ಆ ಒಂದು ಹಠದಿಂದ ಮುತ್ತೈದೆಯಾದ 'ವಿಧವೆ': ಜೀವಂತ ವ್ಯಕ್ತಿಯ 'ಶವ' ರವಾನೆ!

First Published Apr 12, 2021, 5:15 PM IST

ಪಾಟ್ನಾ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಬಹುದೊಡ್ಡ ಎಡವಟ್ಟು ಬಹಿರಂಗಗೊಂಡಿದೆ. ಇದು ಕೊರೋನಾದಿಂದ ನಲ್ವತ್ತು ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆಂದು ಮರಣ ಪ್ರಮಾಣ ಪತ್ರ ವಿತರಿಸಿದೆ. ಇಷ್ಟೇ ಅಲ್ಲದೇ ಶವವನ್ನು ಪ್ಯಾಕ್ ಮಾಡಿ ಕುಟುಂಬಸ್ಥರಿಗೂ ರವಾನಿಸಿದೆ. ಆದರೆ ವಾಸ್ತವವಾಗಿ ಆ ವ್ಯಕ್ತಿ ಸಾಯದೆ ಜೀವಂತವಾಗಿದ್ದಾನೆ. ಸದ್ಯ ಈ ಪ್ರಕರಣ ವಿವಾದ ಸೃಷ್ಟಿಸಿದೆ ಬೆನ್ನಲ್ಲೇ ಆರೋಗ್ಯಾಧಿಕಾರಿಯನ್ನು ಅಮಾನತ್ತುಗೊಳಿಸಲಾಗಿದೆ. ಇನ್ನು ಕೊರೋನಾದಿಂದ ವ್ಯಕ್ತಿ ಮೃತಪಟ್ಟಿದ್ದಾನೆಂದರೂ ಅಂತ್ಯೋಷ್ಟಿಗಿಂತಲೂ ಮೊದಲೇ ಪತ್ನಿ ಶವಕ್ಕೆ ಹೊದಿಸಿದ್ದ ಬಟ್ಟೆ ತೆಗೆದು ಮುಖ ನೋಡಿದ್ದರಿಂದ ಈ ವಿಚಾರ ಬಯಲಾಗಿದೆ. 

ಪಾಟ್ನಾದ ಬಾಢ್‌ನ ನಿವಾಸಿ ಚುನ್ನೂ ಕುಮಾರ್‌ರವರ ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಿದ್ದರೂ ಶುಕ್ರವಾರ ಅವರನ್ನು PMCHಗೆ ದಾಖಲಿಸಲಾಯ್ತು. ಇನ್ನು ಭಾನುವಾರ ಬೆಳಗ್ಗೆ ಸುಮಾರು ಹತ್ತು ಗಂಟೆಗೆ ಕುಟುಂಬ ಸದಸ್ಯರ ಬಳಿ ರೋಗಿಯ ಆರೋಗ್ಯ ತೀವ್ರ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದರು. ಇದಾದ ಬಳಿಕ ಒಂದು ತಾಸಿನಲ್ಲಿ ಮೃತಪಟ್ಟಿದ್ದಾರೆಂದು ಘೋಷಿಸಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಕಾಗದ ಹಸ್ತಾಂತರಿಸಿದರು. ಅಲ್ಲದೇ ಮೃತದೇಹವನ್ನು ಪ್ಯಾಕ್ ಮಾಡಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
undefined
ಇನ್ನು ಆಸ್ಪತ್ರೆಯವರು ಮೃತದೇಹವನ್ನು ಮನೆಗೆ ಕೊಂಡೊಯ್ಯಬಾರದೆಂದು ತಿಳಿಸಿದ್ದರು. ಹೀಗಾಗಿ ಆಸ್ಪತ್ರೆಯಿಂದ ನೇರವಾಗಿ ನಾವು ಅಂತ್ಯ ಸಂಸ್ಕಾರ ನೆರವೇರಿಸಲು ಶವವನ್ನು ಭಾಂಸ್‌ಘಾಟ್‌ಗೆ ಕೊಂಡೊಯ್ದೆವು ಎಂದು ಪತ್ನಿ ಮಾಧ್ಯಮಗಳಿಗೆ ವಿವರಿಸಿದ್ದಾರೆ.
undefined
ಇನ್ನು ಶವವನ್ನು ಮಷೀನ್‌ನಲ್ಲಿಡುವ ಮುನ್ನ ಕೊನೆಯ ಬಾರಿ ಮುಖ ನೋಡಲು ಅವಕಾಶ ನೀಡಿ ಎಂದು ನಾನು ಹಠ ಮಾಡಿದೆ. ಈ ವೇಳೆಯೂ ಹಣ ಕೇಳಿದರು, ನೀಡಿದ ಬಳಿಕವಷ್ಟೇ ನೋಡಲು ಅವಕಾಶ ನೀಡಲಾಯ್ತು. ನಾನು ದೂರದಿಂದಲೇ ಶವ ನೋಡಿ ಗುರುತು ಹಿಡಿದೆ ಎಂದಿದ್ದಾರೆ ಪತ್ನಿ.
undefined
ಈ ಹೆಣವನ್ನು ದೂರದಿಂದ ನೋಡಿದಾಗಲೇ ನನ್ನ ಗಂಡ ಜೀವವಿದ್ದಾರೆಂದು ನನಗೆ ತಿಳಿಯಿತು. ವ್ಯಕ್ತಿ ಮೃತರಾಗಿದ್ದಾರೆಂದು ಆದಾಗ ಶಾಕ್ ಹಾಗೂ ಮೃತಪಟ್ಟವನು ನನ್ನ ಗಂಡನಲ್ಲ ಎಂದು ತಿಳಿದಾಗ ಆದ ಖುಷಿ ನನಗೆ ಶಬ್ಧಗಳಲ್ಲಿ ವರ್ಣಿಸಲು ಆಗುವುದಿಲ್ಲ ಎಂದಿದ್ದಾರೆ.
undefined
ಕಾಲಿಗೆ ಪ್ಲಾಸ್ಟರ್‌ ಹಾಕಿದ್ದ ಕಾರಣ ಡಿಸೆಂಬರ್‌ನಿಂದಲೇ ಹಾಸಿಗೆ ಹಿಡಿದಿದ್ದರು. ನಾವು ನಮ್ಮ ಕುಟುಂಬದವರೆಲ್ಲರೂ ಕೊರೋನಾ ಟೆಸ್ಟ್‌ ಮಾಡಿಸಿದೆವು. ಯಾರಿಗೂ ಸೋಂಕು ತಗುಲಿರಲಿಲ್ಲ. ಹೀಗಿದ್ದರೂ ಅವರಿಗೆ ಕೊರೋನಾ ಹೇಗೆ ತಗುಲಿತು ಎಂಬುವುದೇ ತಿಳಿದಿರಲಿಲ್ಲ. ಈ ವಿಚಾರವಾಗಿ ನಾವು ಸಾಧ್ಯವಾದಷ್ಟು ಮಟ್ಟಿಗೆ ದೂರು ನೀಡುತ್ತೇವೆ. ಇಂತಹ ಅನ್ಯಾಯ ಯಾರಿಗೂ ಆಗಬಾರದೆಂಬುವುದೇ ನಮ್ಮ ಆಶಯ ಎಂದಿದ್ದಾರೆ.
undefined
click me!