ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ತಮಿಳುನಾಡಿನಲ್ಲಿ ಶನಿವಾರ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು. ಅವರಿಗೆ ತಮಿಳುನಾಡಿನಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.
ತಮಿಳುನಾಡಿನ ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಪ್ರಧಾನಿ ಮೋದಿ ಅವರಿಗೆ ವೃದ್ಧ ಮಹಿಳೆಯೊಬ್ಬರು ತಮ್ಮ ಮನೆಯಿಂದಲೇ ಕೈ ಬೀಸುತ್ತಿರುವ ದೃಶ್ಯ.
210
ತಮಿಳುನಾಡಿನ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಬೀಸಿ ಭರ್ಜರಿ ಸ್ವಾಗತ ನೀಡಿದ ಮಹಿಳೆಯರು.
310
ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಭಾಗಿಯಾಗುವ ನಿಟ್ಟಿನಲ್ಲಿ ಅನುಷ್ಟಾನದಲ್ಲಿರುವ ಪ್ರಧಾನಿ ಮೋದಿಗೆ ಮಹಿಳೆಯ ಸ್ವಾಗತ
410
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಕಂಬ ರಾಮಾಯಣಂ ಎಂದೂ ಕರೆಯಲ್ಪಡುವ ರಾಮಾವತಾರಂ ತಮಿಳು ಮಹಾಕಾವ್ಯದ ಪದ್ಯಗಳನ್ನು ಆಲಿಸಿದರು
510
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನದ ಆನೆಯಿಂದ ಆಶೀರ್ವಾದ ಪಡೆದುಕೊಂಡರು.
610
ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ. ಇದೇ ದೇವಸ್ಥಾನದಲ್ಲಿ ಮೋದಿ ಕಂಬ ರಾಮಾಯಣವನ್ನು ಆಲಿಸಿದರು.
710
ಪ್ರಧಾನಿ ನರೇಂದ್ರ ಮೋದಿ ಅವರು ದೇವಸ್ಥಾನದ ಮಾರ್ಗದಲ್ಲಿ ಸಾಗುತ್ತಿದ್ದಂತೆ, ಅಕ್ಕಪಕ್ಕದಲ್ಲಿ ಅವರನ್ನು ನೋಡಲು ಜಮಾಯಿಸಿದ್ದ ಜನರು.
810
ಪ್ರಧಾನಿ ನರೇಂದ್ರ ಮೋದಿ ಅವರು ಸಾಗುತ್ತಿದ್ದಂತೆ ಅಕ್ಕಪಕ್ಕದಲ್ಲಿ ಜಮಾಯಿಸಿದ್ದ ಮಕ್ಕಳು ಹೂಗಳನ್ನು ಎಸೆದು ಭರ್ಜರಿ ಸ್ವಾಗತ ಕೋರಿದರು.
910
ತಿರುಚನಾಪಳ್ಳಿಯ ಶ್ರೀ ರಂಗನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಸಾಗುವ ವೇಳೆ ಅವರನ್ನು ನೋಡಲು ಉತ್ಸಾಹದಿಂದ ನಿಂತಿದ್ದ ಮಹಿಳೆಯರು
1010
ತನ್ನ ಮೊಮ್ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೋರಿಸುತ್ತಿರುವ ವೃದ್ಧ. ಈ ದೈಶ್ಯ ಕಂಡಿದ್ದು ತಮಿಳುನಾಡಿನಲ್ಲಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ