ತಮಿಳುನಾಡು ರಾಜಕೀಯದಲ್ಲಿ ಈಗ ನೈತಿಕತೆಗೆ ಇಲ್ಲ ಬೆಲೆ: ಸಿದ್ಧಾಂತ, ಬದ್ಧತೆ ಬರೀ ನೀರ ಮೇಲಿನ ಗುಳ್ಳೆ!

Published : May 08, 2026, 05:53 PM IST

ನಟ ವಿಜಯ್ ಅವರ ರಾಜಕೀಯ ಪ್ರವೇಶವು ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಧಿಕಾರದ ಆಸೆಗಾಗಿ, ಡಿಎಂಕೆ, ಎಐಎಡಿಎಂಕೆ ಸೇರಿದಂತೆ ಎಲ್ಲಾ ಪ್ರಮುಖ ಪಕ್ಷಗಳು ತಮ್ಮ ಸಿದ್ಧಾಂತ ಮತ್ತು ಮೈತ್ರಿಗಳನ್ನು ತೊರೆದು ಅವಕಾಶವಾದಿ ರಾಜಕಾರಣಕ್ಕೆ ಮುಂದಾಗಿವೆ, ಇದು ರಾಜಕೀಯ ನೈತಿಕತೆಯ ಪತನಕ್ಕೆ ಸಾಕ್ಷಿಯಾಗಿದೆ.

PREV
16
ಅಧಿಕಾರದ ಆಸೆಗೆ ನೈತಿಕತೆ ಬಿಟ್ಟ ಪಕ್ಷಗಳು

ತಮಿಳುನಾಡು ರಾಜಕೀಯ ಅಖಾಡದಲ್ಲಿ ಈಗ ಟಿವಿಕೆ ಸ್ಟಾರ್‌ ದಳಪತಿ ವಿಜಯ್ ಎಸೆದ ದಾಳಕ್ಕೆ ಘಟಾನುಘಟಿಗಳೇ ಚೆಲ್ಲಾಪಿಲ್ಲಿಯಾಗಿದ್ದಾರೆ. ಚುನಾವಣಾ ಫಲಿತಾಂಶ ಕೇವಲ ಅಧಿಕಾರ ಬದಲಾವಣೆಯಲ್ಲ, ಬದಲಿಗೆ ವರ್ಷಗಳ ಕಾಲ ‘ನೈತಿಕತೆ’ಯ ಜಪ ಮಾಡುತ್ತಿದ್ದ ಪಕ್ಷಗಳ ಮುಖವಾಡವನ್ನೇ ಕಳಚಿಟ್ಟಿದೆ. ಚುನಾವಣೆಗೂ ಮುನ್ನ ಬೇರೆ ಬೇರೆ ತಟ್ಟೆಯಲ್ಲಿ ಅನ್ನ ತಿನ್ನುತ್ತಿದ್ದ ಪಕ್ಷಗಳು, ಚುನಾವಣೆ ಮುಗಿದ ಬೆನ್ನಲ್ಲಿಯೇ ತಮ್ಮ ತಟ್ಟೆಯಲ್ಲಿನ ಅನ್ನವನ್ನು ಒಂದೇ ಬಕೆಟ್‌ಗೆ ಹಾಕಿ ಕಲಗಚ್ಚು ಮಾಡಿಕೊಂಡು ತಿನ್ನುತ್ತಿವೆ ಅನ್ನೋದಕ್ಕೆ ತಮಿಳುನಾಡು ರಾಜಕೀಯ ನೇರವಾಗಿ ಸಾಕ್ಷಿಯಾಗಿದೆ.

26
ಪರಮ ಶತ್ರುಗಳ ‘ಅಪವಿತ್ರ’ ಶೃಂಗಾರ

ಯಾರನ್ನು ಸೋಲಿಸಲು ಇಡೀ ಜನ್ಮವನ್ನೇ ಮುಡಿಪಿಟ್ಟಿದ್ದೇವೋ, ಆ ಡಿಎಂಕೆ ಮತ್ತು ಎಐಎಡಿಎಂಕೆ ಈಗ ‘ಬದ್ಧವೈರಿ’ಗಳೆಂಬುದನ್ನು ಮರೆತು ಒಂದೇ ಬೆಡ್‌ಶೀಟ್ ಹಂಚಿಕೊಳ್ಳುವ ಸ್ಥಿತಿಗೆ ಬಂದಿವೆ. ವಿಜಯ್ ಎಂಬ ಸಾಮಾನ್ಯ ಶಕ್ತಿಯನ್ನು ಎದುರಿಸಲು ಈ ದ್ರಾವಿಡ ದೈತ್ಯರು ನಡೆಸುತ್ತಿರುವ ಈ ‘ಅಪವಿತ್ರ ಮೈತ್ರಿ’ ರಾಜಕೀಯ ನೈತಿಕತೆಯ ಅಧಃಪತನಕ್ಕೆ ಸಾಕ್ಷಿ.

36
ಕಾಂಗ್ರೆಸ್‌ನ ‘ಇನ್‌ಸ್ಟಂಟ್’ ಡಿವೋರ್ಸ್

ದಶಕಗಳಿಂದ ಡಿಎಂಕೆ ಜೊತೆಗಿದ್ದ ಕಾಂಗ್ರೆಸ್, ಫಲಿತಾಂಶ ಬಂದ ಕೆಲವೇ ನಿಮಿಷಗಳಲ್ಲಿ ‘ಸೋ ಸಾರಿ’ ಎಂದು ಎಂ.ಕೆ. ಸ್ಟಾಲಿನ್‌ಗೆ ಡಿವೋರ್ಸ್ ನೀಡಿದೆ. ಇದು ‘ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್’ ಅಲ್ಲ, ಅಧಿಕಾರದ ಆಸೆಗೆ ಬಿದ್ದು ಮಾಡಿದ ಪಕ್ಕಾ ‘ಬ್ರೇಕಪ್’.

46
ಎಡಪಕ್ಷಗಳ ‘ಲೆಫ್ಟ್’ ಟರ್ನ್

ಸಿದ್ಧಾಂತಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವ ಎಡಪಕ್ಷಗಳು (CPI/CPM), ಡಿಎಂಕೆಯೊಂದಿಗಿನ ಹಳೆಯ ದೋಸ್ತಿಗೆ ಎಳ್ಳುನೀರು ಬಿಟ್ಟು ವಿಜಯ್ ಕ್ಯಾಂಪ್‌ಗೆ ಓಡಿವೆ. ಸಿದ್ಧಾಂತಕ್ಕಿಂತ ಅಧಿಕಾರದ ಲಾಲಸೆಯೇ ಮುಖ್ಯ ಎಂಬುದು ಇಲ್ಲಿ ಸಾಬೀತಾಗಿದೆ.

56
ವಿಸಿಕೆ ಹಾರಾಟ

ದಲಿತರ ಧ್ವನಿ ಎನ್ನುವ ವಿಸಿಕೆ ಪಕ್ಷ ಕೂಡ ಡಿಎಂಕೆಯನ್ನು ಅನಾಥವಾಗಿ ಬಿಟ್ಟು ವಿಜಯ್ ಸಚಿವ ಸಂಪುಟ ಸೇರಲು ಮುಂದಾಗಿದೆ. ನೆನ್ನೆವರೆಗೂ ಇದ್ದ ಮೈತ್ರ, ಸಿದ್ದಾಂತ, ಬದ್ದತೆ ಎಲ್ಲವೂ ಇವತ್ತು ‘ಜೀರೋ’ ವ್ಯಾಲ್ಯೂ ಪಡೆದಿದೆ.

66
ಎಐಎಡಿಎಂಕೆಯಲ್ಲಿ ‘ಇಂಟರ್ನಲ್’ ವಾರ್

ಇತ್ತ ವಿಜಯ್ ಅಬ್ಬರಕ್ಕೆ ಬೆದರಿದ ಎಐಎಡಿಎಂಕೆ ಎರಡು ಹೋಳಾಗಿದೆ. ನಾಯಕತ್ವದ ವಿರುದ್ಧ ಬಂಡಾಯ ಎದ್ದಿರುವ ಶಾಸಕರು ವಿಜಯ್ ಪಕ್ಷದ ಕಡೆ ಮುಖ ಮಾಡಿರುವುದು ‘ಅಮ್ಮ’ನ ಪಕ್ಷಕ್ಕೆ ಅತಿದೊಡ್ಡ ಹಿನ್ನಡೆ. ಇಂದಿನ ಜೆನ್-ಝೀಗಳು (Gen-Z) ಬದಲಾವಣೆ ಬಯಸಿದ್ದರು ನಿಜ, ಆದರೆ ರಾಜಕಾರಣಿಗಳ ಈ ಪಕ್ಕಾ ಅವಕಾಶವಾದಿ ವರ್ತನೆ ನೋಡಿ ಅವರಿಗೂ ಶಾಕ್ ಆಗಿದೆ. ವಿಜಯ್ ಬಂದ ಮೇಲೆ ತಮಿಳುನಾಡಿನಲ್ಲಿ ನೈತಿಕತೆ ಎಂಬುದು ಕೇವಲ ಡಿಕ್ಷನರಿಯ ಪದವಷ್ಟೇ ಆಗಿದೆ!

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories