'ಆದಿ ಅನಂತ ಶಿವ...' ಕೇದಾರನಾಥದ ಶಿವಸ್ಥಳದಲ್ಲಿ ಮೋದಿ!

First Published Oct 21, 2022, 12:33 PM IST

ಆದಿಯೂ ಶಿವ, ಅಂತ್ಯವೂ ಶಿವ.. ಶಿವನೆಂದರೆ ವಿನಾಶ. ಶಿವನೆಂದರೆ ಪ್ರಶಾಂತ.. ದೇಶದ ಪ್ರಖ್ಯಾತ ಶಿವನ ಆರಾಧನೆ ಸ್ಥಳಗಳಲ್ಲಿ ಒಂದಾದ ಉತ್ತರಾಖಂಡದ ಕೇದಾರನಾಥ ಹಾಗೂ ಬದ್ರಿನಾಥ ದೇಗುಲಗಳಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಅದರ ಚಿತ್ರಗಳು ಇಲ್ಲಿವೆ

ಎರಡು ದಿನಗಳ ಉತ್ತರಾಖಂಡ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಶುಕ್ರವಾರ ಕೇದಾರನಾಥಕ್ಕೆ ಆಗಮಿಸಿದರು. ಈ ವೇಳೆ ಹಿಮಾಚಲ ಪ್ರದೇಶದ ಚಂಬಾದ ಮಹಿಳೆಯರು ಉಡುಗೊರೆಯಾಗಿ ನೀಡಿದ 'ಚೋಳ ಡೋರಾ' ಉಡುಪನ್ನು ಧರಿಸಿದ್ದರು.

ದೇಶದ ಅತೀ ಉದ್ದದ ರೋಪ್‌ವೇ ಚಾಲನೆ ನೀಡುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ದೇಗುಲಕ್ಕೆ ತೆರಳಿ ಕೇದಾರನಾಥನಿಗೆ ಪೂಜೆಯನ್ನು ಸಲ್ಲಿಸಿದ್ದರು.

Latest Videos


ಡೆಹ್ರಾಡೂನ್‌ನ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ. ಅವರನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಅವರು ಬರಮಾಡಿಕೊಂಡಿದ್ದರು.

ಕೇದಾರನಾಥದಲ್ಲಿ ರೋಪ್‌ವೇ ಸುಮಾರು 9.7 ಕಿಮೀ ಉದ್ದವಿರುತ್ತದೆ ಮತ್ತು ಗೌರಿಕುಂಡವನ್ನು ಕೇದಾರನಾಥಕ್ಕೆ ಸಂಪರ್ಕಿಸುತ್ತದೆ, ಎರಡು ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು ಪ್ರಸ್ತುತ ಆರು-ಏಳು ಗಂಟೆಗಳಿಂದ ಕೇವಲ 30 ನಿಮಿಷಗಳಿಗೆ ಕಡಿಮೆ ಮಾಡುತ್ತದೆ.

ಮಾನಾ ಗ್ರಾಮದಲ್ಲಿ ರಸ್ತೆ ಮತ್ತು ರೋಪ್‌ವೇ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿ, ರಿವರ್‌ಫ್ರಂಟ್‌ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.

Narendra Modi

ಕೇದಾರನಾಥ ದೇಗುಲದಲ್ಲಿ ಪೂಜೆ ನೆರವೇರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿಯೇ ಕುಳಿತು ಕೆಲ ಹೊತ್ತು ಧ್ಯಾನವನ್ನೂ ಮಾಡಿದರು.

ಕೇದಾರನಾಥದಲ್ಲಿ ಪೂಜೆ ಹಾಗೂ ಶಂಕುಸ್ಥಾಪನೆಗಳ ಬಳಿಕ ಬೆಳಗ್ಗೆ 11.30ರ ವೇಳೆಗ ಬದ್ರಿನಾಥ ದೇಗುಲವನ್ನು ತಲುಪಿದರು. ಅಲ್ಲಿಯೂ ದರ್ಶನ ಹಾಗೂ ಪೂಜೆಯನ್ನು ಮಾಡಿದ್ದಾರೆ.
 

Narendra Modi

ಕೇದಾರನಾಥಕ್ಕೆ ಇದು ಪ್ರಧಾನಿ ನರೇಂದ್ರ ಮೋದಿ ಅವರ ಆರನೇ ಭೇಟಿಯಾಗಿದೆ. ಪ್ರತಿ ಬಾರಿಯೂ ಇಲ್ಲಿ ಬಂದಾಗ ಅವರು ಪೂಜೆ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ಆದ ಬಳಿಕ ಬದ್ರಿನಾಥಕ್ಕೆ ಅವರ 2ನೇ ಭೇಟಿ.

Narendra Modi

ದೇಶದ ಎರಡು ಪ್ರಖ್ಯಾತ ಗಿರಿಧಾಮಗಳ ಮೇಲಿರುವ ದೇಗುಲಕ್ಕೆ ಪ್ರಧಾನಿ ಭೇಟಿಯ ಹಿನ್ನಲೆಯಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಸ್ಥಳೀಯ ಸೇನಾ ತುಕಡಿಗಳು ಗರಿಷ್ಠ ಮಟ್ಟದ ಭದ್ರತೆ ಒದಗಿಸಿದ್ದವು.

Narendra Modi

ಈ ಭೇಟಿಯ ವೇಳೆ, ಕೇದಾರನಾಥದಲ್ಲಿರುವ ಆದಿಗುರು ಶಂಕರಾಚಾರ್ಯ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗಳ ಪರಿಶೀಲನೆಯನ್ನು ಮಾಡಿದ್ದಾರೆ.

Narendra Modi

ಆದಿಗುರು ಶಂಕರಾಚಾರ್ಯ ಅವರ ಸಮಾಧಿ ಸ್ಥಳವನ್ನು ಅದ್ಭುತವಾಗಿ ಅಭಿವೃದ್ಧಿ ಮಾಡಲಾಗುತ್ತಿದ್ದು ಅವರ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

Narendra Modi

ಕೇದಾರನಾಥದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ 'ಶ್ರಮಜೀವಿ'ಗಳೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು.

click me!