ಕೇಂದ್ರ ಸರ್ಕಾರ ಪ್ರತಿ ಸಮುದಾಯ, ಪ್ರತಿ ಕಾರ್ಮಿಕರು, ಕುಶಕಲಕರ್ಮಿಗಳು, ಸಣ್ಣ ಉದ್ದಿಮೆದಾರರು, ಹೊಸದಾಗಿ ಉದ್ಯಮ ಆರಂಭಿಸು ಉತ್ಸಾಹಿಗಳು ಸೇರಿದಂತೆ ಹಲವು ಕ್ಷೇತ್ರಗಳಿಗೆ ಪ್ರತ್ಯೇಕ ಯೋಜನೆ ರೂಪಿಸಿದೆ. ಈ ಯೋಜನೆ ಮೂಲಕ ಅತೀ ಕಡಿಮೆ ಬಡ್ಡಿ ದರದಲ್ಲಿ ಸಾಲ, ಕೆಲ ಯೋಜನೆಗಳಲ್ಲಿ ಸಬ್ಸಿಡಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಿದೆ. ಈ ಪೈಕಿ ಕೇಂದ್ರ ಸರ್ಕಾರ ಕುಶಲಕರ್ಮಿಗಳಿಗೆ ಯಾವುದೇ ಗ್ಯಾರಂಟಿ ಇಲ್ಲದೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಈ ಯೋಜನೆಯಡಿ, ನೋಂದಾಯಿತ ಅರ್ಜಿದಾರರಿಗೆ 1 ಲಕ್ಷದಿಂದ 3 ಲಕ್ಷ ರೂ.ವರೆಗೆ ಕೇವಲ 5% ಬಡ್ಡಿದರದಲ್ಲಿ ಸಾಲ ಸಿಗಲಿದೆ.