ಹಿಂದಿನ ಕಾಲದಲ್ಲಿ, ಭಾರತೀಯ ರಾಜಮನೆತನಗಳು ಐಷಾರಾಮಿ ಕಾರುಗಳನ್ನು, ವಿಶೇಷವಾಗಿ ವಿದೇಶಗಳಿಂದ ಆಮದಿಸಿದ ಉನ್ನತ ಮಾದರಿಗಳನ್ನು ಹೊಂದುವ ಹಂಬಲವನ್ನು ಹೊಂದಿದ್ದವು. ಈ ರಾಜಮನೆತನಗಳಲ್ಲಿ, ಪಟಿಯಾಲದ ಮಹಾರಾಜ ಭೂಪಿಂದರ್ ಸಿಂಗ್ ತಮ್ಮ ರೋಲ್ಸ್ ರಾಯ್ಸ್ ಕಾರುಗಳ ಸಂಗ್ರಹಕ್ಕೆ ಹೆಸರುವಾಸಿಯಾಗಿದ್ದರು. ಜರ್ಮನ್ ನಾಯಕ ಅಡಾಲ್ಫ್ ಹಿಟ್ಲರ್ ಇವರಿಗೆ ಐಷಾರಾಮಿ ಕಾರ್‌ಅನ್ನು ಉಡುಗೊರೆಯಾಗಿ ನೀಡಿದ್ದರು ಎಂದು ಹೇಳಲಾಗಿದೆ.