ಅಯೋಧ್ಯೆಯ ದೀಪೋತ್ಸವದ ಪಕ್ಷಿನೋಟದಲ್ಲಿಯೂ ದೀಪ ; ಭಕ್ತರ ಹರ್ಷೋದ್ಘಾರ

First Published | Nov 4, 2024, 3:35 PM IST

ನವೆಂಬರ್ 3 ಶನಿವಾರದಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೀಗ ದೀಪೋತ್ಸವದ ಪಕ್ಷಿನೋಟದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದೀಪಗಳ ಮಹಾ ಉತ್ಸವದಲ್ಲಿ ರಾಮಭಕ್ತರು ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸರಯೂ ನದಿಯ ದಡದಲ್ಲಿರುವ 51 ಘಾಟ್‌ಗಳಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಜನರು ತಮ್ಮದೇ ಆದ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಿದರು. ದೀಪಾವಳಿಯ ಮುನ್ನಾದಿನದಂದು ಅಯೋಧ್ಯೆಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.

ಅಯೋಧ್ಯೆಯ 51 ಘಾಟ್‌ಗಳಲ್ಲಿ ಒಂದೇ ಸಮಯದಲ್ಲಿ ಸುಮಾರು 22.23 ಲಕ್ಷ ದೀಪಗಳನ್ನು ಬೆಳಗಿಸಲಾಯಿತು. ಅಯೋಧ್ಯೆಯ ಈ ಬೆಳಕಿನ ಹಬ್ಬ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.

Latest Videos


2017 ರಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚನೆಯೊಂದಿಗೆ ಅಯೋಧ್ಯೆಯಲ್ಲಿ ದೀಪೋತ್ಸವ ಆಚರಣೆ ಆರಂಭಿಸಲಾಯ್ತು. 2019ರಲ್ಲಿ ಈ ಸಂಖ್ಯೆ 4.10 ಲಕ್ಷ, 2020 ರಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು 2021 ರಲ್ಲಿ 9 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿದೆ. 2022 ಲ್ಲಿ, ರಾಮ್ ಕಿ ಪೈಡಿಯ ಘಾಟ್‌ಗಳಲ್ಲಿ 17 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಯಿತು. ಈ ವಿಶ್ವ ದಾಖಲೆ ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ.

ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಐದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಬೆಳಗಿದ ದೀಪಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ದಾಖಲೆಯನ್ನು 15.76 ಲಕ್ಷಕ್ಕೆ ಹೊಂದಿಸಲಾಗಿದೆ.

ಅಯೋಧ್ಯೆಯಲ್ಲಿ ಈ ಬಾರಿಯ ಬೆಳಕಿನ ಹಬ್ಬ ವಿಶೇಷವಾಗಿತ್ತು. ರಾಮನಗರಿ ರಾಮಜನ್ಮಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣದ ಸಂಭ್ರಮದಲ್ಲಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆ 22 ಜನವರಿ 2024 ರಂದು ನಡೆದಿತ್ತು.

click me!