ಮಿರ್ಯಾಲಗೂಡ
ಯುವತಿ ಬಾಲ್ಯದಿಂದಲೇ ಕಷ್ಟಗಳಲ್ಲೇ ಬೆಳೆದವಳು. ಇವುಗಳಿಂದ ಪಾರಾಗಲು ಓದೇ ದಾರಿ ಎಂದು ಆಕೆ ನಂಬಿದ್ದಳು. ಎಷ್ಟೇ ಅಡೆತಡೆಗಳು ಎದುರಾದರೂ ಓದನ್ನು ಬಿಡಲಿಲ್ಲ. ಉನ್ನತ ವ್ಯಾಸಂಗದ ನಂತರ ತನ್ನ ಜೀವನ ಬದಲಾಗುತ್ತದೆ, ಕಷ್ಟಗಳಿಂದ ಮುಕ್ತಿ ಪಡೆದು ಸುಖವಾಗಿ ಬದುಕಬಹುದು ಎಂದು ಭಾವಿಸಿದ್ದಳು. ಆದರೆ ಆ ಕನಸುಗಳಿಗೆ ಆರ್ಥಿಕ ಕಷ್ಟಗಳು ತಣ್ಣೀರೆರಚಿದವು. ಪೆನ್ನು ಹಿಡಿಯಬೇಕಿದ್ದ ಕೈಗಳು ಈಗ ಕಳೆ ಕೀಳುತ್ತಿವೆ... ತರಗತಿಯಲ್ಲಿ ಪುಸ್ತಕ ಹಿಡಿಯಬೇಕಿದ್ದ ಆಕೆ ಬಿಸಿಲಿನಲ್ಲಿ ಕುಡುಗೋಲು ಹಿಡಿಯಬೇಕಾಯಿತು. ಹೀಗೆ ಓರ್ವ ವಿದ್ಯಾರ್ಥಿನಿ ಕೃಷಿ ಕೂಲಿಯಾದ ಹೃದಯವಿದ್ರಾವಕ ಕಥೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
ಮಿರ್ಯಾಲಗೂಡ
ಅನಾಥಾಶ್ರಮದಿಂದ ಉನ್ನತ ವ್ಯಾಸಂಗದವರೆಗೆ:
ಒಂದು ಕಾಲದಲ್ಲಿ ಓದುವ ಹಂತದಿಂದ ಈಗ ಓದು 'ಕೊಳ್ಳುವ' ಹಂತಕ್ಕೆ ನಮ್ಮ ಶಿಕ್ಷಣ ವ್ಯವಸ್ಥೆ ತಲುಪಿದೆ. ಕೆಲವರಿಗೆ ವಿದ್ಯೆ ಇದ್ದರೂ ಲಕ್ಷ್ಮಿ ಕಟಾಕ್ಷ ಇಲ್ಲ. ಹೀಗಾಗಿ ಪ್ರತಿಭಾವಂತ ಬಡ ಮಕ್ಕಳ ಜೀವನ ಬಡತನದಲ್ಲೇ ಮುಳುಗುತ್ತಿದೆ. ಅಂತಹದ್ದೇ ಪರಿಸ್ಥಿತಿ ಮಿರ್ಯಾಲಗೂಡ ಮಂಡಲದ ವಾಟರ್ ಟ್ಯಾಂಕ್ ತಾಂಡಾದ ಮೌನಿಕಳದ್ದು.
ಮಿರ್ಯಾಲಗೂಡ
ಸಹಾಯಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ:
ಮಾಲಿಯಾಲ ತೋಟಗಾರಿಕೆ ಕಾಲೇಜಿನಲ್ಲಿ ಸೀಟು ಬಂದರೂ ಮೌನಿಕ ಓದಲು ಸಾಧ್ಯವಾಗುತ್ತಿಲ್ಲ. ದಾನಿಗಳ ಸಹಾಯವನ್ನು ಬಯಸುತ್ತಿದ್ದಾಳೆ. ಯಾರಾದರೂ ಮುಂದೆ ಬಂದು ಶುಲ್ಕ ಪಾವತಿಸಿ ಓದು ಮುಂದುವರಿಸಲು ಸಹಾಯ ಮಾಡಬೇಕೆಂದು ಮೌನಿಕ ಕೋರುತ್ತಿದ್ದಾಳೆ. ಚೆನ್ನಾಗಿ ಓದಿ ಉತ್ತಮ ಸ್ಥಾನಕ್ಕೆ ಬಂದ ಮೇಲೆ ತನ್ನಂತೆ ಕಷ್ಟಪಡುವವರಿಗೆ ಸಹಾಯ ಮಾಡುವುದಾಗಿ ಹೇಳುತ್ತಾಳೆ.