ಮೋದಿಯದ್ದು ಬ್ರಿಟೀಷ್ ಆಳ್ವಿಕೆ, ರೈತ ಪ್ರತಿಭಟನೆ ಚಂಪಾರನ್ ಸತ್ಯಾಗ್ರಹ ಎಂದ ರಾಹುಲ್ ಗಾಂಧಿ!

First Published | Jan 3, 2021, 3:39 PM IST

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತ ಪ್ರತಿಭಟನೆಯನ್ನು ನಿರ್ಲಕ್ಷ್ಯಿಸಿರುವ ಮೋದಿ ಸರ್ಕಾರ ಅವರ ಹಕ್ಕುಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಇನ್ನು ರೈತರ ಪ್ರತಿಭಟನೆಯನ್ನು ಬ್ರಿಟೀಷರ ಆಳ್ವಿಕೆಯಲ್ಲಿ ನಡೆದ ಚಂಪಾರನ್ ಸತ್ಯಾಗ್ರಹಕ್ಕೆ ಹೋಲಿಸಿದ್ದರೆ, ಮೋದಿಯನ್ನು ಬ್ರಿಟೀಷ್ ಕಂಪನಿಗೆ ಹೋಲಿಸಿದ್ದಾರೆ. ರಾಹುಲ್ ಹೇಳಿದ ಚಂಪಾರನ್ ಸತ್ಯಾಗ್ರಹವೇನು? ಈ ಕುರಿತ ಮಾಹಿತಿ ಇಲ್ಲಿದೆ.

ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೈತ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ರೈತ ಸತ್ಯಾಗ್ರಹಿಯಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
undefined
ಬ್ರಿಟಿಷರ ವಿರುದ್ದ ಮಹತ್ಮಾ ಗಾಂಧಿ ನೇತೃತ್ವದಲ್ಲಿ ನಡೆದ ಚಂಪಾರನ್ ಸತ್ಯಾಗ್ರಹಕ್ಕೆ ರೈತ ಪ್ರತಿಭಟನೆಯನ್ನು ಹೋಲಿಸಿದ ರಾಹುಲ್ ಗಾಂಧಿ, ಮೋದಿ ಬ್ರಿಟೀಷ್ ಕಂಪನಿ ಎಂದು ಟೀಕಿಸಿದ್ದಾರೆ.
undefined

Latest Videos


1917ರಲ್ಲಿ ರೈತರು ಮಹತ್ಮಾ ಗಾಂಧಿ ಜೊತೆ ಸೇರಿ ಆಂದೋಲನ ಮಾಡಿದ್ದರು. ಬ್ರಿಟೀಷರ ವಿರುದ್ಧ ನಡೆದ ಈ ಚಂಪಾರನ್ ಆಂದೋಲ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.
undefined
ಸದ್ಯ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಇದೇ ಚಂಪಾರನ್ ಸತ್ಯಾಗ್ರಹಕ್ಕೆ ಹೋಲಿಸಿದ್ದಾರೆ. ಅಂದು ರೈತರು ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದರು. ಇದೀಗ ಬ್ರಿಟೀಷ್ ಆಳ್ವಿಕೆ ನಡೆಸುತ್ತಿರುವ ಮೋದಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.
undefined
ಬಿಹಾರದ ಚಂಪಾರನ್ ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಹಾಗೂ ರೈತರು ಬ್ರಿಟೀಷರ ವಸಾಹತುಶಾಹಿ ಆಡಳಿತ ವಿರುದ್ಧ ಆಂದೋಲ ಆರಂಭಿಸಿದ್ದರು. ಸದ್ಯ ದೇಶದಲ್ಲಿ ಇದೇ ಬ್ರಿಟೀಷ್ ಆಳ್ವಿಕೆ ಪರಿಸ್ಥಿತಿ ಇದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
undefined
ಮೋದಿ ಸರ್ಕಾರ ರೈತರ ಬೇಡಿಕೆಯಂತೆ ಮೂರು ಕೃಷಿ ಕಾಯ್ದೆಗಳನ್ನ ಹಿಂಪಡೆಯಬೇಕು. ಈ ಕಾಯ್ದೆಯಿಂದ ಮೋದಿ ಕಂಪನಿಗೆ ಲಾಭವೇ ಹೊರತು ರೈತರಿಗಿಲ್ಲ ಎಂದು ರಾಹುಲ್ ಹೇಳಿದ್ದಾರೆ.
undefined
ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಚಂಪಾರನ್ ಸತ್ಯಾಗ್ರಹ ರೀತಿ ರೈತರು ತಮ್ಮ ಬೇಡಿಕೆಯನ್ನು, ಹಕ್ಕುಗಳನ್ನು ಪಡದೆ ಪಡೆದುಕೊಳ್ಳುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.
undefined
ರೈತ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಿರುವ ಕಾಂಗ್ರೆಸ್, ಕೇಂದ್ರ ಸರ್ಕಾರವನ್ನ ಟೀಕಿಸುತ್ತಲೇ ಬಂದಿದೆ. ಕೃಷಿ ಮಸೂದೆ ವಾಪಸ್ ಪಡೆದುಕೊಳ್ಳಿ ಎಂದು ಕಾಂಗ್ರೆಸ್ ರೈತರ ಜೊತೆ ಸೇರಿ ಆಗ್ರಹಿಸಿದೆ.
undefined
click me!