Aadhar card: ಆಧಾರ್ ಕಾರ್ಡ್ ಬಳಕೆದಾರರಿಗೆ ಬಿಗ್‌ ಅಪ್‌ಡೇಟ್ಸ್, 5 ಪ್ರಮುಖ ಬದಲಾವಣೆಗಳು

Published : Oct 02, 2026, 08:11 AM IST

Aadhar card updates: ಆಧಾರ್ ಕಾರ್ಡ್‌ ವಿಚಾರದಲ್ಲಿ ಐದು ಪ್ರಮುಖ ಬದಲಾವಣೆ ಮಾಡಲಾಗಿದೆ. ಬಳಕೆದಾರರು ತಿಳಿದುಕೊಳ್ಳಲೇಬೇಕಾದ ಅಪ್‌ಡೇಟ್ಸ್‌ ಇಲ್ಲಿದೆ.

PREV
16
ಆಧಾರ್ ಬಳಕೆದಾರರಿಗೆ ಸಿಹಿಸುದ್ದಿ

ಆಧಾರ್ ಕಾರ್ಡ್‌ದಾರರಿಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಭರ್ಜರಿ ಸಿಹಿ ಸುದ್ದಿ ನೀಡಿದೆ. ಆಧಾರ್ ಸೇವೆಗಳನ್ನು ಮತ್ತಷ್ಟು ವೇಗ ಹಾಗೂ ಸುಲಭಗೊಳಿಸುವ ಉದ್ದೇಶದಿಂದ UIDAI ಐದು ಪ್ರಮುಖ ಬದಲಾವಣೆ ಮಾಡಿದೆ.

26
Face Recognition ವ್ಯವಸ್ಥೆ

ಪಡಿತರ ಚೀಟಿ (Ration) ಅಂಗಡಿಗಳಲ್ಲಿ ಬೆರಳಚ್ಚು (Fingerprint) ಮ್ಯಾಚ್ ಆಗದೆ ತೊಂದರೆ ಅನುಭವಿಸುತ್ತಿದ್ದ ಜನರಿಗೆ ಇನ್ಮುಂದೆ ಪರಿಹಾರ ಸಿಗಲಿದೆ. ಬೆರಳಚ್ಚಿನ ಬದಲಾಗಿ 'ಫೇಸ್ ವೆರಿಫಿಕೇಶನ್' (Face Verification) ಮೂಲಕವೇ ಪಡಿತರ ಪಡೆಯಬಹುದು.

36
ಆಧಾರ್ ಕಚೇರಿಗಳಲ್ಲಿ ಟೋಕನ್ ಸಿಸ್ಟಮ್

ದೇಶಾದ್ಯಂತ ಇರುವ ಆಧಾರ್ ಸೇವಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಜನಸಂದಣಿಯನ್ನು ನಿಯಂತ್ರಿಸಲು ಹೊಸ ಟೋಕನ್ ವ್ಯವಸ್ಥೆ ಜಾರಿಗೆ ತರಲಾಗಿದೆ.

46
ಸಂಸ್ಥೆಗಳಿಗೆ ಸುಲಭ ಅಥೆಂಟಿಕೇಶನ್ ಫ್ರೇಮ್‌ವರ್ಕ್

ಕಡಿಮೆ ಪ್ರಮಾಣೀಕರಣದ ಅಗತ್ಯವಿರುವ ಸಂಸ್ಥೆಗಳಿಗಾಗಿ AUA ಮತ್ತು KUA ಫ್ರೇಮ್‌ವರ್ಕ್ ಅನ್ನು ಪರಿಚಯಿಸಲಾಗಿದೆ. ಇದರಿಂದ ಸಂಸ್ಥೆಗಳು ಆಧಾರ್ ದೃಢೀಕರಣ ವ್ಯವಸ್ಥೆಯೊಂದಿಗೆ ಸುಲಭವಾಗಿ ಸಂಯೋಜನೆಗೊಳ್ಳಬಹುದು.

56
SWIK ಪೋರ್ಟಲ್ 2.0

ಸರ್ಕಾರೇತರ ಸಂಸ್ಥೆಗಳು ಆಧಾರ್ ದೃಢೀಕರಣದ ಅನುಮೋದನೆ ಪಡೆಯಲು 'SWIK 2.0' ಎಂಬ ಆನ್‌ಲೈನ್ ಪೋರ್ಟಲ್ ಆರಂಭಿಸಲಾಗಿದೆ. ಇದರ ಮೂಲಕ ಅರ್ಜಿ ಪ್ರಕ್ರಿಯೆ ಸರಳವಾಗಲಿದೆ.

66
ವೆಬ್‌ಸೈಟ್ ಹಾಗೂ ಹೆಚ್ಚುವರಿ ಭಾಷೆಗಳು

UIDAI ತನ್ನ ಅಧಿಕೃತ ವೆಬ್‌ಸೈಟ್ ಅನ್ನು ಹೊಸ ಮಾದರಿಯಲ್ಲಿ ವಿನ್ಯಾಸಗೊಳಿಸಿದ್ದು, ಸ್ಕ್ರೀನ್ ರೀಡರ್ ಮತ್ತು ಸುಧಾರಿತ ಫಾಂಟ್ ಸೌಲಭ್ಯಗಳನ್ನು ನೀಡಿದೆ. ಪ್ರಸ್ತುತ 13 ಭಾಷೆಗಳಲ್ಲಿ ಲಭ್ಯವಿರುವ ಈ ವೆಬ್‌ಸೈಟ್ ಸೇವೆಗಳನ್ನು ಶೀಘ್ರದಲ್ಲೇ 23 ಭಾಷೆಗಳಿಗೆ ವಿಸ್ತರಿಸಲಾಗುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories