Punjab Elections: ಪ್ರಮುಖ ಸಿಖ್ ನಾಯಕರ ಭೇಟಿಯಾದ ಮೋದಿ, ತಾನೇ ಊಟದ ತಟ್ಟೆ ಕೊಟ್ಟು ಸತ್ಕರಿಸಿದ ಪಿಎಂ!

First Published | Feb 18, 2022, 4:48 PM IST

ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿಖ್ಖರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ದೇಶಾದ್ಯಂತದ ಪ್ರಮುಖ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಈ ವೇಳೆ ಪ್ರಧಾನಿಯವರು ಸಿಖ್ ನಾಯಕರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿತು. ಊಟದ ಸಮಯದಲ್ಲಿ ಖುದ್ದು ಮೋದಿ ಸಿಖ್ ನಾಯಕರಿಗೆ ತಟ್ಟೆಯನ್ನು ಕೊಟ್ಟು ಸತ್ಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಶುಕ್ರವಾರ ತಮ್ಮ ನಿವಾಸದಲ್ಲಿ ದೇಶದ ಪ್ರಮುಖ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ, ಅವರು ನನ್ನ ರಕ್ತದಲ್ಲಿ ಸಿಖ್ ಧರ್ಮವಿದೆ. ಸೇವೆ ಎಂಬುವುದು ನನಗೆ ರಕ್ತದಲ್ಲೇ ಬಂದಿದೆ. ನಾನು ಏನು ಮಾಡಿದರೂ ಅದನ್ನು ಹೃದಯದಿಂದ ಮಾಡುತ್ತೇನೆ ಎಂದಿದ್ದಾರೆ. 
 

ನರೇಂದ್ರ ಮೋದಿ ಮತ್ತು ಸಿಖ್ ಸಮಾಜದ ಮುಖಂಡರ ನಡುವೆ ಹಲವು ವಿಷಯಗಳ ಕುರಿತು ಮಾತುಕತೆ ನಡೆದಿದೆ. ಪ್ರಧಾನಿ ಮೋದಿ ಸಿಖ್ ನಾಯಕರಿಗೆ ತಮ್ಮ ನೀತಿಗಳನ್ನು ತಿಳಿಸಿದರು ಮತ್ತು ಏಳು ವರ್ಷಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ತಿಳಿಸಿದರು.
 

Tap to resize

ಕರ್ತಾರ್‌ಪುರ ಕಾರಿಡಾರ್‌ನಿಂದ ಸಿಖ್ ಗಲಭೆ ಮತ್ತು ಅವರ ಅಪರಾಧಿಗಳಿಗೆ ಶಿಕ್ಷೆಯವರೆಗಿನ ಎಲ್ಲಾ ಹಂತಗಳ ಬಗ್ಗೆ ಪ್ರಧಾನಿ ಮೋದಿ ಸಿಖ್ ಸಂಘಟನೆಗಳಿಗೆ ತಿಳಿಸಿದರು. ಸಿಖ್ ನಾಯಕರು ತಮ್ಮ ಬೇಡಿಕೆಗಳು ಮತ್ತು ಕಳವಳಗಳನ್ನು ಪ್ರಧಾನಿ ಮುಂದೆ ಮಂಡಿಸಿದರು.

ಸಿಖ್ ಸಂಘಟನೆಗಳ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಮಾತನ್ನು ಆಲಿಸಿದರು ಮತ್ತು ಶಾಲು ಮತ್ತು ಕತ್ತಿಯನ್ನು ನೀಡಿ ಗೌರವಿಸಿದರು. ಪಂಜಾಬ್ ಚುನಾವಣೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಮತ್ತು ಸಿಖ್ ನಾಯಕರ ಸಭೆಯನ್ನು ಅತ್ಯಂತ ಪ್ರಮುಖ ಎಂದು ಹೇಳಲಾಗುತ್ತಿದೆ.
 

ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ ಸಂಘಟನೆಗಳ ಮುಖಂಡರನ್ನು ಭೇಟಿಯಾದ ಸಂದರ್ಭದಲ್ಲಿ ತುಂಬಾ ಉತ್ಸುಕರಾಗಿದ್ದರಂತೆ. ನಾಯಕರ ಕೈ ಹಿಡಿದು ಅವರೊಂದಿಗೆ ಮಾತನಾಡುತ್ತಾ ಹೆಜ್ಜೆ ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ ಸಂಘಟನೆಗಳ ಮುಖಂಡರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಮಯದಲ್ಲಿ, ಅವರು ಸಿಖ್ ಧರ್ಮದ ನಿಯಮಗಳ ಪ್ರಕಾರ ತಮ್ಮ ತಲೆಯನ್ನು ಮುಚ್ಚಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿಖ್ ನಾಯಕರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ. ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಬಂದ ದೇಶದ ಸಿಖ್ ನಾಯಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟದ ಸಮಯದಲ್ಲಿ ಅವರೇ ತಟ್ಟೆ ಕೊಟ್ಟರು.
 

ದೆಹಲಿ ಗುರುದ್ವಾರ ಸಮಿತಿ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ, ಪದ್ಮಶ್ರೀ ಬಾಬಾ ಬಲ್ಬೀರ್ ಸಿಂಗ್ ಜಿ ಸಿಚೆವಾಲ್ (ಸುಲ್ತಾನ್ಪುರ್ ಲೋಧಿ), ಮಹಂತ್ ಕರಮ್ಜಿತ್ ಸಿಂಗ್, ಅಧ್ಯಕ್ಷ ಸೇವಾಪಂಥಿ ಯಮುನಾನಗರ, ಬಾಬಾ ಜೋಗಾ ಸಿಂಗ್, ಡೇರಾ ಬಾಬಾ ಜಂಗ್ ಸಿಂಗ್ (ನಾನಕ್ಸರ್) ಕರ್ನಾಲ್, ಸಂತ ಬಾಬಾ ಮೇಜರ್ ಸಿಂಗ್, ಮುಖಿ ಡೇರಾ ಬಾಬಾ ತಾರಾ ಸಿಂಗ್, ಅಮೃತಸರ, ಜತೇದಾರ್ ಬಾಬಾ ಸಾಹಿಬ್ ಸಿಂಗ್ ಜಿ, ಕರ್ ಸೇವಾ ಆನಂದಪುರ ಸಾಹಿಬ್, ಸುರೀಂದರ್ ಸಿಂಗ್ ನಾಮಧಾರಿ ದರ್ಬಾರ್ (ಭಾನಿ ಸಾಹಿಬ್), ಬಾಬಾ ಜಸ್ಸಾ ಸಿಂಗ್ ಶಿರೋಮಣಿ ಅಕಾಲಿ ಬುದ್ಧ ದಳ, ಪಂಜ್ವಾ ತಖ್ತೋ, ಡಾ. ಹರ್ಭಜನ್ ಸಿಂಗ್, ದಮ್ದಾಮಿ, ತಕ್ಸಲ್ , ಚೌಕ್ ಮೆಹ್ತಾ, ಸಿಂಗ್ ಸಾಹಿಬ್, ಗಿಯಾನಿ ರಂಜಿತ್ ಸಿಂಗ್ ಜಿ, ಜತೇದಾರ್ ತಖ್ತ್ ಶ್ರೀ ಪಾಟ್ನಾ ಸಾಹಿಬ್ ಮೋದಿಯನ್ನು ಭೇಟಿಯಾಗಲು ಬಂದಿದ್ದರು. 

Latest Videos

click me!