ಏಷ್ಯಾದಲ್ಲಿಯೇ ಅತ್ಯಂತ ಕೆಟ್ಟ ಟ್ರಾಫಿಕ್‌: ಯೆಸ್‌..ಬೆಂಗಳೂರೇ ನಂಬರ್‌.1

First Published | Jan 4, 2025, 5:07 PM IST

ಟಾಮ್‌ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ 2023ರ ಪ್ರಕಾರ, ಬೆಂಗಳೂರು ಏಷ್ಯಾದಲ್ಲೇ ಅತ್ಯಂತ ಕೆಟ್ಟ ಟ್ರಾಫಿಕ್‌ ಹೊಂದಿರುವ ನಗರವಾಗಿದೆ. 10 ಕಿ.ಮೀ. ಪ್ರಯಾಣಕ್ಕೆ 28 ನಿಮಿಷ 10 ಸೆಕೆಂಡ್‌ಗಳನ್ನು ಬಳಸುತ್ತಾರೆ, ವಾರ್ಷಿಕವಾಗಿ 132 ಗಂಟೆಗಳನ್ನು ಹೆಚ್ಚುವರಿಯಾಗಿ ರಸ್ತೆಯಲ್ಲಿ ಕಳೆಯುತ್ತಾರೆ.

ವಿಶ್ವದಲ್ಲಿ ಟ್ರಾಫಿಕ್‌ ಬಗ್ಗೆ ವಿವರ ನೀಡುವ ಸಂಸ್ಥೆಯಾದ ಟಾಮ್‌ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌, ಏಷ್ಯಾದಲ್ಲಿನ ನಗರಗಳ ಪೈಕಿ ಅತ್ಯಂತ ಕೆಟ್ಟ ಟ್ರಾಫಿಕ್‌ ಇರುವ ನಗರಗಳನ್ನು ಪಟ್ಟಿ ಮಾಡಿದೆ.

ಬೆಂಗಳೂರಿನ ಟ್ರಾಫಿಕ್‌ ಎಷ್ಟು ಕೆಟ್ಟದಾಗಿಯೆಂದರೆ, ವಾರ್ಷಿಕವಾಗಿ 132 ಗಂಟೆಗಳನ್ನು ಡ್ರೈವರ್‌ಗಳನ್ನು ಹೆಚ್ಚುವರಿಯಾಗಿ ರಸ್ತೆಯಲ್ಲಿಯೇ ಕಳೆಯುತ್ತಾರೆ ಎಂದು ಟಾಮ್‌ಟಾಮ್‌ ಟ್ರಾಫಿಕ್‌ ಇಂಡೆಕ್ಸ್‌ 2023 ತಿಳಿಸಿದೆ.
 

Tap to resize

ಬೆಂಗಳೂರು ಈ ಲಿಸ್ಟ್‌ನಲ್ಲಿ ನಂ.1 ಸ್ಥಾನದಲ್ಲಿದ್ದು, ಕೇವಲ 10 ಕಿಲೋಮೀಟರ್‌ ದೂರದ ಪ್ರಯಾಣಕ್ಕಾಗಿ ಬೆಂಗಳೂರಿನ ಜನತೆ 28 ನಿಮಿಷ 10 ಸೆಕೆಂಡ್‌ಗಳ ಕಾಲ ರಸ್ತೆಯಲ್ಲಿರುತ್ತಾರೆ ಎಂದು ತಿಳಿಸಿದೆ.

ಮಹಾರಾಷ್ಟ್ರದ ಪುಣೆ 2ನೇ ಸ್ಥಾನದಲ್ಲಿದೆ. ಪುಣೆಯಲ್ಲಿ 10 ಕಿಲೋಮೀಟರ್‌ ಪ್ರಯಾಣಕ್ಕೆ ಜನರು 27 ನಿಮಿಷ 50 ಸೆಕೆಂಡ್‌ ರಸ್ತೆಯಲ್ಲಿ ಇರುತ್ತಾರೆ ಎಂದು ತಿಳಿಸಿದೆ.

ಮೂರನೇ ಸ್ಥಾನದಲ್ಲಿ ಫಿಲಿಪ್ಪಿನ್ಸ್‌ನ ಮನಿಲಾ ನಗರವಿದ್ದು, 27 ನಿಮಿಷ 20 ಸೆಕೆಂಡ್‌ನಲ್ಲಿ ಇಲ್ಲಿನ ಜನರು 10 ಕಿಲೋಮೀಟರ್‌ ದೂರ ಪ್ರಯಾಣ ಮಾಡುತ್ತಾರೆ.

ನಾಲ್ಕನೇ ಸ್ಥಾನದಲ್ಲಿ ತೈವಾನ್‌ನ ಥಾಯ್‌ಚುಂಗ್‌ ನಗರವಿದೆ. ಇಲ್ಲಿ ಪ್ರತಿ 10 ಕಿಲೋಮೀಟರ್‌ ಪ್ರಯಾಣಕ್ಕೆ 26 ನಿಮಿಷ 50 ಸೆಕೆಂಡ್‌ಅನ್ನು ಬಳಸುತ್ತಾರೆ.

ಬೆಂಗಳೂರು ಏಷ್ಯಾದ ಅತೀ ಹೆಚ್ಚು ಟ್ರಾಫಿಕ್ ದಟ್ಟಣೆ ಸಿಟಿ, ಎಷ್ಟು ಗಂಟೆ ರಸ್ತೆಯಲ್ಲಿ ಕಳೆಯುತ್ತೀರಿ ಗೊತ್ತಾ?

ಇನ್ನು ಜಪಾನ್‌ ದೇಶದ ಸ್ಯಾಪರೂ ನಗರ ಕೂಡ ಕೆಟ್ಟ ಟ್ರಾಫಿಕ್‌ ಹೊಂದಿದ್ದು ಐದನೇ ಸ್ಥಾನದಲ್ಲಿದೆ. ಇಲ್ಲಿ ಪ್ರತಿ 10 ಕಿಲೋಮೀಟರ್ ಪ್ರಯಾಣಕ್ಕೆ 26 ನಿಮಿಷ 30 ಸೆಕೆಂಡ್‌ ಬೇಕಾಗುತ್ತದೆ.

ಬೆಂಗಳೂರು: ಟ್ರಾಫಿಕ್‌ ತಪ್ಪಿಸಲು ಸಿಗ್ನಲ್ ಫ್ರೀ ಏರ್ಪೋರ್ಟ್‌ ರಸ್ತೆಗೆ ಯೋಜನೆ

Latest Videos

click me!