ರಮ್ಯಮನೋಹರವಾದ ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಗುರುದೇವರು ಮಾತನಾಡಿದರು
ಜ್ಞಾನದಲ್ಲಿ ಮುಳುಗಿದ್ದಾಗ ಪ್ರತಿದಿನವೂ ಸಂತೋಷಮಯವಾದ ದಿನವೇ. ನಮ್ಮ ಜೀವನವು ಸೇವೆ, ಸತ್ಸಂಗ, ಸಾಧನಕ್ಕೆ ಮುಡುಪಾಗಿದ್ದಾಗ ಪ್ರತಿ ದಿನವೂ ಒಂದು ಸಂಭ್ರಮವೇ ಎಂದು ಕಂಡುಕೊಳ್ಳುತ್ತೇವೆ. ಎಲ್ಲರಿಗೂ ಸಂತೋಷವನ್ನು ತನ್ನಿ. " ನಾನು ಇಲ್ಲಿ ಎಲ್ಲರಿಗೂ ಸಂತೋಷವನ್ನು ತರಲು ಇಲ್ಲಿದ್ದೇನೆ " ಎಂಬ ಒಂದು ಆಲೋಚನೆಯೇ ಸಾಕು, ನಿಮ್ಮ ದಾರಿಯಲ್ಲಿರುವ ಅಡಚಣೆಗಳು ಮತ್ತು ನಿಮಗೆ ಹೇಗೆ ಬೇಕೋ ಹಾಗೆ ವಿಷಯ ನಡೆಯಲು" ಎಂದರು