ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

Published : Aug 09, 2021, 04:45 PM IST

ಮಧ್ಯಪ್ರದೇಶದಲ್ಲಿ ಮಳೆ ಅದೆಷ್ಟು ದೊಡ್ಡ ಅನಾಹುತ ಸೃಷ್ಟಿಸಿದೆ ಎಂದರೆ, ಪ್ರವಾಹದಲ್ಲಿ 600 ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಕುಸಿದಿವೆ. ಸುಮಾರು 400 ಹಳ್ಳಿಗಳು ಸಂಪೂರ್ಣವಾಗಿ ಮುಳುಗಿದ್ದರೆ, 1200 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಏತನ್ಮಧ್ಯೆ, ಆತಂಕ ಸೃಷ್ಟಿಸಿದ್ದ ಶಿವಪುರಿಯಲ್ಲಿ ಸಿಂಧ್ ನದಿಯಲ್ಲಿ ಬೆಳ್ಳಿಯ ನಾಣ್ಯಗಳು ಹರಿದು ಬಂದಿವೆ ಎಂಬ ವಿಚಾರ ಭಾರೀ ಸದ್ದು ಮಾಡಿದೆ. ಈ ಐತಿಹಾಸಿಕ ನಾಣ್ಯಗಳನ್ನು ಸಂಗ್ರಹಿಸಲು ಸದ್ಯ ಜನರು ನದಿಗಿಳಿಯಲಾರಂಭಿಸಿದ್ದಾರೆ.  

PREV
15
ಆನಾಹುತ ಸೃಷ್ಟಿಸಿದ್ದ ನದಿಯಲ್ಲಿ, ಬೆಳ್ಳಿಯ ಹೊಳೆ: 280 ವರ್ಷ ಹಳೆ ನಾಣ್ಯಗಳು ಪತ್ತೆ!

ಪಚಾವಳಿ ಹಳ್ಳಿಯ ಸಿಂಧ್ ನದಿಯಲ್ಲಿ ಬೆಳ್ಳಿ ನಾಣ್ಯ ಸಂಗ್ರಹ

ಭಾನುವಾರ ಇಂತಹುದ್ದೊಂದು ಸುದ್ದಿ ಶಿವಪುರಿ ಜಿಲ್ಲೆಯ ಪಚಾವಳಿ ಗ್ರಾಮದಲ್ಲಿ ವರದಿಯಾಗಿದೆ. ಈ ನಾಣ್ಯಗಳು ಸಿಂಧ್ ನದಿಯಲ್ಲಿ ಹರಿಯುತ್ತಿದ್ದು, ಇದನ್ನು ಕಂಡ ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ನಾಣ್ಯಗಳನ್ನು ಹುಡುಕಲು ಮುಂದಾಗಿದ್ದಾರೆ
 

25

280 ವರ್ಷ ಹಳೆ ನಾಣ್ಯಗಳು

ಗ್ರಾಮಸ್ಥರಿಗೆ ಸಿಕ್ಕ ನಾಣ್ಯಗಳು ಸುಮಾರು 280 ವರ್ಷಗಳಷ್ಟು ಹಳೆಯದು ಅಂದರೆ 18 ನೇ ಶತಮಾನ ಎಂದು ಹೇಳಲಾಗುತ್ತದೆ. ಬ್ರಿಟನ್ ರಾಣಿ ವಿಕ್ಟೋರಿಯಾ ಅವರ ಮುದ್ರೆ ಇದೆ ಎನ್ನಲಾಗಿದೆ. ಅಲ್ಲದೆ, ಈಸ್ಟ್ ಇಂಡಿಯಾ ಕಂಪನಿಯ ನಾಣ್ಯಗಳಲ್ಲಿ 1,840 ವರ್ಷವನ್ನು ದಾಖಲಿಸಲಾಗಿದೆ.

35

ಆದಾಗ್ಯೂ, ಈ ನಾಣ್ಯಗಳು ಎಲ್ಲಿಂದ ಬಂದವು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಸಂದರ್ಭದಲ್ಲಿ, ಕೋಲಾರಸ್ SDPO ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ರುಲಿ ವರದಿಯಾಗಿದೆ ಎಂದಿದೆ. ಇನ್ನು ಈ ವಿಚಾರವಾಗಿ ತನಿಖೆ ಮಾಡಲು ಸ್ಥಳೀಯ ಪೊಲೀಸರರು ಮುಂದಾಗಿದ್ದಾರೆ. ಹೀಗಿದ್ದರೂ ನಾಣ್ಯಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ

45

ನೋಡ ನೋಡುತ್ತಿದ್ದಂತೆಯೇ ಈ ಸುದ್ದಿ ಬೆಂಕಿಯಂತೆ ಹರಡಿದ್ದು, ಜನರು ನಾಣ್ಯ ಸಂಗ್ರಹಿಸಲು ಗುಂಪು ಗುಂಪಾಗಿ ಆಗಮಿಸಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಅಲ್ಲಿ ಪೊಲೀಸ್ ಪಡೆಯನ್ನು ನೇಮಿಸಿದ್ದಾರೆ. 

55

ಶಿವಪುರಿ ಜಿಲ್ಲೆಯ ಸಿಂಧ್ ನದಿ

ಹೀಗಿರುವಾಗಲೇ  ಕೆಲವು ದಿನಗಳ ಹಿಂದೆ, ಹಳ್ಳಿಯ ಹರ್ದಾಲ್ ಕೇವತ್ ಅವರಿಗೆ ಬೆಳ್ಳಿಯಿಂದ ತುಂಬಿದ ಮಡಕೆ ಸಿಕ್ಕಿತು, ಬಹುಶಃ ಅದೇ ನೀರಿನಲ್ಲಿ ಕೊಚ್ಚಿಕೊಂಡು ಬಂದಿರಬಹುದು ಎಂದು ಅನೇಕರು ಮಾತನಾಡುತ್ತಿದ್ದಾರೆ. ಆದರೂ ಈವರೆಗೆ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. 

click me!

Recommended Stories