ನುಲಿತಾಳೆ, ತಲೆ ಕೆಡಿಸ್ತಾಳೆ, ಪ್ರಿನ್ಸಿಪಲ್‌ನ ಕೆಡ್ಡಾಗೆ ಬೀಳಿಸಿದ ಮಹಿಳಾ ಪೊಲೀಸ್ ಕಮ್ ಇನ್‌ಫ್ಲುಯೆನ್ಸರ್

Published : Apr 09, 2026, 07:31 PM IST

ನುಲಿತಾಳೆ, ತಲೆ ಕೆಡಿಸ್ತಾಳೆ, ಪ್ರಿನ್ಸಿಪಲ್‌ನ ಕೆಡ್ಡಾಗೆ ಬೀಳಿಸಿದ ಮಹಿಳಾ ಪೊಲೀಸ್ ಕಮ್ ಇನ್‌ಫ್ಲುಯೆನ್ಸರ್, ಮೈಮಾಟ ತೋರಿಸುತ್ತಾ ವೈಯ್ಯಾರ ಆಡುವ ಈ ಮಹಿಳಾ ಕಾಪ್ ಮೇಲೆ ಇದೀಗ ಪ್ರಕರಣ ದಾಖಲಾಗಿದೆ. 

PREV
16
ವಯ್ಯಾರಿ ಪೊಲೀಸ್

ಮಹಿಳಾ ಪೊಲೀಸ್, ಇಷ್ಟೇ ಅಲ್ಲ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕೂಡ ಹೌದು. ಸೌಂದರ್ಯ, ಮೈಮಾಟ, ಜೊತೆಗೆ ಪೊಲೀಸ್ ಪವರ್ ಇಷ್ಟಿದ್ದರೆ ಇನ್ನೇನು ಬೇಕು ಅನ್ನೋದು ಈಕೆಯ ಸ್ಟೈಲ್. ಇದೇ ಪವರ್ ಬಳಸಿಕೊಂಡು ಹಲವರು ಉದ್ಯಮಿಗಳನ್ನು ಖೆಡ್ಡಾಗೆ ಬೀಳಿಸಿದ್ದ ಪುಣೆ ಪೊಲೀಸ್ ಸೊನಾಲಿ ಹಿಂಗೆ ಶಾಲಾ ಪ್ರಾಂಶುಪಾಲರನ್ನೂ ಕೆಡ್ಡಾಗೆ ಬೀಳಿಸಿ ಲಕ್ಷ ಲಕ್ಷ ರೂಪಾಯಿ ದೋಚಿದ್ದಾಳೆ. ಈ ಕುರಿತು ಪ್ರಕರಣ ದಾಖಲಾಗಿದೆ.

26
7 ಲಕ್ಷ ರೂಪಾಯಿ ಸುಲಿಗೆ ಮಾಡಿದ ವಯ್ಯಾರಿ ಪೊಲೀಸ್

ಮಹಿಳೆಯ ಸುರಕ್ಷತೆಗಾಗಿ ಇರುವ ದಾಮಿನಿ ಪೊಲೀಸ್ ಸ್ಕ್ವಾಡ್ ತಂಡದ ಸದಸ್ಯ ಈಕೆ. ಆದರೆ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹಲವರಿಂದ ಹಣ ಸುಲಿಗೆ ಮಾಡುವುದೇ ಈಕೆಯ ಪ್ರಮುಖ ಕೆಲಸ. ಇದಕ್ಕೆ ಕೆಲ ಪೊಲೀಸರು ಸಾಥ್ ನೀಡಿದ್ದಾರೆ. ಪುಣೆಯ ಪ್ರತಿಷ್ಠಿತ ಶಾಲೆಯ 55 ವರ್ಷದ ಪ್ರಾಂಶುಪಾಲರಿಗೆ ಪೋಕ್ಸೋ ಕೇಸ್ ಬೆದರಿಸಿ 7 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ.

36
ಪೋಕ್ಸೋ ಕೇಸ್ ಬೆದರಿಸಿ ಸುಲಿಗೆ

ಪ್ರಾಂಶುಪಾಲರ ಮೇಲೆ ಶಾಲೆಯ ಬಾಲಕಿ ಹಾಗೂ ಆಕೆಯ ಪೋಷಕರು ಲೈಂಗಿಕ ಕುರಿಕುಳದ ಕೇಸ್ ನೀಡಿದ್ದಾರೆ ಎಂದು ಸುಳ್ಳು ಹೇಳಿ ಪ್ರಾಂಶುಪಾಲರ ಬೆದರಿಸಿದ್ದಾರೆ. ಈ ಮಾತನ್ನು ನಿರಾಕರಿಸಿದ ಪ್ರಾಂಶುಪಾಲರು, ಇದು ಸಾಧ್ಯವಿಲ್ಲ ಎಂದಿದ್ದಾರೆ. ಇಲ್ಲಿ ಯಾವುದೇ ಕಿರುಕುಳ ನಡೆದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಸಿದಿ ಸೋನಾಲಿ ಸುಳ್ಳು ಕೇಸ್ ರೀತಿ ಇದೆ. ಹೀಗಾಗಿ ರಾಜಿ ಮಾಡಿಕೊಂಡು ಕೇಸ್ ಮಾಡದೇ ಪ್ರಕರಣದಿಂದ ಜಾರಿಕೊಳ್ಳುವುದು ಉತ್ತಮ ಎಂದು ಪ್ರಾಂಶುಪಾಲರಿಗೆ ಸಲಹೆ ನೀಡಿದ್ದಾರೆ. 3 ಲಕ್ಷಕ್ಕೆ ರಾಜಿ ಎಂದು ಕೊನೆಗೆ 7 ಲಕ್ಷ ರೂ ಸುಲಿಗೆ ಮಾಡಿದ್ದಾರೆ.

46
ಹಿರಿಯ ಪೊಲೀಸ್ ಅಧಿಕಾರಿಗೆ ದೂರು

ಮಹಿಳಾ ಪೊಲೀಸ್ ಸೋನಾಲಿ ನಡೆಯಿಂದ ಅನುಮಾನಗೊಂಡ ಪ್ರಾಂಶುಪಾಲರು ಹಿರಿಯ ಅಧಿಕಾರಿಗೆ ದೂರು ನೀಡಿದ್ದಾರೆ. ಈ ವೇಳೆ ಸೋನಾಲಿ ಕೆಲಸ ಬಯಲಾಗಿದೆ. ಸೋನಾಲಿಗೆ ಇನ್ಸ್‌ಪೆಕ್ಟರ್ ಸುಜಿತ್ ಬಾಡೆ ಹಾಗೂ ಪೇದೆ ಸುದಮ್ ತಯಾಡೆ ಸಾಥ್ ನೀಡಿದ್ದಾರೆ. ಇದೀಗ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.

56
ಗುಡ್ ಟಚ್ ಬ್ಯಾಡ್ ಟಚ್ ಜಾಗೃತಿಯಲ್ಲೇ ಪ್ಲಾನ್

ಶಾಲೆಯಲ್ಲಿ ಮಕ್ಕಳಿಗೆ ಗುಡ್ ಟಚ್ ಹಾಗೂ ಬ್ಯಾಡ್ ಟಚ್ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಇದನ್ನೇ ಬಳಸಿಕೊಂಡು ಶಾಲೆ ಹಾಗೂ ಪ್ರಾಂಶುಪಾಲರ ವಿರುದ್ದ ಕೆಡ್ಡಾ ತೋಡಿದ ಈ ಮಹಿಳಾ ಕಾಪ್ 7 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾಳೆ. ಇದೀಗ ಪೊಲೀಸರು ಈ ಮಹಿಳಾ ಕಾಪ್ ಹಾಗೂ ಇನ್ನಿಬ್ಬರು ಇದೇ ರೀತಿ ಅದೆಷ್ಟು ಮಂದಿಯಿಂದ ಸುಲಿಗೆ ಮಾಡಿದ್ದಾರೆ ಅನ್ನೋ ಕುರಿತು ತನಿಖೆ ಆರಂಭಿಸಿದ್ದಾರೆ.

66
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಈ ಮಹಿಳಾ ಪೊಲೀಸ್ ಸೋನಾಲಿ ಹಿಂಗೆ ವಿಡಿಯೋ ಪೋಸ್ಟ್ ಮೂಲಕ ಭಾರಿ ಅಭಿಮಾನಿ ಬಳಗ ಹೊಂದಿದ್ದಾರೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲೂ ಭಾರಿ ಸಕ್ರಿಯವಾಗಿರುವ ಈ ಕಾಪ್ ಇದೀಗ ಪ್ರಕರಣದಲ್ಲಿ ಸಿಲುಕಿ ಮುಖ ಮುಚ್ಚಿಕೊಳ್ಳುವಂತಾಗಿದೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories