ಪ್ರಧಾನಿಯವರ ತಾಯಿಯ ಕುರಿತಾದ ಅವಹೇಳನಕಾರಿ ಹೇಳಿಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಯುವಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರಾಜಕೀಯ ವಿಮರ್ಶೆಗಳು ಏನೇ ಇರಲಿ, ತಾಯಿಯ ಗೌರವದ ವಿಷಯದಲ್ಲಿ ರಾಜಿ ಇಲ್ಲವೆಂದು ಸಾರುವ ಈ ಘಟನೆ, 'ಮಾತೃದೇವೋ ಭವ' ಎಂಬ ಭಾರತೀಯ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ.
ದೇಶದ ಪ್ರಧಾನಿ ಆದ್ರೇನು, ತಾಯಿ ಬಗ್ಗೆ ಮಾತಾಡಿದ್ರೆ ಸುಮ್ನಿರಲ್ಲ ಹುಡುಗ್ರು. ಅಮ್ಮನ ಮಮಕಾರಕ್ಕೆ ಗಡಿಗಳಿಲ್ಲ, ಹೆತ್ತ ತಾಯಿ ಎಲ್ಲರಿಗೂ ಒಂದೇ. ತಾಯಿ ಎಂಬ ಎರಡಕ್ಷರದ ಪದದಲ್ಲಿ ಇಡೀ ಬ್ರಹ್ಮಾಂಡವೇ ಅಡಗಿದೆ. ಈ ಜಗತ್ತಿನಲ್ಲಿ ಹೆತ್ತ ತಾಯಿಗಿಂತ ದೊಡ್ಡ ದೈವ ಮತ್ತೊಂದಿಲ್ಲ. ಮಗ ಎಷ್ಟೇ ಎತ್ತರಕ್ಕೆ ಬೆಳೆಯಲಿ, ಯಾವ ಉನ್ನತ ಹುದ್ದೆಯನ್ನೇ ಏರಲಿ, ಅಥವಾ ಸಾಮಾನ್ಯನಾಗಿಯೇ ಇರಲಿ, ತಾಯಿಯ ಕಣ್ಣಿಗೆ ಆತ ಎಂದಿಗೂ ಮಗನೇ. ಹಾಗೆಯೇ, ಮಗನಿಗೂ ತನ್ನ ಅಮ್ಮನೇ ಈ ಜಗತ್ತಿನ ಅತ್ಯಂತ ಪವಿತ್ರವಾದ ಆಸ್ತಿ. ಪ್ರಧಾನಿಯಾದರೇನು, ಪ್ರಜೆಯಾದರೇನು? ಅಮ್ಮ ಎಂಬ ಬಂಧದ ಮುಂದೆ ಅಧಿಕಾರ, ಅಂತಸ್ತು, ರಾಜಕೀಯ ಎಲ್ಲವೂ ಶೂನ್ಯ. ಇತ್ತೀಚೆಗೆ ಪ್ರಧಾನಿಯವರ ತಾಯಿಯ ಕುರಿತು ಹಗುರವಾಗಿ ಬಳಸಲಾದ ಅವಹೇಳನಕಾರಿ ಶಬ್ದಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ತೀವ್ರ ಆಕ್ರೋಶ ಮತ್ತು ವೈರಲ್ ಆಗುತ್ತಿರುವ ವೀಡಿಯೊ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ.
28
ಆಕ್ರೊಶ ಹೊರಹಾಕಿದ ನೆಟ್ಟಿಗರು!
ಯುವಜನತೆ ಮತ್ತು ನೆಟ್ಟಿಗರು ಒಟ್ಟಾಗಿ ಪ್ರಧಾನಿಯನ್ನು ರಾಜಕೀಯವಾಗಿ ಎಷ್ಟಾದರೂ ವಿಮರ್ಶಿಸಿ, ಆದರೆ ಒಬ್ಬರ ತಾಯಿಯ ತಂಟೆಗೆ ಬಂದರೆ ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವದು ಕೇವಲ ರಾಜಕೀಯ ಬೆಂಬಲದಿಂದಲ್ಲ, ಅದು ಪ್ರತಿಯೊಬ್ಬ ಭಾರತೀಯನ ರಕ್ತದಲ್ಲೂ ಹರಿಯುವ 'ತಾಯಿ ಪ್ರೀತಿ'ಯ ಪ್ರತಿಫಲನವಾಗಿದೆ.
38
ಅಮ್ಮ ಎಂದರೆ ವಾತ್ಸಲ್ಯದ ಮಹಾಸಾಗರ!
ತಾಯಿ ಎಂದರೆ ಕೇವಲ ಜನ್ಮ ನೀಡಿದವಳಲ್ಲ; ತನ್ನ ಪ್ರತಿ ಉಸಿರನ್ನೂ ಮಗುವಿನ ಭವಿಷ್ಯಕ್ಕಾಗಿ ಧಾರೆ ಎರೆಯುವ ತ್ಯಾಗಮಯಿ. ತನ್ನ ಹೊಟ್ಟೆ ಹಸಿದಿದ್ದರೂ ಮಗುವಿಗೆ ಉಣಿಸುವ, ತನ್ನ ನೋವನ್ನೆಲ್ಲ ಮರೆತು ಮಗುವಿನ ನಗೆಯಲ್ಲೇ ಸಂತೋಷ ಕಾಣುವ ಅಮ್ಮನ ಮಮಕಾರಕ್ಕೆ ಬೆಲೆ ಕಟ್ಟಲು ಸಾಧ್ಯವೇ? ನವಮಾಸ ಹೊತ್ತು, ಹೆರಿಗೆಯ ಅಪಾರ ನೋವನ್ನು ನಗುನಗುತ್ತಾ ಸ್ವೀಕರಿಸಿ, ಜಗತ್ತಿಗೆ ನಮ್ಮನ್ನು ಪರಿಚಯಿಸುವ ತಾಯಿಯ ವಾತ್ಸಲ್ಯ ಅಮೂಲ್ಯವಾದದ್ದು.
ಅಂತಹ ತಾಯಿಯ ಮಮತೆ ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಪವಿತ್ರವಾದ ಸ್ಥಾನವನ್ನು ಪಡೆದಿರುತ್ತದೆ. ನಾವು ಎಷ್ಟೇ ಬೆಳೆದು ದೊಡ್ಡವರಾದರೂ, ಸಮಾಜದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ, ಅಮ್ಮನ ಕೈಯ ಒಂದು ತುತ್ತು, ಆಕೆಯ ಹಾರೈಕೆ ಕೊಡುವ ನೆಮ್ಮದಿ ಪ್ರಪಂಚದ ಯಾವ ವೈಭವಕ್ಕೂ ಸಿಗುವುದಿಲ್ಲ.
58
ರಾಜಕೀಯ ವಿಮರ್ಶೆಗೆ ಎಲ್ಲೆಯಿರಲಿ, ತಾಯಿಯ ನಿಂದನೆಗಲ್ಲ!
ಪ್ರಜಾಪ್ರಭುತ್ವದಲ್ಲಿ ನಾಯಕರನ್ನು, ಅವರ ನೀತಿಗಳನ್ನು, ಅವರ ಆಡಳಿತವನ್ನು ವಿಮರ್ಶಿಸುವ ಸಂಪೂರ್ಣ ಹಕ್ಕು ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ, ರಾಜಕೀಯ ಲಾಭಕ್ಕಾಗಿ ಅಥವಾ ವೈಯಕ್ತಿಕ ದ್ವೇಷಕ್ಕಾಗಿ ಇನ್ನೊಬ್ಬರ ಹೆತ್ತ ತಾಯಿಯನ್ನು ಎಳೆದು ತರುವುದು, ಆಕೆಯ ಬಗ್ಗೆ ಹಗುರವಾಗಿ ಮಾತನಾಡುವುದು ಸಂಸ್ಕೃತಿಯಲ್ಲ.
68
ಯಾವುದು ಮಾನವ ಧರ್ಮ?
ಅದು ಪ್ರಧಾನಿಯ ತಾಯಿಯಾಗಿರಲಿ ಅಥವಾ ಸಾಧಾರಣ ನೆರೆಮನೆಯವರ ತಾಯಿಯಾಗಿರಲಿ... 'ತಾಯಿ ಅಂದ್ರೆ ತಾಯಿನೇ. ನಮ್ಮ ತಾಯಿಗೆ ಗೌರವ ಕೊಡುವುದು ಎಷ್ಟು ಮುಖ್ಯವೋ, ಎದುರಿಗಿರುವವರ, ಶತ್ರುವಿನ ತಾಯಿಗೂ ಅದೇ ಗೌರವ ನೀಡುವುದು ಮಾನವಧರ್ಮ. ಅಮ್ಮ ಎಂಬ ಪವಿತ್ರ ಭಾವನೆಗೆ ಯಾವುದೇ ಪಕ್ಷ, ಧರ್ಮ ಅಥವಾ ಗಡಿಗಳಿಲ್ಲ. ತಾಯಿಯನ್ನು ನಿಂದಿಸುವುದು ಇಡೀ ವ ಮಾತೃಕುಲಕ್ಕೇ ಎಸಗುವ ಅಪಚಾರ.
78
ಹುಡುಗರ ಜಾಗೃತಿ ಮತ್ತು ಮೆಚ್ಚುಗೆಯ ಮಹಾಪೂರ!
ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊಗಳಿಗೆ ಯುವಜನತೆಯಿಂದ ಹೊರಬರುತ್ತಿರುವ ಬೆಂಬಲ ನೋಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೇನೆಂದರೆ ಭಾರತೀಯ ಯುವಕರು ತಾಯಿಯ ಗೌರವದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ದೇಶದ ಪ್ರಧಾನಿ ಆದ್ರೇನು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಸರಿ, ತಾಯಿ ಬಗ್ಗೆ ಮಾತಾಡಿದ್ರೆ ಈ ಹುಡುಗ್ರು ಸುಮ್ಮನಿರಲ್ಲ! ಎಂಬ ಸಂದೇಶ ಇಂದು ದೇಶಾದ್ಯಂತ ಪ್ರತಿಧ್ವನಿಸುತ್ತಿದೆ.
88
ಮಾತೃದೇವೋ ಭವ!
ಈ ಪ್ರತಿಕ್ರಿಯೆ ತೋರಿಸುವುದು ಅಧಿಕಾರದ ಮೇಲಿನ ಪ್ರೀತಿಯನ್ನಲ್ಲ, ಬದಲಿಗೆ ನಮ್ಮ ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಮೇಲಿರುವ ಅಪಾರ ಗೌರವವನ್ನು. 'ಮಾತೃದೇವೋ ಭವ' ಎಂದು ಸಾರಿದ ಈ ಪುಣ್ಯಭೂಮಿಯಲ್ಲಿ ತಾಯಿಯ ಸ್ಥಾನವನ್ನು ಕೆಳಗಿಳಿಸಲು ಯಾರಿಗೂ ಹಕ್ಕಿಲ್ಲ. ನಾವು ಎಷ್ಟೇ ಆಧುನಿಕರಾಗಲಿ, ಎಷ್ಟೇ ವಿದ್ಯಾವಂತರಾಗಲಿ, ಹೆತ್ತ ತಾಯಿಯ ತ್ಯಾಗ ಮತ್ತು ಪ್ರೀತಿಯನ್ನು ಗೌರವಿಸುವುದನ್ನು ಮರೆಯಬಾರದು. ಇನ್ನೊಬ್ಬರ ತಾಯಿಯನ್ನು ಗೌರವಿಸುವುದು ನಮ್ಮ ಸ್ವಂತ ತಾಯಿಗೆ ನಾವು ನೀಡುವ ನಿಜವಾದ ಗೌರವ. ರಾಜಕೀಯ ಬದಿಗಿಟ್ಟು, ತಾಯಿಯ ಮಮಕಾರವನ್ನು ಎತ್ತಿಹಿಡಿದಿರುವ ಪ್ರತಿಯೊಬ್ಬ ಯುವಕನ ನಿಲುವು ನಿಜಕ್ಕೂ ಶ್ಲಾಘನೀಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ