ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಮಲಗಿದ ಯುವತಿ, ಮತ್ತೆ ಜೋಂಬಿ ಡ್ರಗ್ಸ್ ವಾಸನೆ; ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಆಕ್ರೋಶ

Published : Oct 03, 2026, 05:41 PM IST

ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡಿ ನಂತರೆ ಅಲ್ಲೇ ಮಲಗಿರುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದೇಶದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅದಕ್ಕೆ ಪೊಲೀಸರು ಸ್ಪಷ್ಟನೆ ಕೂಡ ನೀಡಿದ್ದಾರೆ.

PREV
14
ಮಾದಕ ದ್ರವ್ಯ ಸಮಸ್ಯೆ

ಸೋಶಿಯಲ್ ಮೀಡಿಯಾದಲ್ಲಿ 19 ವರ್ಷದ ಯುವತಿಯೊಬ್ಬಳು ಕುಡಿದು ತೂರಾಡುತ್ತಿರುವ ವಿಡಿಯೋ ಸಂಚಲನ ಸೃಷ್ಟಿಸಿದೆ. ಬೆನ್ನಲ್ಲೇ ಮಾದಕ ದ್ರವ್ಯ ಸಮಸ್ಯೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

24
ಜೊಂಬಿ ಡ್ರಗ್ಸ್ ಬಗ್ಗೆ ಲಿಂಕ್

ಪೊಲೀಸರು ತಕ್ಷಣ ಪ್ರತಿಕ್ರಿಯಿಸಿ.. ಯುವತಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು, ಆಕೆ ತೂರಾಡುತ್ತಿರೋದಕ್ಕೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಮಾದಕ ದ್ರವ್ಯದ ವಾಸನೆ ಬಂದಿರೋ ಹಿನ್ನೆಲೆಯಲ್ಲಿ ಯುವಕರ ಭವಿಷ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಯಾಕೆಂದರೆ ಜೊಂಬಿ ಡ್ರಗ್ಸ್ ಬಗ್ಗೆ ಲಿಂಕ್ ಮಾಡುತ್ತಿದ್ದಾರೆ.`

34
ಡ್ರಗ್ಸ್ ಸಿಕ್ಕಿಲ್ಲ

ಇನ್ನು ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರಿಗೆ ಯುವತಿ ಬಳಿ ಯಾವುದೇ ಡ್ರಗ್ಸ್ ಪತ್ತೆ ಆಗಿಲ್ಲ. ಆದರೆ ಆ ಸ್ಥಿತಿಗೆ ಬರಲು ಕಾಣವೇನು ಎಂಬ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಜೋಂಬಿ ಡ್ರಗ್ಸ್ ಬಗ್ಗೆ ಭಾರೀ ಚರ್ಚೆ ಆಗಿತ್ತು.

ಎಲ್ಲಿ ನಡೆದಿರೋದು?

ಪಂಜಾಬ್‌ನ ಭಟಿಂಡಾದ ಧಾನ್ಯ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಸುಖ್‌ಬೀರ್ ಸಿಂಗ್ ಬಾದಲ್, ಪಂಜಾಬ್‌ನಲ್ಲಿ ಮಹಿಳೆಯರನ್ನ, ಯುವಕರನ್ನು ಮಾದಕ ದ್ರವ್ಯಗಳ ಪಿಡುಗಿನಿಂದ ರಕ್ಷಿಸಬೇಕಾಗಿದೆ ಎಂದು ಆಪ್ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿದ್ದಾರೆ.

44
ಪೊಲೀಸರು ಹೇಳಿದ್ದೇನು?

ಬಟಿಂಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಕುಡಿದ ಅಮಲಿನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸ್ವಯಂ ಪ್ರೇರಿತವಾಗಿ ಬಂದಿರುವುದಾಗಿ ಕೊತ್ವಾಲಿ ಹೇಳಿದ್ದಾರೆ. ಮಾಹಿತಿ ಬಂದ ತಕ್ಷಣ ಪಿಸಿಆರ್ ತಂಡ ಸ್ಥಳಕ್ಕೆ ತಲುಪಿ ಯುವತಿಯನ್ನು ರಕ್ಷಿಸಲಾಗಿದೆ. ವೈದ್ಯಕೀಯ ಸಹಾಯಕ್ಕಾಗಿ ಬಟಿಂಡಾ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ತಿಳಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories