Ukraine Crisis ರೊಮೆನಿಯಾ ಗಡಿಯಲ್ಲಿ ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ!

First Published Mar 5, 2022, 4:20 PM IST
  • ರಷ್ಯಾ ದಾಳಿ ಮತ್ತಷ್ಟು ತೀವ್ರ, ನೆರೆ ರಾಷ್ಟ್ರದ ಗಡಿಯತ್ತ ಭಾರತೀಯ ವಿದ್ಯಾರ್ಥಿಗಳು
  • ರೊಮೆನಿಯಾ ಗಡಿ ಕ್ಯಾಂಪ್‌ನಲ್ಲಿ ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬ ಆಚರಣೆ
  • ಕೇಕ್ ಕತ್ತರಿಸಿ ಕ್ಯಾಂಪ್ ಪೂರ್ತಿ ಹಂಚಿದ ವಿದ್ಯಾರ್ಥಿ, ಸ್ಮರಣೀಯ ಹುಟ್ಟು ಹಬ್ಬ ಆಚರಣೆ

ರಷ್ಯಾ ದಾಳಿ ತೀವ್ರಗೊಂಡಿದೆ. ಬಹುತೇಕ ಉಕ್ರೇನ್ ಧ್ವಂಸಗೊಂಡಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆಪರೇಶನ್ ಗಂಗಾ ಮಿಶನ್ ಅಡಿ ವಿದ್ಯಾರ್ಥಿಗಳ ರಕ್ಷಾ ಕಾರ್ಯ ನಡೆಯುತ್ತಿದೆ. ಇದರ ನಡುವೆ ರೋಮಾನಿಯಾ ಗಡಿಯಲ್ಲಿರುವ ಭಾರತೀಯ ಕ್ಯಾಂಪ್ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ. ಭಾರತಕ್ಕೆ ವಾಪಸ್ ಮರಳಲು ಉಕ್ರೇನ್‌ನಿಂದ ಹರಸಾಹಸ ಪಟ್ಟು ರೋಮಾನಿಯಾ ಗಡಿ ತಲುಪಿ ಕ್ಯಾಂಪ್ ಸೇರಿಕೊಂಡ ಭಾರತೀಯ ವಿದ್ಯಾರ್ಥಿಯ ಹುಟ್ಟು ಹಬ್ಬವನ್ನು ಎಲ್ಲರೂ ಅದ್ಧೂರಿಯಾಗಿ ಆಚರಿಸಿದ್ದಾರೆ.

ರೋಮಾನಿಯದಲ್ಲಿರುವ ಭಾರತೀಯ ಕ್ಯಾಂಪ್ ಸೇರಿಕೊಂಡ ವಿದ್ಯಾರ್ಥಿಗಳ ಪೈಕಿ ಕಾರ್ತಿಕ್‌ಗೆ ನಿನ್ನೆ(ಮಾ.04) ಹುಟ್ಟು ಹಬ್ಬದ ಸಂಭ್ರಮ. ಆದರೆ ಯುದ್ಧ, ಸಂಕಷ್ಟ , ಜೊತೆಗೆ ಕ್ಯಾಂಪ್‌ನಲ್ಲಿರುವ ಕಾರಣ ಹುಟ್ಟು ಹಬ್ಬ ಆಚರಣೆ ಅಸಾಧ್ಯದ ಮಾತಾಗಿತ್ತು. ಆದರೆ ಎಲ್ಲರೂ ಸೇರಿ ಕಾರ್ತಿಕ್ ಹುಟ್ಟು ಹಬ್ಬವನ್ನು ಮತ್ತಷ್ಟು ಸ್ಮರಣೀಯವಾಗಿಸಿದ್ದಾರೆ.
 

Latest Videos


5 ಕೇಕ್, ಪಿಜ್ಜಾ, ಸ್ವೀಟ್ಸ್ ಸೇರಿ ಹಲವು ತನಿಸುಗಳನ್ನು ಸಂಘಟಿಸಲಾಗಿತ್ತು. ಕೇಕ್ ಕತ್ತರಿಸಿ ರೋಮಾನಿಯಾ ಕ್ಯಾಂಪ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ, ಅಧಿಕಾರಿಗಳಿಗೆ ಹಂಚಲಾಗಿದೆ. ಇದೀಗ ಕಾರ್ತಿಕ್ ಹುಟ್ಟು ಹಬ್ಬ ವಿಡಿಯೋ ಸಾಮಾಜಿಕ ಜಾಲಾತಾಣಗಲ್ಲಿ ವೈರಲ್ ಆಗಿದೆ.

ಕಾರ್ತಿಕ್ ಹುಟ್ಟು ಹಬ್ಬದಿಂದ ಗಂಭೀರವಾಗಿದ್ದ ರೋಮಾನಿಯಾ ಕ್ಯಾಂಪ್‌ ಹಬ್ಬದ ವಾತಾವರಣವಾಗಿ ಬದಲಾಗಿತ್ತು. ಹುಟ್ಟು ಹಬ್ಬ ಆಚರಣೆಗೆ ಸಹಕರಿದ ಹಾಗೂ ಆಚರಿಸಲು ಅನುವು ಮಾಡಿಕೊಟ್ಟ ಎಲ್ಲರಿಗೂ ಕಾರ್ತಿಕ್ ಧನ್ಯವಾದ ಹೇಳಿದ್ದಾರೆ.

ಯುದ್ಧಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ‘ಆಪರೇಷನ್‌ ಗಂಗಾ’ ಕಾರಾರ‍ಯಚರಣೆ ಮತ್ತಷ್ಟುಚುರುಕುಗೊಂಡಿದ್ದು, ಶುಕ್ರವಾರ 17 ವಿಮಾನಗಳ ಮೂಲಕ 3,772 ಮಂದಿ ಭಾರತಕ್ಕೆ ಬಂದಿಳಿದಿದ್ದಾರೆ. ಇದರೊಂದಿಗೆ ಈವರೆಗೆ 48 ವಿಮಾನಗಳ ಮೂಲಕ 10,887 ಮಂದಿ ಭಾರತಕ್ಕೆ ತಲುಪಿದಂತಾಗಿದೆ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಶುಕ್ರವಾರ ಹಂಗೇರಿಯ ಬುಡಾಪೆಸ್ಟ್‌ನಿಂದ 177 ಜನರನ್ನು ಹೊತ್ತ ಗೋ ಫಸ್ಟ್‌ ವಿಮಾನ ಮತ್ತು ರೊಮೇನಿಯಾದ ಬುಕಾರೆಸ್ಟ್‌ನಿಂದ 185 ಜನರನ್ನು ಹೊತ್ತು ಹೊರಟ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಮುಂಬೈಗೆ ಬಂದಿಳಿದವು. ಇನ್ನು 630 ಜನರನ್ನು ಹೊತ್ತ ಭಾರತೀಯ ವಾಯುಸೇನೆಯ 3 ವಿಮಾನಗಳು ದೆಹಲಿಗೆ ಬಂದಿಳಿದವು.

ಯುದ್ಧಪೀಡಿತ ಉಕ್ರೇನ್‌ನ ಖಾರ್ಕೀವ್‌ ಮತ್ತು ಸುಮಿ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಷ್ಯಾದ ಮೂಲಕ ಭಾರತಕ್ಕೆ ಕರೆತರಲು ವಾಯುಪಡೆಯ ಎರಡು ಐಎಲ್‌- 76 ವಿಮಾನಗಳನ್ನು ಸಿದ್ಧವಾಗಿಟ್ಟಿರುವುದಾಗಿ ಭಾರತೀಯ ವಾಯುಪಡೆ ಶುಕ್ರವಾರ ಹೇಳಿದೆ.
 

ಇದರೊಂದಿಗೆ ಆಪರೇಶನ್‌ ಗಂಗಾ ಎಂಬ ಯೋಜನೆಯಡಿ ಉಕ್ರೇನ್‌ನ ನೆರೆಯ ರಾಷ್ಟ್ರಗಳಾದ ರೊಮೇನಿಯಾ, ಸ್ಲೊವಾಕಿಯಾ, ಪೋಲೆಂಡ್‌ ಮತ್ತು ಹಂಗೇರಿಗಳಿಂದ ಭಾರತೀಯರನ್ನು ಈಗಾಗಲೇ ಸ್ವದೇಶಕ್ಕೆ ಕರೆತರಲಾಗುತ್ತಿದೆ. ಈಗ ಸುಮಿ ಮತ್ತು ಖಾರ್ಕೀವ್‌ ನಗರಗಳಿಂದ ರಷ್ಯಾ ಸೇನೆಯ ಮೂಲಕ ಮಾಸ್ಕೋಗೆ ಭಾರತೀಯರನ್ನು ಸ್ಥಳಾಂತರಿಸುವುದು, ಅಲ್ಲಿಂದ ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಕರೆತರುವುದು ಭಾರತದ ಉದ್ದೇಶ.

ಉಕ್ರೇನ್‌ನ ದಕ್ಷಿಣ ಕರಾವಳಿಯ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಮೂಲಕ ಅದಕ್ಕೆ ಜಲಮಾರ್ಗ ಮುಚ್ಚುವ ಯೋಜನೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ರಷ್ಯಾ ಪಡೆಗಳು, ಶುಕ್ರವಾರ ಮತ್ತೊಂದು ಕರಾವಳಿ ನಗರವಾದ ಮೈಕೋಲೇವ್‌ ಅನ್ನು ಪ್ರವೇಶಿಸುವಲ್ಲಿ ಯಶಸ್ವಿಯಾಗಿವೆ. ಹಲವು ದಿನಗಳಿಂದ ನಗರದ ಹೊರಭಾಗದಲ್ಲಿ ರಷ್ಯಾ ಸೇನೆ ಬೀಡು ಬಿಟ್ಟತ್ತಾದರೂ, ಇದೇ ಮೊದಲ ಬಾರಿಗೆ ನಗರದ ಒಳಭಾಗ ಪ್ರವೇಶಿಸುವಲ್ಲಿ ಸೇನೆ ಯಶಸ್ವಿಯಾಗಿದೆ.

ಈ ನಡುವೆ ರಷ್ಯಾ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ನಗರದ ಗವರ್ನರ ವಿಟಾಲಿ ಕಿಮ್‌, ರಷ್ಯಾ ಪಡೆಗಳ ಜೊತೆ ಹೋರಾಟ ಮುಂದುವರೆದಿದೆ. ಯಾರೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ ಎಂದಿದ್ದಾರೆ.ರಷ್ಯಾ ಸೇನೆ ಈಗಾಗಲೇ ಕರಾವಳಿ ನಗರ ಖೇರ್ಸನ್‌ ಅನ್ನು ವಶಪಡಿಸಿಕೊಂಡಿದೆ. ಜೊತೆಗೆ ಕರಾವಳಿ ನಗರಿಗಳಾದ ಮರಿಯುಪೋಲ್‌, ಒಡೆಸ್ಸಾ ವಶಕ್ಕೆ ನೌಕಾಪಡೆ ದೊಡ್ಡ ದಂಡು ಬೀಡುಬಿಟ್ಟಿದೆ

click me!