ರಾಮ ನವಮಿಯಂದು ಆಯೋಧ್ಯೆ ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶ, ದರ್ಶನಕ್ಕೆ ಭಕ್ತರ ಕಾತರ!

Published : Apr 09, 2024, 05:04 PM IST

ಆಯೋಧ್ಯೆ ಶ್ರೀರಾಮನ ಮಂದಿರ ಇದೀಗ ರಾಮ ನವಮಿ ಆಚರಣೆಗೆ ಸಜ್ಜಾಗಿದೆ. ಏಪ್ರಿಲ್ 17ರಂದು ರಾಮನವಮಿ ಅದ್ಧೂರಿಯಾಗಿ ಆಚರಿಸಲು ತಯಾರಿಗಳು ನಡೆದಿದೆ. ಮತ್ತೊಂದು ವಿಶೇಷ ಅಂದರೆ ರಾಮನವಮಿ ದಿನ ಆಯೋಧ್ಯೆ ಬಾಲ ರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸಲಿದೆ.  

PREV
18
ರಾಮ ನವಮಿಯಂದು ಆಯೋಧ್ಯೆ ರಾಮನ ಹಣೆಗೆ ಸೂರ್ಯ ಕಿರಣ ಸ್ಪರ್ಶ, ದರ್ಶನಕ್ಕೆ ಭಕ್ತರ ಕಾತರ!

ಬೆಂಗಳೂರಿನ ಗವಿ ಗಂಗಾಧೇಶ್ವರ ದೇವಸ್ಥಾನ ಸೇರಿದಂತೆ ಭಾರತ ಕೆಲ ದೇವಸ್ಥಾನಗಳಲ್ಲಿ ಸೂರ್ಯನ ಕಿರಣಗಳು ಸಂಕ್ರಾತಿ ದಿನ ಗರ್ಭಗುಡಿ ಸ್ಪರ್ಶ, ಲಿಂಗ ಸ್ಪರ್ಶ ಮಾಡುತ್ತದೆ. ಇದೀಗ ಆಯೋಧ್ಯೆ ರಾಮ ಮಂದಿರವೂ ಇದೇ ಐತಿಹಾಸಿಕ ಮೂಹೂರ್ತಕ್ಕೆ ಸಾಕ್ಷಿಯಾಗಲಿದೆ.
 

28

ಏಪ್ರಿಲ್ 17ರಂದು ರಾಮವಮವಿಯನ್ನು ಆಯೋಧ್ಯೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಭವ್ಯ ರಾಮ ಮಂದಿರ ನಿರ್ಮಾಣದ ಬಳಿಕ ನಡೆಯತ್ತಿರುವ ಮೊದಲ ರಾಮ ನವಮಿ ಇದಾಗಿದೆ.
 

38

ಆಯೋಧ್ಯೆ ರಾಮ ಮಂದಿರ ಆಧ್ಯಾತ್ಮಿಕ ಹಾಗೂ ವಿಜ್ಞಾನದ ಒಂದಾಗುವ ಮತ್ತೊಂದು ಮಂದಿರವಾಗಿದೆ. ರಾಮ ನವಮಿ ದಿನ ಸೂರ್ಯನ ಕಿರಣಗಳು ಆಯೋಧ್ಯೆ ರಾಮ ಮಂದಿರ ಗರ್ಭಗುಡಿ ಪ್ರವೇಶಿಸಲಿದೆ. 

48

ಬಾಲರಾಮನ ಹಣೆಗೆ ಸೂರ್ಯನ ಕಿರಣಗಳು ಸ್ಪರ್ಶಿಸಲಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಸೂರ್ಯ ತಿಲಕ ಸರಿಸುಮಾರು 4 ನಿಮಿಷಗಳ ಕಾಲ ಶ್ರೀರಾಮನ ಹಣೆ ಸ್ಪರ್ಶಿಸಲಿದೆ. ಈ ಪವಿತ್ರ ದಿನಕ್ಕೆ ಇದೀಗ ಭಕ್ತರು ಕಾಯುತ್ತಿದ್ದಾರೆ

58

ಆಯೋಧ್ಯೆ ರಾಮ ಮಂದಿರವನ್ನು ಆಧ್ಯಾತ್ಮಿಕ ಕೇಂದ್ರದ ಜೊತೆಗೆ ವೈಜ್ಞಾನಿಕ ನೆರವಿನಿಂದ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ರಾಮ ಮಂದಿರ ಟ್ರಸ್ಟ್ ಹಲವು ಸಂಸ್ಥೆಗಳ ನೆರವು ಬಳಸಿಕೊಂಡಿತ್ತು.
 

68

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ಕೇಂದ್ರೀಯ ಕಟ್ಟಡ ಸಂಶೋಧನಾ ಸಂಸ್ಥೆ, ಬೆಂಗಳೂರಿನ ಭಾರತೀಯ ಭೌತಶಾಸ್ತ್ರ ಸಂಸ್ಥೆ, ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಆಸ್ಟ್ರೋನಮಿ ಆ್ಯಂಡ್ ಅಸ್ಟ್ರೋಫಿಸಿಕ್ಸ್  ಸಂಸ್ಥೆಗಳು ಈ ಕುರಿತು ಅಧ್ಯಯನದ ಆಧಾರದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ.
 

78

ಭಗವಾನ್ ಶ್ರೀರಾಮ ಸೂರ್ಯವಂಶದ ರಾಜ. ಹೀಗಾಗಿ ಶ್ರೀರಾಮನ ಹುಟ್ಟು ಹಬ್ಬದ ದಿನ ಸೂರ್ಯ ಕಿರಣಗಳು ಸ್ಪರ್ಶಿಸಿದರೆ ಅದಕ್ಕಿಂತ ಉತ್ತಮ ಆಚರಣೆ ಇನ್ನೇನಿದೆ ಎಂದು ಆಯೋಧ್ಯೆ ಟ್ರಸ್ಟ್ ಚಂಪತ್ ರಾಯ್ ಹೇಳಿದ್ದಾರೆ.

88

ಭಾರತದಲ್ಲಿ ಈ ರೀತಿಯ ಹಲವು ದೇವಸ್ಥಾನಗಳಿತ್ತು. ಆದರಲ್ಲೂ ಸೂರ್ಯ ದೇವಸ್ಥಾನಗಳಲ್ಲಿನ ಕೌತುಗಳು ಜಗತ್ತನ್ನೆ ಬೆರಗುಗೊಳಿಸುವಂತಿತ್ತು. ಪೂರ್ವಜರು ವಿಜ್ಞಾನದ ಜ್ಞಾನ ಅರಿವಾಗುತ್ತಿತ್ತು. ಆದರೆ ದಾಳಿಯಲ್ಲಿ ಹಲವು ಮಂದಿರದ ನಾಶವಾಗಿದೆ. ಇದೀಗ ಕೆಲವೇ ಕೆಲವು ಉಳಿದುಕೊಂಡಿದೆ. 

click me!

Recommended Stories