ನಾಸಿಕ್ ಗುರೂಜಿ ಕಾಮಕಾಂಡ ವಿಡಿಯೋ ಟೆಲಿಗ್ರಾಂನಲ್ಲಿ 50 ರೂಗೆ ಮಾರಾಟ, ಈ ಕುರಿತು ವರದಿಗಳು ಹರಿಡಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ವಿಡಿಯೋ ಕುರಿತು ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಾಸಿಕ್ ಗುರೂಜಿ ಅಶೋಕ್ ಖಾರಟ್ ಬಂಧನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕೆಲ ರಾಸಲೀಲೆ ವಿಡಿಯೋಗಳು ಹರಿದಾಡಿತ್ತು. 100ಕ್ಕೂ ಹೆಚ್ಚು ಮಹಿಳೆಯರನ್ನು ಈ ಗುರೂಜಿ ಬಳಸಿಕೊಂಡಿದ್ದ. ಈ ಪೈಕಿ ಹಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿತ್ತು. ಇದೀಗ ರಹಸ್ಯ ವಿಡಿಯೋಗಳು ಟೆಲಿಗ್ರಾಂ ಮೂಲಕ 10 ರೂಪಾಯಿಯಿಂದ 50 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
26
ರಹಸ್ಯ ವಿಡಿಯೋಗಳು ಲೀಕ್
ಪೊಲೀಸರು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಹಾಗೂ ಕೆಲ ವೆಬ್‌ಸೈಟ್‌ನಿಂದ ತೆಗೆದು ಹಾಕಲು ಎಜೆನ್ಸಿಗಳಿಗೆ ನೋಟಿಸ್ ನೀಡಿ ಯಶಸ್ವಿಯಾಗಿತ್ತು.ಆದರೆ ಹಲವರ ಮೊಬೈಲ್ ಸೇರಿರುವ ಈ ವಿಡಿಯೋಗಳು ಟೆಲಿಗ್ರಾಂ ಮೂಲಕ ಮಾರಾಟ ಮಾಡಲಾಗುತ್ತಿದೆ. 10 ರೂಪಾಯಿಯಿಂದ 50 ರೂಪಾಯಿ ವರೆಗೆ ಈ ವಿಡಿಯೋಗಳನ್ನು ಮಾರಾಟ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
36
ಮೊದಲು ಪೇಮೆಂಟ್ ಬಳಿಕ ವಿಡಿಯೋ ಫಾರ್ವರ್ಡ್
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಗುರೂಜಿ ಅಶೋಕ್ ಖಾರಟ್ ಅವರ ರಾಸಲೀಲೆ ವಿಡಿಯೋಗಳಿರುವ ಕೆಲವರು ಅದನ್ನು ಮಾರಾಟ ಮಾಡುತ್ತಿದ್ದಾರೆ. ಆಸಕ್ತರು ಡಿಜಿಟಲ್ ಪೇಮೆಂಟ್ ಮೂಲಕ ಮೊದಲು ಪಾವತಿ ಮಾಡಬೇಕು. ಬಳಿಕ ಒಂದು ಫಾರ್ವರ್ಡ್ ಮಾಡಲಾಗುತ್ತದೆ .
ಗುರೂಜಿ ಅಶೋಕ್ ಖಾರಟ್ ಅರೆಸ್ಟ್ ಬಳಿಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿತ್ತು. ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಂತೆ ವಿಡಿಯೋಗಳು ಕೆಲ ವೆಬ್‌ಸೈಟ್ ಮೂಲಕ ಲಭ್ಯವಾಗಿತ್ತು. ಹೀಗಾಗಿ ಪೊಲೀಸರು 170 ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಆಗಿದ್ದ ಈ ಅಶೋಕ್ ಖಾರಟ್ ವಿಡಿಯೋಗಳನ್ನು ಮಹಾರಾಷ್ಟ್ರ ಐಟಿ ಸೆಲ್ ಪೊಲೀಸರು ಡಿಲೀಟ್ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
56
ಮಹಿಳೆಯರ ಗೌಪ್ಯತೆ ಕಾಪಾಡುವುದು ಪೊಲೀಸರಿಗೆ ಸವಾಲು
ಅಮಾಯಕ ಮಹಿಳೆಯರನ್ನು ಬಳಸಿಕೊಂಡ ಅಶೋಕ್ ಖಾರಟ್ ಅರೆಸ್ಟ್ ಆಗಿದ್ದಾನೆ. ಆದರೆ ಗುರೂಜಿ ಜೊತೆ ಕಾಣಿಸಿಕೊಂಡ ಮಹಿಳೆಯರ ವಿಡಿಯೋಗಳು ಲೀಕ್ ಆಗದಂತೆ ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಹಿಳೆಯರ ಕುಟುಂಬದಲ್ಲಿ ಕೋಲಾಹಗಳು ನಡೆಯುತ್ತಿದೆ.
66
ವಿಡಿಯೋ ಲೀಕ್ ಮಾಡಿದವರ ವಿರುದ್ದ ಕೇಸ್
ರಾಸಲೀಲೆ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಸೇರಿದಂತೆ ಯಾವುದೇ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಲೀಕ್ ಮಾಡಿದರೆ ಅವರ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆ 67ರ ಅಡಿಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಐಟಿ ಸೆಲ್ ಪೊಲೀಸರು ಇದೀಗ ಡಿಜಿಟಲ್ ಪ್ಲಾಟ್‌ಫಾರ್ಮ್ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ವಿಡಿಯೋ ಲೀಕ್ ಮಾಡಿದವರ ವಿರುದ್ದ ಕೇಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ