ಮಾಡಿದರೆ, ಶೇ.11.1 ಹೆಚ್ಚಳವಾಗಿದೆ.

ಇನ್ನು ದೇಶದಲ್ಲಿ ಸಿಲಿಕಾನ್ ಸಿಟಿ ಎಂದು ಖ್ಯಾತಿಯಾಗಿರುವ ಬೆಂಗಳೂರು ನಗರದಲ್ಲಿ 2021 ರಲ್ಲಿ ಒಟ್ಟು 2,292 ಜನರು ಸ್ವಯಂ ಸಾವಿಗೆ ಶರಣಾಗಿದ್ದಾರೆ. ಇದು 2020ಕ್ಕೆ ಹೋಲಿಕೆ ಮಾಡಿದಲ್ಲಿ ಶೇ4.4 ಮಾತ್ರ ಹೆಚ್ಚಳವಾಗಿದೆ. ಆದರೆ, ಇಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದ್ದು, ಅಪರಾಧ ಪ್ರಕರಣ ತಡೆಗಟ್ಟುವಲ್ಲಿ ಪೊಲೀಸರು ಕಠಿಣ ಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ.

Latest Videos

click me!