ಮುಖ್ಯವಾಗಿ ಭಾರತದಲ್ಲಿ ಗಗನ ಸಖಿಯರಿ ಗಾಢ ನೀಲಿ ಬಣ್ಣದ ಒಂದು ಸ್ಕರ್ಟ್ ಧರಿಸುತ್ತಾರೆ. ಜೊತೆಗೆ, ವಿವಿಧ ಕಂಪನಿಗಳ ಗಗನ ಸಖಿಯರು ಕೆಲವೊಮ್ಮೆ ಸಾಂಪ್ರದಾಯಿಕ ಉಡುಗೆಯಾದ ಸೀರೆಯನ್ನು ಕೂಡ ಧರಿಸುತ್ತಾರೆ.
ದೇಹ ಸೌಂದರ್ಯಕ್ಕೆ ಅತಿಹೆಚ್ಚು ಆಧ್ಯತೆ ನೀಡುವ ದೇಶವಾದ ಚೀನಾದ ವಿಮಾನಯಾನದಲ್ಲಿ ಗಗನ ಸಖಿಯರು ಕೂಡ ಉತ್ತಮ ಸಮವಸ್ತ್ರಗಳನ್ನು ಧರಿಸಿ ಪ್ರಯಾಣಿಕರಿಗೆ ಸೇವೆ ನೀಡುತ್ತಾರೆ. ಇವರು ಕೆಂಪು ಶರ್ಟ್ ಮತ್ತು ಸಿಮೆಂಟ್ ಕಲರ್‌ನ ಸ್ಕರ್ಟ್ ಹೊಂದಿದ್ದಾರೆ.
ನೀಲಿ ಬಣ್ಣದ ಬ್ಲೇಜರ್ ಮತ್ತು ಪ್ಯಾಂಟ್ ಅಥವಾ ಸ್ಕರ್ಟ್ ಧರಿಸುವ ಮಹಿಳೆಯರು ರಷ್ಯಾ ದೇಶದ ಗಗನ ಸಖಿಯರಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಪುರುಷರಿಗೂ ಅವಕಾಶವಿದೆ.
ಇನ್ನು ನಮ್ಮ ವಿರೋಧಿ ಮತ್ತು ನೆರೆಹೊರೆ ರಾಷ್ಟ್ರವಾಗಿರುವ ಪಾಕಿಸ್ತಾನ ರಾಷ್ಟ್ರದ ಗಗನ ಸಖಿಯರು ಸಿಂಪಲ್ ಆಗಿ ಗುಲಾಬಿ ಬಣ್ಣದ ಚೂಡಿದಾರ್ ಮತ್ತು ಮೇಲೊಂದು ವಸ್ತ್ರವನ್ನು ಧರಿಸುತ್ತಾರೆ.
ಸುಂದರ ಮಹಿಳೆಯರನ್ನು ಹೊಂದಿದ ದೇಶಗಳಲ್ಲಿ ಒಂದಾದ ಥೈಲ್ಯಾಂಡ್‌ನ ವಿಮಾನಯಾನ ಸೇವೆಯುಲ್ಲಿ ಹಳದಿ ಕಲರ್‌ನ ಒಂದು ಸ್ಕರ್ಟ್ ಧರಿಸಿಕೊಂಡು ಪ್ರಯಾಣಿಕರಿಗೆ ಸೇವೆ ನೀಡುತ್ತಾರೆ.
ಸೌತ್ ಕೋರಿಯಾದ ವಿಮಾನಯಾನ ಸೇವೆಯಲ್ಲಿಯೂ ಮಹಿಳೆಯರು ಕಪ್ಪು ಮತ್ತು ಹಳದಿ ಬಣ್ಣದ ಸ್ಕರ್ಟ್ ಹಾಗೂ ಕಾಲಿಗೆ ತೆಳುವಾದ ಗ್ಲೌಸ್‌ಗಳನ್ನು ಧರಿಸುತ್ತಾರೆ.
ವಿಯೆಟ್ನಾಂ ದೇಶದಲ್ಲಿಯೂ ಕೂಡ ಗಗನಸಖಿಯರು ದೇಹದ ಕುತ್ತಿಗೆ ಭಾಗದಿಂದ ಮೊಣಕಾಲಿನ ಭಾಗದವರೆಗೂ ಕವರ್ ಆಗುವಂತಹ ಹಳದಿ ಅಥವಾ ತಿಳಿ ಹಸಿರು ಬಣ್ಣದ ಸ್ಕರ್ಟ್ ಧರಿಸುತ್ತಾರೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್‌ಎ) ವಿಮಾನಯಾನ ಸೇವೆ ನೀಡುವ ರಾಷ್ಟ್ರಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ, ಗಗನ ಸಖಿಯರ ಆಕರ್ಷಕ ಉಡುಗೆಗಳಲ್ಲಿ 4ನೇ ಸ್ಥಾನದಲ್ಲಿದೆ.
ಜಾಗತಿಕವಾಗಿ ಅತಿಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ದೇಶವಾದ ಮಲೇಷ್ಯಾದಲ್ಲಿಯೂ ಕೂಡ ಗಗನಸಖಿಯರು ಉತ್ತಮ ಉಡುಪು ಧರಿಸುತ್ತಾರೆ. ಇವರು ಹೂವುಗಳ ಡಿಸೈನ್ ಹೊಂದಿದ ಅಂಗಿ ಮತ್ತು ಕೆಳಗೊಂದು ಲುಂಗಿ ರೀತಿಯ ಬಟ್ಟೆ ಧರಿಸುತ್ತಾರೆ. ಇವರು ನೋಡಲು ಆಕರ್ಷಕವಾಗಿ ಕಾಣುತ್ತಾರೆ.
ನಮ್ಮ ನೆರೆಹೊರೆ ದೇಶವಾದ ಬಾಂಗ್ಲಾ ದೇಶವು ವಿಮಾನಯಾನ ಸೇವೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಸಿದ್ಧಿಗೆ ಬರುತ್ತಿದೆ. ವಿಮಾನಯಾನದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಗಗನಸಖಿಯರು ಮೈತುಂಬಾ ಅಚ್ಚುಕಟ್ಟಾಗಿ ಸೀರೆ ಹಾಗೂ ಮೊಣಕೈವರೆಗೂ ಬ್ಲೌಸ್ ಧರಿಸಿದ ಸಮವಸ್ತ್ರ ಉಟ್ಟುಕೊಂಡಿರುತ್ತಾರೆ.