12 ವರ್ಷಕ್ಕೊಮ್ಮೆ ಅರಳೋ ಹೂವಿದು, ದೃಷ್ಟಿ ಹಾಯಿಸಲು ಲಕ್ಷಾಂತರ ರೂಪಾಯಿ ವ್ಯಯಿಸುತ್ತಾರೆ!

First Published | Aug 2, 2021, 5:21 PM IST

ಕೇರಳದ ಇಡುಕ್ಕಿ ಜಿಲ್ಲೆಯ ಶಲೋಮ್ ಬೆಟ್ಟಗಳಲ್ಲಿ ನೀಲಕುರಿಂಜಿ ಹೂವು ಅರಳಿದೆ. ಈ ಹೂವುಗಳು12 ವರ್ಷಗಳಿಗೊಮ್ಮೆ ಅರಳುತ್ತವೆ ಎಂಬುವುದೇ ಇದರ ವಿಶೇಷತೆ. ಮಾಧ್ಯಮ ವರದಿಗಳ ಪ್ರಕಾರ, ಇದು ವೈವಿಧ್ಯಮಯ ಸ್ಟ್ರೋಬಿಲೆಂಥಸ್ ಆಗಿದೆ. ಇದು ಮೊನೊಕಾರ್ಪಿಕ್ ಸಸ್ಯವಾಗಿದ್ದು, ಮುದುಡಿದ ಬಳಿ ಮತ್ತೆ ಅರಳಲು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಸಾಮಾನ್ಯವಾಗಿ ಈ ಹೂವು ಆಗಸ್ಟ್ ನಲ್ಲಿ ಅರಳಲು ಆರಂಭಿಸಿ ಅಕ್ಟೋಬರ್ ವರೆಗೆ ಇರುತ್ತದೆ.
 

ಈ ಹೂವುಗಳು ಭಾರತದಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಶೋಲಾ ಕಾಡುಗಳಲ್ಲಿನ ಎತ್ತರದ ಪರ್ವತಗಳಲ್ಲಿ ಮಾತ್ರ ಕಂಡುಬರುತ್ತವೆ.

Neelakurinji Flowers, Kerala, Idukki District, Neelakurinji Flowers USP, Neelakurinji Flowers News, Neelakurinji Flowers Photos, Neelakurinji Flowers News Updates

ನೀಲಕುರಿಂಜಿ ನೋಡಲು ದೂರದಿಂದ ಜನರು ಬರುತ್ತಾರೆ. ಈ ಹೂವಿನಿಂದಾಗಿ, ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜನರು ಕೇರಳಕ್ಕೆ ಬಂದು ಈ ಹೂವಿನ ಸೌಂದರ್ಯ ಆಸ್ವಾದಿಸುತ್ತಾರೆ.

Latest Videos


3,000 ಹೆಕ್ಟೇರ್‌ ವ್ಯಾಪ್ತಿಯ ಬೆಟ್ಟಗಳ ನಡುವೆ ನೀಲಕುರಿಂಜಿ ಹೂವಿನ ಅಪರೂಪದ ಸಸ್ಯಗಳು ಕಂಡುಬರುತ್ತವೆ. ಈ ಸಸ್ಯಗಳು ಮೊಳಕೆಯೊಡೆಯಲು ಮತ್ತು 30 ರಿಂದ 60 ಸೆಂ.ಮೀ ಎತ್ತರಕ್ಕೆ ಬೆಳೆಯಲು ಇನ್ನೂ 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ.

ನೀಲಕುರಿಂಜಿ ಸಸ್ಯವು ಸಾಮಾನ್ಯವಾಗಿ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದು ಸ್ಟ್ರೋಬಿಲಾಂಥಸ್ ಜಾತಿಗೆ ಸೇರಿದ್ದು, ಸುಮಾರು 450 ಪ್ರಬೇಧ ಹೊಂದಿದೆ, ಅದರಲ್ಲಿ 146 ಭಾರತದಲ್ಲಿ ಕಂಡುಬರುತ್ತದೆ ಮತ್ತು ಅವುಗಳಲ್ಲಿ 43 ಕೇರಳದಲ್ಲಿವೆ.

ಕೊರೋನಾದಿಂದಾಗಿ ಕೇರಳದಲ್ಲಿ ಪ್ರವಾಸೋದ್ಯಮ ನಿಷೇಧಿಸಲಾಗಿದೆ. ಇಲ್ಲಿ ನಿತ್ಯ 20 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಹೀಗಿದ್ದರೂ ಜನರು ಈ ಬಾರಿ ಈ ಹೂವಿನ ಸೌಂದರ್ಯ ನೋಡಲು ಬರುತ್ತಾರೆ ಎಂಬ ಸಣ್ಣ ಭರವಸೆ ಇದೆ.

ಕರೋನಾದಿಂದಾಗಿ, ಈ ಬಾರಿ ನೀಲಕುರಿಂಜಿಯಿಂದ ಅಲಂಕರಿಸಲ್ಪಟ್ಟ ಬೆಟ್ಟಗಳು ಮೌನವಾಗಿವೆ. ಹೀಗಿದ್ದರೂ ಇಲ್ಲಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿವೆ.

click me!