ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ!

First Published | Mar 11, 2021, 6:36 PM IST

ಮಹಾರಾಷ್ಟ್ರದ ನಾಗಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮತ್ತೆ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿಯಾಗುತ್ತಿದೆ. ಇದರ ನಡುವೆ ಆರೋಗ್ಯ ಸಚಿವಾಲಯದ ಕೊರೋನಾ ವರದಿ ಬಿಡುಗಡೆ ಮಾಡಿತ್ತು. 6 ರಾಜ್ಯಗಳಿಂದಲೇ ಭಾರತದಲ್ಲಿ ಕೊರೋನಾ ಹರಡುತ್ತಿದೆ ಎಂದಿದೆ. ಇಷ್ಟೇ ಅಲ್ಲ 6 ರಾಜ್ಯಗಳಲ್ಲಿ ಕಟ್ಟು ನಿಟ್ಟಿನ ನಿರ್ಧಾರ ಅಗತ್ಯ ಎಂದಿದೆ. ಇದರಿಂದ ಆತಂಕ ಇದೀಗ ಕರ್ನಾಟಕಕ್ಕೂ ಆವರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನಾ ವೈರಸ್ ಭೀತಿ ಮತ್ತೆ ಇದೀಗ ತಲೆನೋವಾಗಿ ಪರಿಣಮಿಸಿದೆ. ಒಂದೆಡೆಯಿಂದ ಲಸಿಕೆ ಅಭಿಯಾನ ಚುರುಕಾಗಿದೆ, ಆದರೆ ಮತ್ತೊಂಡೆಡೆಯಿಂದ ಕೊರೋನಾ ಮತ್ತೆ ವ್ಯಾಪಕವಾಗಿ ಹರಡುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ವರದಿ ಇದೀಗ ಆತಂಕ ಮತ್ತಷ್ಟು ಹೆಚ್ಚಿಸಿದೆ.
undefined
ಭಾರತದಲ್ಲಿ 6 ರಾಜ್ಯಗಳಿಂದ ಕೊರೋನಾ ಹೆಚ್ಚಾಗುತ್ತಿದೆ ಎಂದು ಆರೋಗ್ಯ ಇಲಾಖೆ ವರದಿ ಬಿಡುಗಡೆ ಮಾಡಿದೆ. ಶೇಕಡಾ 86 ರಷ್ಟು ಕೊರೋನಾ ಹರಡುವಿಕೆ ಇದೀಗ ಭಾರತದ 6 ರಾಜ್ಯಗಳಿಂದ ಆವರಿಸುತ್ತಿದೆ ಎಂದಿದೆ.
undefined

Latest Videos


ಮಹಾರಾಷ್ಟ್ರ, ಪಂಜಾಬ್, ಗುಜರಾತ್, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಿಂದಲೇ ಕೊರೋನಾ ಹೆಚ್ಚಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಿದೆ.
undefined
ಈ ಆರು ರಾಜ್ಯಗಳಲ್ಲಿ ಒಂದೊಂದೆ ರಾಜ್ಯಗಳ ಕೆಲ ಪ್ರದೇಶಗಳು ಲಾಕ್‌ಡೌನ್ ಆಗುತ್ತಿದೆ. ಕೇಂದ್ರ ಕೂಡ 6 ರಾಜ್ಯಗಳಿಗೆ ವಿಶೇಷ ತಂಡವನ್ನು ಕಳುಹಿಸಲು ನಿರ್ಧರಿಸಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಿದೆ.
undefined
ಕರ್ನಾಟಕದಲ್ಲಿ ಕೊರೋನಾ ಬಹುತೇಕ ನಿಯಂತ್ರಣಕ್ಕೆ ಬಂದಿತ್ತು. ಆದರೆ ಕೇರಳ ಹಾಗೂ ಮಹಾರಾಷ್ಟ್ರದ ಜೊತೆಗೆ ನಿಕಟ ಸಂಪರ್ಕ ಹಾಗೂ ಓಡನಾಡವಿರುವ ಕರ್ನಾಟಕಕ್ಕೆ ಕೊರೋನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗಿದೆ.
undefined
ಮಹಾರಾಷ್ಟ್ರದ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ, ಲಾಕ್‌ಡೌನ್ ಜಾರಿಯಾಗಿದೆ. ಇದೀಗ ಈ ಆತಂಕ ಕರ್ನಾಟಕಕ್ಕೂ ಎದುರಾಗಿದೆ. ಈಗಾಗಲೇ ಇತರ ರಾಜ್ಯ ಹಾಗೂ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ಕೊರೋನಾ ನೆಗಟೀವ್ ಟೆಸ್ಟ್ ಖಡ್ಡಯವಾಗಿದೆ.
undefined
6 ರಾಜ್ಯಗಳ ಪೈಕಿ ಅತೀ ಹೆಚ್ಚು ಕೋವಿಡ್ ಕೇಸ್ ಮಹಾರಾಷ್ಟ್ರದಲ್ಲಿ ದಾಖಲಾಗಿದೆ. ಮಹಾರಾಷ್ಟ್ರಲ್ಲಿ 13,659 ಹೊಸ ಪ್ರಕರಣಗಳು ದಾಖಲಾಗಿದೆ. ಇನ್ನು 2ನೇ ಸ್ಥಾನದಲ್ಲಿರುವ ಕೇರಳದಲ್ಲಿ 2,475 ಪ್ರಕರಣ ದಾಖಲಾಗಿದೆ.
undefined
6 ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಅತೀ ಕಡಿಮೆ ಪ್ರಕರಣ ದಾಖಲಾಗಿದೆ. ಆದರೆ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದೇ ಈ ಆತಂತಕ್ಕೆ ಕಾರಣವಾಗಿದೆ.
undefined
click me!