ಭಾರತದಲ್ಲಿ ಅತಿಹೆಚ್ಚು ಬಳಸುವ ಟಾಪ್ 10 ಹೆಸರುಗಳು!

Published : Aug 29, 2024, 08:35 PM IST

ಸರ್ವ ಜನಾಂಗದ ಸಮ್ಮಿಳಿತವಾಗಿರುವ ನಮ್ಮ ಭಾರತ ದೇಶದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿ ಧರ್ಮದ ಜನರು ವಾಸವಾಗಿದ್ದಾರೆ. ಆದರೆ, ಇಲ್ಲಿ ಬಹುಸಂಖ್ಯಾತರಾಗಿರುವ ಹಿಂದೂಗಳಲ್ಲಿ ಅತಿಹೆಚ್ಚಾಗಿ ಬಳಸಲ್ಪಡುವ ಹೆಸರುಗಳು ಹಾಗೂ ಅಲ್ಪಸಂಖ್ಯಾತರದಲ್ಲಿ ಅತಿಹೆಚ್ಚಾಗಿ ಬಳಸುವ ಹೆಸರುಗಳು ಇಲ್ಲಿವೆ ನೋಡಿ. ಸಾಮಾನ್ಯವಾಗಿ ಈ ಹೆಸರುಗಳಿಂದಲೇ ಹೆಚ್ಚಿನ ಜನರು ಕರೆಯಲ್ಪಡುತ್ತಾರೆ.

PREV
110
ಭಾರತದಲ್ಲಿ ಅತಿಹೆಚ್ಚು ಬಳಸುವ ಟಾಪ್ 10 ಹೆಸರುಗಳು!
ayodhya ram temple crowd

ರಾಮ (Ram) ದೇಶದ ಪ್ರತಿ 1,200 ಜನರ ಪೈಕಿ ಒಬ್ಬರಿಗೆ ರಾಮ ಎಂದು ಹೆಸರಿಡಲಾಗುತ್ತಿದೆ. ಇನ್ನು ಮಹಿಳೆಯರಿಗೂ ಕೂಡ ರಮಾ (ರಾಮ) ಎಂಬ ಹೆಸರಿಡಲಾಗುತ್ತದೆ. ಹೀಗಾಗಿ, ದೇಶದಲ್ಲಿ ಬರೋಬ್ಬರು 56,48,344 ಜನರು ರಾಮ ಎಂಬ ಹೆಸರಿನ್ನು ಇಟ್ಟುಕೊಂಡಿದ್ದಾರೆ.

210

ನಮ್ಮ ದೇಶದಲ್ಲಿ ಹಿಂದೂಗಳನ್ನು ಬಿಟ್ಟರೆ ಉಳಿದಂತೆ ಅತಿಹೆಚ್ಚು ಜನಸಂಖ್ಯೆ ಹೊಂದಿದ ಧರ್ಮವೆಂದರೆ ಅದು ಮುಸ್ಲಿಂ ಸಮುದಾಯವಾಗಿದೆ. ಮುಸ್ಲಿಂ ಸಮುದಾಯದಲ್ಲಿ ಮೊಹಮ್ಮದ್ (Mohammed) ಎಂಬ ಹೆಸರನ್ನು ಹೆಚ್ಚಾಗಿ ಬಳಕೆ ಮಾಡಲಗುತ್ತದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಪ್ರತಿ 1,287 ಜನರಲ್ಲಿ ಒಬ್ಬರಿಗೆ ಮೊಹಮ್ಮದ್ ಎಂಬ ಹೆಸರಿಡಲಾಗುತ್ತದೆ. ಒಟ್ಟಾರೆ ದೇಶದಲ್ಲಿ 42,30,997 ಜನರು ಮೊಹಮ್ಮದ್ ಎಂಬ ಹೆಸರನ್ನು ಹೊಂದಿದವರಿದ್ದಾರೆ.

310

ಮಹಿಳೆಯರ ಪೈಕಿ ಅತಿಹೆಚ್ಚು ಬಳಕೆಯಲ್ಲಿರುವ ಹೆಸರೆಂದರೆ ಅದು ಸುನಿತಾ (Sunitha). ಪ್ರತಿ 1,299 ಜನರಿಗೆ ಒಬ್ಬರಂತೆ ಸುನಿತಾ ಎಂಬ ಹೆಸರನ್ನು ಹೊಂದಿದ ಹೆಣ್ಣುಮಕ್ಕಳಿದ್ದಾರೆ. ಒಟ್ಟಾರೆ ನಮ್ಮ ದೇಶದಲ್ಲಿ 40,65,176 ಜನರಿಗೆ ಸುನಿತಾ ಎಂಬ ಹೆಸರಿದೆ.

410
Viral Video Couple Dance On Crowded Railway Platform

ಸಾಮಾನ್ಯವಾಗಿ ಕೆಲವು ಹೆಸರುಗಳು ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಕರೆಯಲಾಗುತ್ತದೆ. ಅಂತಹ ಹೆಸರಲ್ಲಿ ಒಂದಾದ ಶ್ರೀ (Sri- Shree) ಎಂಬ ಹೆಸರು ಕೂಡ ಒಂದಾಗಿದೆ. ಅದರಲ್ಲಿ ಶೇ.88 ಗಂಡಸಿಗೆ ಹಾಗೂ ಶೇ.12 ಮಹಿಳೆಯರಿಗೆ ಈ ಹೆಸರನ್ನಿಡಲಾಗಿದೆ. ಒಟ್ಟಾರೆ ದೇಶದಲ್ಲಿ 36,91,429 ಜನರು ಶ್ರೀ ಎಂಬ ಹೆಸರಿನವರಿದ್ದಾರೆ.

510

ಹೆಣ್ಣು ಮಕ್ಕಳಿಗೆ ಇಡುವ ಮತ್ತೊಂದು ಪ್ರಸಿದ್ಧ ಹೆಸರೆಂದರೆ ಅದು ಅನಿತಾ (Anitha). ಪ್ರತಿ 1,347 ಜನರಲ್ಲಿ ಒಬ್ಬರಿಗೆ ಈ ಹೆಸರನ್ನು ಇಡಲಾಗುತ್ತಿದ್ದು, ನಮ್ಮ ದೇಶದಲ್ಲಿ ಅತಿ ಹೆಚ್ಚಾಗಿ ಬಳಸುವ ಹೆಸರುಗಳಲ್ಲಿ 5ನೇ ಸ್ಥಾನದಲ್ಲಿದೆ. ಒಟ್ಟಾರೆ 35,01,631 ಹೆಣ್ಣುಮಕ್ಕಳು ಅನಿತಾ ಎಂಬ ಹೆಸರಿನವರು ಇದ್ದಾರೆ.

610
crowd

ಪ್ರತಿ ಶಾಲೆ, ಕಾಲೇಜು, ಕಚೇರಿಗಳಲ್ಲಿ ಸಂತೋಷ್ (Santosh) ಎಂಬ ಹೆಸರಿನ ಮೂರ್ನಾಲ್ಕು ಜನರು ಸಿಕ್ಕೇ ಸಿಗುತ್ತಾರೆ. ಇದು ನಮ್ಮ ರಾಜ್ಯದಲ್ಲಿಯೂ ಕಾಣಬಹುದು. ಇನ್ನು ದೇಶದಲ್ಲಿ 34,15,372 ಜನರು ಸಂತೋಷ್ ಎಂಬ ಹೆಸರನ್ನು ಹೊಂದಿದವರಿದ್ದಾರೆ. ಗಂಡು ಮತ್ತು ಹೆಣ್ಣುಮಕ್ಕಳಿಬ್ಬರಿಗೂ ಈ ಹೆಸರನ್ನು ಬಳಸುತ್ತಾರೆ. ಪ್ರತಿ 1,356 ಜನರಲ್ಲಿ ಒಬ್ಬರಿಗೆ ಈ ಸಂತೋಷ್ ಎಂಬ ಹೆಸರನ್ನಿಡಲಾಗುತ್ತದೆ.

710

ಉತ್ತರ ಭಾರತದಲ್ಲಿ ಅತಿಹೆಚ್ಚಾಗಿ ಬಳಕೆಯಲ್ಲಿರುವ ಹೆಸರೆಂದರೆ ಅದು ಸಂಜಯ್ (Sanjay). ನಮ್ಮ ದೇಶದಲ್ಲಿ 31,88,335 ಜನರಿಗೆ ಸಂಜಯ್ ಎಂಬ ಹೆಸರನ್ನು ಹೊಂದಿದವರಿದ್ದಾರೆ. ದಕ್ಷಿಣ ಭಾರತದಲ್ಲಿ ಸಂಜಯ್ ಹೆಸರಿನವರ ಸಂಖ್ಯೆ ಸ್ವಲ್ಪ ಕಡಿಮೆ ಎಂದು ಹೇಳಬಹುದು.

810
Crowded

ಸುನೀಲ್ (Sunil) ಎಂಬ ಹೆಸರು ಕೂಡ ಹೆಚ್ಚು ಚಾಲ್ತಿಯಲ್ಲಿದೆರ. ಪ್ರತಿ 1,399 ಜನರಿಗೆ ಒಬ್ಬರಂತೆ ಸುನಿಲ್ ಎಂಬ ಹೆಸರನ್ನು ಹೊಂದಿದವರಿದ್ದಾರೆ. ಒಟ್ಟಾರೆ, ದೇಶದಲ್ಲಿ 30,48,070 ಜನರು ಸುನೀಲ್ ಎಂಬ ಹೆಸರುಳ್ಳವರಿದ್ದಾರೆ.

910

ಕಳೆದ 1990ರ ದಶಕಗಳಿಂದೀಚೆಗೆ ಚಾಲ್ತಿಯಲ್ಲಿರುವ ಹೆಸರುಗಳಲ್ಲಿ ರಾಜೇಶ್ (Rajesh) ಎಂಬ ಹೆಸರು ಕೂಡ ಒಂದಾಗಿದೆ. ದೇಶದಲ್ಲಿ ಪ್ರತಿ 1,417 ಜನರಲ್ಲಿ ಒಬ್ಬರಿಗೆ ರಾಜೇಶ್ ಎಂಬ ಹೆಸರಿದ್ದು, ಒಟ್ಟಾರೆ 29,10,994 ಜನರು ಈ ಹೆಸರನ್ನು ಹೊಂದಿದವರಿದ್ದಾರೆ.

1010

ಮಹಿಳೆಯರ ಪೈಕಿ ಅತ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಮತ್ತೊಂದು ಹೆಸರು ಗೀತಾ (Gita - Geetha). ಇದು ಸಂಪೂರ್ಣ ಹೆಣ್ಣುಮಕ್ಕಳ ಹೆಸರಾಗಿದ್ದು, ಒಟ್ಟು 28,67,531 ಜನರು ಗೀತಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದಾರೆ.

click me!

Recommended Stories