ಆಯೋಧ್ಯೆಯಲ್ಲಿ ರಾಮಲಲ್ಲಾ ಬೆಳ್ಳಿ ಮೂರ್ತಿ ಮೆರವಣಿಗೆ, ದರ್ಶನ ಪಡೆದು ಪುನೀತರಾದ ಜನ!

First Published Jan 17, 2024, 8:15 PM IST

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ಈಗಾಗಲೇ ಪೂಜೆಗಳು ಆರಂಭಗೊಂಡಿದೆ. ಇಂದು ಬೆಳ್ಳಿಯ ರಾಮಲಲ್ಲಾ ಮೂರ್ತಿಯ ಮೆರವಣಿಗೆ ಮಾಡಲಾಗಿದೆ.ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ರಾಮಲಲ್ಲಾ ಮೂರ್ತಿ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದರ್ಶನ ಪಡೆದಿದ್ದಾರೆ.
 

ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆ ಕೆಲವೇ ದಿನ ಮಾತ್ರ ಬಾಕಿ. ಜ.16ರಿಂದಲೇ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಎರಡನೇ ದಿನವಾದ ಇಂದು ಮಹತ್ವದ ಪೂಜೆಗಳ ಬಳಿಕ ಇದೀಗ ಭಗವಾನ್ ರಾಮ ಲಲ್ಲಾ ಬೆಳ್ಳಿಯ ಮೂರ್ತಿಯ ಮೆರವಣಿಗೆ ಮಾಡಲಾಗಿದೆ.

ಆಯೋಧ್ಯೆ ರಾಮ ಮಂದಿರ ಆವರಣದಲ್ಲಿ ರಾಮ ಲಲ್ಲಾ ಮೂರ್ತಿಯ ಮೆರವಣಿಗೆ ಮಾಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ರಾಮಲಲ್ಲಾ ದರ್ಶನ ಪಡೆದಿದ್ದಾರೆ.
 

Latest Videos


ಹೂವುಗಳಿಂದ ಅಲಂಕಾರಗೊಂಡ ರಾಮ ಲಲ್ಲಾ ಬೆಳ್ಳಿ ಮೂರ್ತಿಯನ್ನು ಮೆರವಣಿ ಮಾಡಲಾಗಿದೆ. ಅರ್ಚಕರು ರಾಮ ಲಲ್ಲಾ ಮೂರ್ತಿ ಎತ್ತಿಕೊಂಡು ಮೆರವಣಿ ಮಾಡಿದ್ದಾರೆ. ಇದೇ ವೇಳೆ ಕಲಷದ ಮೂಲಕ ಪೂರ್ಣಕುಂಭ ಸ್ವಾಗತ ಮಾಡಲಾಗಿದೆ.
 

ಭಗವನ್ ರಾಮ ಲಲ್ಲಾ ಮೂರ್ತಿ ಮೆರವಣಿ ವೇಳೆ ಭಕ್ತರು ಕಾಣಿಕೆ ಸಲ್ಲಿಸಿ ಶ್ರೀರಾಮ ಆಶೀರ್ವಾದ ಪಡೆದಿದ್ದಾರೆ. ಆಯೋಧ್ಯೆ ಆವರಣದಲ್ಲಿ ಈ ಮೆರವಣಿ ನಡೆಸಲಾಗಿದೆ.

ಆರಂಭದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಆಯೋಧ್ಯೆ ನಗರಿಯಲ್ಲಿ ರಾಮ ಲಲ್ಲಾ ಮೂರ್ತಿ ಮೆರವಣಿಗೆ ಮಾಡಲು ಉದ್ದೇಶಿಸಿತ್ತು. ಆದರೆ ಭದ್ರತಾ ಎಜೆನ್ಸಿಗಳಿಂದ ಸುರಕ್ಷತಾ ಎಚ್ಚರಿಕೆ ಬಂದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಬಿಡಲಾಯಿತು.

ಆಯೋಧ್ಯೆ ನಗರಿಯಲ್ಲಿ ಮೆರವಣಿ ಮಾಡುವುದರಿಂದ ನಿಯಂತ್ರಸಲು ಸಾಧ್ಯವಾಗದ ಭಕ್ತರು ಸೇರಲಿದ್ದಾರೆ. ಈ ವೇಳೆ ಎಲ್ಲರಿಗೂ ಸೂಕ್ತ ಭದ್ರತೆ ಒದಗಿಸುವುದು ಸವಾಲಾಗಲಿದೆ ಎಂದು ಎಜೆನ್ಸಿಗಳು ಸೂಚಿಸಿತ್ತು.
 

ಜನವರಿ 16ರಂದು ರಾಮ ಮಂದಿರದಲ್ಲಿ ಪ್ರಾಯಶ್ಚಿತ್ತ. ಕರ್ಮ ಕುಟಿ ಪೂಜೆಗಳನ್ನು ಮಾಡಲಾಗಿದೆ. ದೇಗುಲದ ಪೂಜಾ ವಿಧಿಗಳನ್ನು ಗಣೇಶ ಶಾಸ್ತ್ರಿಗಳ ಉಸ್ತುವಾರಿಯಲ್ಲಿ 21 ಆಚಾರ್ಯರು ನಡೆಸುತ್ತಿದ್ದಾರೆ.
 

ಇಂದು ಬೆಳಗ್ಗೆ ವಿಘ್ನ ವಿನಾಶಕ ಗಣೇಶನಿಗೆ ಪೂಜೆ ಸಲ್ಲಿಸಿ ಬಳಿಕ ರಾಮಲಲ್ಲಾ ವಿಗ್ರಹದ ಪರಿಸರ ಪ್ರವೇಶ  ನಡೆಸಲಾಗಿತ್ತು.ಬಳಿಕ ತೀರ್ಥ ಪೂಜೆ ನೆರವೇರಿಸಲಾಗಿದೆ. ಇದಾದ ಬಳಿಕ ರಾಮ ಲಲ್ಲಾ ಮೆರವಣಿಗೆ ಮಾಡಲಾಗಿದೆ.
 

click me!